ಐಐಎಸ್ ಸಿ ನಿವೃತ್ತ ಪ್ರಾಧ್ಯಾಪಕ ಸೇರಿ ಮೂವರ ಕೊಲೆ
ಬೆಂಗಳೂರು, ಫೆ. 16 : ಜಯನಗರದ ಮೂರು ಮಹಿಳೆಯರ ಕೊಲೆ ಪ್ರಕರಣ ನಡೆದ ಬೆನ್ನಲ್ಲೇ ಮತ್ತೊಂದು ತ್ರಿವಳಿ ಕೊಲೆ ಪ್ರಕರಣ ಇಂದು ನಡೆದಿದೆ. ಬೆಂಗಳೂರಿನಲ್ಲಿ ಕೊಲೆಗಳ ಸರಣಿಗಳ ಮುಂದುವರಿದ ಭಾಗವಾಗಿ ಸೋಮವಾರ ಐಐಎಸ್ ಸಿ ಯ ನಿವೃತ್ತ ಪ್ರಾಧ್ಯಾಪಕ ಸೇರಿ ಅವರ ಪತ್ನಿ ಹಾಗೂ ಮಗನನ್ನು ವೈರ್ ಮೂಲಕ ಕುತ್ತಿಗೆ ಬಿಗಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆರ್ ಟಿ ನಗರದ ಮುಖ್ಯ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ.
ಐಐಎಸ್ ಸಿ ನಿವೃತ್ತ ಪ್ರಾಧ್ಯಾಪಕ ಪಿ. ಎಲ್. ಸಚ್ ದೇವ್(69), ಪತ್ನಿ ರೀಟಾ(64) ಹಾಗೂ ಮಗ ಮುನ್ನಾ(35) ಹತ್ಯೆಗೀಡಾಗಿರುವ ದುರ್ದೈವಿಗಳಾಗಿದ್ದಾರೆ. ಹಿರಿಯ ಅಧಿಕಾರಿಗಳು ದಂಡೇ ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಪಂಜಾಬ ಮೂಲದವರಾದ ಸಚ್ ದೇವ್, ಬೆಂಗಳೂರಿನಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಿದ್ದರು. ಮನೆಯಲ್ಲಿದ್ದ ದತ್ತು ಪುತ್ರ ಅನುರಾಗ್ ಪರಾರಿಯಾಗಿದ್ದಾನೆ. ಅನುರಾಗ್ ಮಾದಕ ವ್ಯಸನಿಯಾಗಿದ್ದ ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮುನ್ನಾ ಅಂಗವಿಕಲನಾಗಿದ್ದ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications