ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ರಾಘವೇಂದ್ರ ಸ್ಪರ್ಧೆ

BY Raghavendra
ಬೆಂಗಳೂರು. ಫೆ. 27 : ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮುಂದೊಂದು ದಿನ ತಮ್ಮ ನಿಲುವು ತೊಡರುಗಾಲು ಆಗುವುದು ಎಂದು ಉಹಿಸಿರಲಿಲ್ಲ. ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ತಮ್ಮಪುತ್ರ ರಾಘವೇಂದ್ರನನ್ನು ಕಣಕ್ಕಿಳಿಸುವ ಕುರಿತು ಒಲ್ಲದ ಮನಸ್ಸಿನಿಂದ ರಾಘು ಸ್ಪರ್ಧಿಸಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ, ಗೆಲ್ಲುವು ಕುದುರೆಯ ತಲಾಶೆಯಲ್ಲಿರುವ ಬಿಜೆಪಿ ವರಿಷ್ಠರಿಗೆ ಸಿಎಂ ಪುತ್ರ ರಾಘವೇಂದ್ರ ಸರಿಯಾದ ಶಿಕಾರಿ ಎಂದು ಮನದಟ್ಟಾಗಿದೆ.

ಇದರೊಂದಿಗೆ ಕಳೆದ ಒಂದು ತಿಂಗಳಿಂದ ನಡೆದಿದ್ದ ಹಗ್ಗಜಗ್ಗಾಟದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜಯ ಸಿಕ್ಕಂತಾಯಿತು. ತಾವು ಅಧಿಕಾರದಲ್ಲಿ ಇರುವಾಗಲೇ ಕುಮಾರಪರ್ವ ಅರಂಭಿಸಬೇಕು ಎಂಬ ಅವರ ಮಹತ್ವಾಕಾಂಕ್ಷೆಗೆ ಜೀವ ಬಂದಂತಾಗಿದೆ. ಬುಧವಾರವಷ್ಟೆ ದೇವರಾಣೆಗೂ ತಮ್ಮ ಪುತ್ರ ಸ್ಪರ್ಧಿಸಲ್ಲ ಎಂದು ಹೇಳಿದ್ದರು. ಆದರೆ, ಪಕ್ಷದ ಹೈಕಮಾಂಡ್ ರಾಘವೇಂದ್ರರ ಹೆಸರನ್ನೇ ಅಂತಿಮಗೊಳಿಸಿರುವ ಮಾಹಿತಿ ಬಂದಿರುವುದು ಆಶ್ಚರ್ಯ ಮೂಡಿಸಿದೆ.

ಮುಖ್ಯಮಂತ್ರಿ ತವರು ಕ್ಷೇತ್ರವಾದ್ದರಿಂದ ಇಲ್ಲಿ ಗೆಲ್ಲುವ ಅನಿವಾರ್ಯತೆ ಯಡಿಯೂರಪ್ಪ ಅವರಿಗಿದೆ. ಅಲ್ಲದೇ, ಕಾಂಗ್ರೆಸ್ ನಿಂದ ಬಂಗಾರಪ್ಪ ಸ್ಪರ್ಧಿಸುವ ಲಕ್ಷಣ ಇರುವುದರಿಂದ ಅಖಾಡ ಮತ್ತೊಮ್ಮೆ ರಾಷ್ಟ್ರೀಯ ಸುದ್ದಿಯಾಗುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಸರ್ಕಾರ, ಈಡಿಗರ ಮತಗಳಿಗೆ ಕೈಹಾಕಿದೆ. ಈಡಿಗ ಸಮಾಜದ ಒಬ್ಬ ಶಾಸಕ, ಒಬ್ಬ ಸಚಿವನನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವ ಸಾಧ್ಯತೆ ಇದೆ. ಹಾಗೂ ಈ ಸಮುದಾಯಕ್ಕೆ ಪಟ್ಟಣದ ಹೃದಯ ಭಾಗದಲ್ಲಿರುವ ಒಂದು ಎಕರೆ ಜಮೀನು ನೀಡಿರುವುದು ರಾಜಕೀಯ ಫಸಲು ತೆಗೆಯುವ ಲೆಕ್ಕಾಚಾರದಲ್ಲಿ ಯಡಿಯೂರಪ್ಪ ಮಗ್ನರಾಗಿದ್ದಾರೆ ಎನ್ನಲಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಗ್ಯಾಲರಿ :ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸಿಎಂ ಕುಟುಂಬ
ಲೋಕಸಭೆ ಚುನಾವಣೆ, ಬಿಜೆಪಿ 2ನೇ ಪಟ್ಟಿ ಬಿಡುಗಡೆ
ಲೋಕಸಭೆಗೆ ರಾಘವೇಂದ್ರ ಸ್ಪರ್ಧಿಸಲ್ಲ, ಯಡಿಯೂರಪ್ಪ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+