ಕೇಂದ್ರದಿಂದ 50 ಸಾ. ಕೋಟಿ ಅವ್ಯವಹಾರ, ಮೋದಿ

ಬಿಜೆಪಿ ಮತ್ತು ಶಿವಸೇನೆಯ ಜಂಟಿ ಚುನಾವಣೆಯ ಪ್ರಚಾರ ಕಾರ್ಯವನ್ನು ಇಲ್ಲಿಂದ ಭಾರಿ ಸಾರ್ವಜನಿಕ ಸಭೆಯ ಮೂಲಕ ಆರಂಭಿಸಿದ ಅವರು ಕೇಂದ್ರ ಯುಪಿಎ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ಸಿಎಜಿ ವರದಿಯ ಪ್ರಕಾರ ಕಾಣೆಯಾಗಿರುವ ಭಾರಿ ಮೊತ್ತದ ಈ ಹಣ ಎಲ್ಲಿ ಹೋಗಿದೆ ? ಸರ್ಕಾರ ಇದನ್ನು ಯಾತಕ್ಕೆ ಬಳಸಿಕೊ೦ಡಿದೆ ಎಂದು ಪ್ರಶ್ನಿಸಿದ ಮೋದಿ, ಇದನ್ನು ಚುನಾವಣಾ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆಯೇ ಅಥವಾ ಯಾವುದಾದರೂ ಸಂಬಂಧಪಟ್ಟ ಎನ್‌ಜಿಒಗಳಿಗೆ ನೀಡಲಾಗಿದೆಯೇ ಎಂಬುದನ್ನು ಪ್ರಧಾನಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಬ್ಬ ಅರ್ಥಶಾಸ್ತ್ರಜ್ಞರಾಗಿ ಮನಮೋಹನ್ ಮೇಲೆ ನನಗೆ ಗೌರವವಿದೆ. ಆದರೆ ಅವರು ನರಸಿಂಹರಾವ್ ಸರ್ಕಾರದಲ್ಲಿ ಮನಮೋಹನ್ ಹಣಕಾಸು ಮಂತ್ರಿಯಾಗಿದ್ದಾಗ ಹರ್ಷದ್ ಮೆಹ್ತಾ ಹಗರಣ ನಡೆಯಿತು. ಈಗ ಅವರು ಪ್ರಧಾನಿಯಾಗಿರುವಾಗ ಸತ್ಯಮ್ ಹಗರಣ ನಡೆದಿದೆ. ಅವರ ಅಧಿಕಾರದ ಅವಧಿಯಲ್ಲಿ ಯಾಕಿಂತ ಘಟನೆಗಳು ನಡೆಯುತ್ತಿವೆ ? ಇದು ಅವರ ಸರಕಾರದ ಆರ್ಥಿಕ ನೀತಿಯ ಫಲವೇ ಅಥವಾ ಬೇರೆ ಏನಾದರು ಕಾರಣಗಳಿರಬಹುದೇ ಎಂದು ವ್ಯಂಗ್ಯವಾಡಿದರು.
(ದಟ್ಸ್ ಕನ್ನಡ ವಾರ್ತೆ)
ಬಿಜೆಪಿ-ಶಿವಸೇನೆ ಬಿಕ್ಕಟ್ಟು ಶಮನ











Click it and Unblock the Notifications