ಮೂರು ಅಕ್ರಮ ವಜ್ರ ವ್ಯಾಪಾರಿಗಳ ಬಂಧನ
ಬೆಂಗಳೂರು, ಫೆ. 27 : ಮಹತ್ವದ ಕಾರ್ಯಚರಣೆವೊಂದರಲ್ಲಿ ನಗರದ ನ್ಯೂಲೈಟ್ ಹೋಟೆಲ್ ಮೇಲೆ ಶುಕ್ರವಾರ ದಾಳಿ ನಡೆಸಿ ಅಕ್ರಮವಾಗಿ ವಜ್ರಾಭರಣಗಳನ್ನು ಮಾರಾಟ ಮಾಡುವ ಮೂವರು ಆರೋಪಿಗಳನ್ನು ಬಂಧಿಸಿದ್ದು, ಕೋಟ್ಯಂತರ ಬೆಲೆ ಬಾಳುವ ವಜ್ರಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಮಹದೇವಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಜಿಎಫ್ ನ ವೆಂಕಟೇಶ್, ಕನಕಪುರದ ಉಮೇಶ್ ಹಾಗೂ ಆಂಧ್ರಪ್ರದೇಶದ ರಾಜು ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣದ ಪ್ರಮುಖ ವ್ಯಕ್ತಿಯಾಗಿರುವ ಪಾರ್ಥಸಾರಥಿ ಎಂಬುವವರು ಪರಾರಿಯಾಗಿದ್ದಾರೆ. ಆರೋಪಿಗಳಿಂದ ವಜ್ರದ ಹವಳ, ಆನೆ ದಂತದಿಂದ ಮಾಡಿರುವ ವಾಕಿಂಗ್ ಸ್ಟೀಕ್, ಎಮರಾಲ್ಡ್ ಮುತ್ತು ಸೇರಿದಂತೆ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪರಾರಿಯಾಗಿರುವ ಪಾರ್ಥಸಾರಥಿ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದು, ಶೀಘ್ರದಲ್ಲಿ ಬಂಧಿಸುವುದಾಗಿ ಹೇಳಿದ್ದಾರೆ. ಪೊಲೀಸರು ವಶಪಡಿಸಿಕೊಂಡಿರುವ ವಸ್ತುಗಳ ಕೋಟ್ಯಾಂತರ ರುಪಾಯಿ ಬೆಲೆ ಬಾಳಲಿವೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications