ಯತ್ನಾಳ್ ತಪ್ಪನ್ನು ತಿದ್ದಿಕೊಳ್ಳಲಿ, ಯಡಿಯೂರಪ್ಪ

ಕಳೆದೆರೆಡು ವಾರಗಳಿಂದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದಗೌಡ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಯತ್ನಾಳ್, ಬಿಜೆಪಿ ಉಳಿಸಿ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಯಡಿಯೂರಪ್ಪ ಅವರ ಸರ್ವಾಧಿಕಾರಿ ಧೋರಣೆಯಿಂದ ಪಕ್ಷದ ಮುಖಂಡರಲ್ಲಿ ಅಸಮಾಧಾನ ಮನೆ ಮಾಡಿದೆ ಎನ್ನುವುದು ಅವರ ಆರೋಪವಾಗಿದೆ.
ಯತ್ನಾಳ್ ಅವರು ಸಂಸದರಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿತ್ತು. ಆದರೆ, ಅನೇಕ ಸಲ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಗೊತ್ತಿರುವ ಸಂಗತಿ. ಇದರ ಜೊತೆಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಸವನ ಬಾಗೇವಾಡಿಯಿಂದ ಸೋಲು ಕಂಡಿದ್ದಾರೆ. ಹಾಗೂ ಈ ಸಲ ಬಿಜಾಪುರ ಲೋಕಸಭೆ ಕ್ಷೇತ್ರ ಮೀಸಲು ಕ್ಷೇತ್ರವಾಗಿದೆ. ಇಷ್ಟೆಲ್ಲಾ ತಿಳಿದಿರುವ ಅವರು, ತಮ್ಮ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಹಿರಿಯರಾಗಿರುವ ಸಂಸದ ಮಲ್ಲಿಕಾರ್ಜುನಯ್ಯ ಹಾಗೂ ಬಿಬಿ ಶಿವಪ್ಪ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆಯನ್ನು ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಬಿಜೆಪಿಯಲ್ಲಿ ಎದ್ದಿದ್ದ ಬೆಂಕಿ ಶಮನಗೊಳಿಸಿದೆ ಸಿಎಂ
ಅನಂತ್ ಜೊತೆ ಭಿನ್ನಾಭಿಪ್ರಾಯವಿಲ್ಲ, ಬಿಎಸ್ ವೈ











Click it and Unblock the Notifications