ರೇಣುಕಾ ವಿರುದ್ಧ ಎಫ್ ಐಆರ್ ಗೆ ಮೀನಾಮೇಷ
ಮಂಗಳೂರು, ಫೆ.20: ಮಂಗಳೂರು ತಾಲಿಬಾನೀಕರಣ ಗೊಂಡಿದೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಕ್ಕಿಕೊಂಡಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ರೇಣುಕಾ ಚೌಧರಿ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ನಗರದ 3ನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಮಂಗಳೂರು ಗ್ರಾಮಾಂತರ ಪೊಲೀಸರು ಮಾತ್ರ ರೇಣುಕಾ ವಿರುದ್ಧ ಎಫ್ ಐಆರ್ ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ.
ನಗರದ ಮೇಯರ ಗಣೇಶ್ ಹೊಸಬೆಟ್ಟು ಸೇರಿದಂತೆ ಹಲವಾರು ಮಂದಿ ನ್ಯಾಯಾಲಯದಲ್ಲಿ ರೇಣುಕಾ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸಚಿವೆ ಚೌಧುರಿ ವಿರುದ್ಧ ಈ ಕೂಡಲೇ ಎಫ್‌ಐಆರ್ ದಾಖಲಿಸಿ ಎಂದು ಮಂಗಳೂರು ಗ್ರಾಮಾಂತರ ಪೊಲೀಸರಿಗೆ ಬುಧವಾರವೇ ಆದೇಶ ನೀಡಿತ್ತು.
ಮೂಲಗಳ ಪ್ರಕಾರ ಪೋಲಿಸ್ ಇಲಾಖೆ ಗೃಹ ಖಾತೆಯ ನಿರ್ದೇಶನಕ್ಕಾಗಿ ಕಾಯುತ್ತಿದೆ ಎಂದು ತಿಳಿದುಬಂದಿದೆ. ರೇಣುಕಾ ಅವರನ್ನು ಪೊಲೀಸರು ಬಂಧಿಸಿದರೆ ಕಾಂಗ್ರೆಸ್ ಇದರ ರಾಜಕೀಯ ಲಾಭ ಪಡೆದುಕೊಳ್ಳ ಬಹುದು ಎಂದು ಸರಕಾರ ಚಿಂತನೆ ನಡೆಸುತ್ತಿದೆ ಎಂದು ಉನ್ನತ ಮೂಲಗಳ ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)
ಮಂಗಳೂರು ಘಟನೆ ಕ್ರೂರ: ಸಚಿವೆ ರೇಣುಕಾ
ಹುಡುಗಿಯರ ಥಳಿಸಿದ ರಾಮಸೇನಾ ಕಾರ್ಯಕರ್ತರು












Click it and Unblock the Notifications