235111ಶಿಕ್ಷಣಶಿಕ್ಷಣ ನೀರಾವರಿ ಕೃಷಿಗೆ ಸಿಂಹಪಾಲು/news/2009/02/20/farming-education-gets-big-slice-ktaka-budget-09.htmlಬೆಂಗಳೂರು, ಫೆ.20: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 4 ನೇ ಬಜೆಟ್ ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದ್ದಾರೆ. ಎಂದಿನಂತೆ ಕೃಷಿ, ಶಿಕ್ಷಣ, ಗ್ರಾಮೀಣಾಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಜೊತೆಗೆ ಈ ಬಾರಿ ನಗರಾಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅಮೃತಮಹೋತ್ಸವ ಹಬ್ಬ ಆಚರಿಸುತ್ತಿರುವ ಕನ್ನಡ ಚಲನಚಿತ್ರರಂಗಕ್ಕೆ ಅತಿ ಕಡಿಮೆ ಅನುದಾನ ಲಭ್ಯವಾಗಿದೆ. ಒಟ್ಟಾರೆಯಾಗಿ ಭೂಮಿ ನೀರು, ವಿದ್ಯುತ್ 34772http://kannada.oneindia.com/img/2009/02/20-bsy-budget1.jpg235111ಶಿಕ್ಷಣಬೆಳಗದ ಹಣತೆಗಳು/nri/poem/2009/0728-life-without-future-venkatesh-dodmane.htmlಸರಿಯಾಗಿ ಹದಿನಾಲ್ಕು ವರ್ಷಗಳ ಹಿ೦ದೆ, ನನ್ನ ಮನ ಕಲಕಿದ ಒ೦ದು ದೃಶ್ಯವನ್ನು ಅಕ್ಷರಗಳಲ್ಲಿ ಸೆರೆಹಿಡಿದಿದ್ದು ಹೀಗೆ.* ವೆ೦ಕಟೇಶ್ ದೊಡ್ಮನೆಹರಕು ಚಾಪೆಯಮೇಲೆಸುಖನಿದ್ರೆ ಉ೦ಡ ಸಣ್ಣಮರಿ ಛ೦ಗನೆ ಎದ್ದುಹೊರಟಿತು ಪುಟ್ಟ ಪುಟ್ಟ ಹೆಜ್ಜೆ ಇಡುತಕೈಯಲ್ಲಿ ಕಣ್ಣು ಮೂಗು ಉಜ್ಜುತ...ಮರಳುಗುಡ್ಡೆಯ ಮೇಲೆ ಹೊರಳಾಡಿನುಣುಪು ಕಲ್ಲುಗಳ ಹೆಕ್ಕಿಲ೦ಗದ ಮಡುವಿನಲ್ಲಿ ತು೦ಬಿದರೆ ಆಯಿತುಅದಕೊ೦ದು ಆಟ."ಗೊ೦ಬೆ" ಎ೦ದರೆ ಏನು?ಚೆ೦ಡ೦ದರೆ ಏನು?ಬ್ಯಾಟ೦ತೆ, ಏನು ಹಾಗ೦ದರೆ?ಪಕ್ಕದ ಹುಡುಗಿಯ ಪ್ರಶ್ನೆಗೆ 38279http://kannada.oneindia.com/img/2009/07/28-woman-construction1.jpg235111ಶಿಕ್ಷಣಆದರ್ಶ ಶಿಕ್ಷಕರೆಂದರೆ ಯಾರು?/literature/my-karnataka/2009/0904-who-is-best-teacher.htmlಸೆಪ್ಟೆಂಬರ್ 5 ಬಂದರೆ ಮಾಜಿ ರಾಷ್ಟ್ರಪತಿ, ಶಿಕ್ಷಣತಜ್ಞ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತೇವಷ್ಟೇ. ಎಷ್ಟೋ ಸಂವತ್ಸರಗಳು ಉರುಳಿದರೂ ಇಂದಿಗೂ ಕೂಡ ಆದರ್ಶ ಶಿಕ್ಷಕ ಎಂದರೆ ರಾಧಾಕೃಷ್ಣನ್ ಅವರ ಹೆಸರು ಅಥವಾ ದಶಕಗಳ ಹಿಂದಿನ ಧೋತಿ ಉಟ್ಟಕೊಂಡು ಬರುತ್ತಿದ್ದ ಮೇಷ್ಟ್ರುಗಳ ಹೆಸರು ನೆನಪಿಗೆ ಬರುತ್ತವೆಯೇ ಹೊರತು ಇಂದಿನ ಕಾಲದ ಶಿಕ್ಷಕರು ನೆನಪಿಗೆ ಏಕೆ ಬರುತ್ತಿಲ್ಲ? 39004http://kannada.oneindia.com/img/2009/09/04-sarvapalli-radhakrishnan1.jpg235111ಶಿಕ್ಷಣಭಯೋತ್ಪಾದನೆ ವಿರುದ್ಧ ಯಾರು ಹೋರಾಡಬೇಕು?/cj/mathur-raghu/2009/0921-who-should-fight-against-terrorism-in-india.htmlಭಯೋತ್ಪಾದನೆಯಂಥ ಬೃಹತ್ ಸಮಸ್ಯೆಗಳನ್ನ ಎದುರಿಸುತ್ತಿರುವ, ಭಯೋತ್ಪಾದನೆಯ ಕಾರಣದಿಂದ ಪ್ರತಿದಿನವೂ ಮಾನವಬಲಿ ಕೊಡುತ್ತಿರುವ, ಹೀಗಾಗಿಯೂ ಸ್ವಾರ್ಥಕ್ಕೋಸ್ಕರ ಭಯೋತ್ಪಾದನೆಯ ವಿರುದ್ಧವೇ ಮೌನ ತಳೆದಿರುವ ಹಲವಾರು ರಾಜಕೀಯ ನಾಯಕರನ್ನು ಹೊಂದಿರುವ ಏಕೈಕ ರಾಷ್ಟ್ರ ಭಾರತ!ಈಗ್ಗೆ ಕೆಲ ದಿನಗಳ ಹಿಂದೆ, ಅಮೆರಿಕದ ತಪಾಸಣಾ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಹಿಂದಿ ಚಿತ್ರರಂಗದ ಮೇರು ನಟ ಶಾರುಖ್ ಖಾನ್‌ರವರ ಜತೆ ನಡೆದುಕೊಂಡ ರೀತಿ ಎಂಥಹವನಿಗೂ ರೋಷ 39298http://kannada.oneindia.com/img/2009/09/21-madrasa1.jpg235111ಶಿಕ್ಷಣಮುಸುರೆ ತಿಕ್ಕುವ ಹುಡುಗಿಯ ಕಥೆಗೆ ಕಣ್ಣೀರಾದ ಸಿಎಂ/news/2009/09/22/yeddyurappa-extends-helping-hand-to-poor-student.htmlಬೆಂಗಳೂರು, ಸೆ. 22 : ತಂದೆಯನ್ನು ಕಳೆದುಕೊಂಡು, ಕಸ ಗುಡಿಸುವ ತಾಯಿಯನ್ನು ಹಳ್ಳಿಯಲ್ಲಿ ಬಿಟ್ಟು ಬೆಂಗಳೂರಿನಲ್ಲಿ ದೊಡ್ಡಮ್ಮನೊಂದಿಗೆ ವಾಸಿಸುತ್ತಿರುವ ಮಂಜುಳಾ, ಕಸ-ಮುಸುರೆ ಮಾಡಿಕೊಂಡು ಎರಡು ವರ್ಷ ಕಾಲೇಜಿಗೆ ಹೋಗಿದ್ದಾಳೆ. ಕಂಪ್ಯೂಟರ್ ಸೈನ್ಸ್ ಡಿಪ್ಲೊಮಾದಲ್ಲಿ 71% ಅಂಕ ಗಳಿಸಿದ್ದಾಳೆ. ಈಗ ಬಿ.ಎನ್.ಎಂ.ಐ.ಟಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ಸೆಮೆಸ್ಟರ್ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಕಸ-ಮುಸುರೆ-ಮನೆಗೆಲಸ ಮುಂದುವರೆಸಿದ್ದಾಳೆ. ಕೆಲಸ ಮಾಡುತ್ತಿರುವ ಮನೆಯಲ್ಲೇ ದೊರಕುವ 39322http://kannada.oneindia.com/img/2009/09/22-bsy-manjula1.jpg123437new delhiಬೆಂಗಳೂರಿಗೆ ಎನ್ಎಸ್ ಜಿ ಘಟಕ ಮಂಜೂರು?/news/2009/01/06/will-centre-set-up-nsg-unit-in-bengaluru.htmlನವದೆಹಲಿ, ಜ. 6 : ಸಾಫ್ಟವೇರ್ ತಂತ್ರಜ್ಞರ ತಾಣವಾಗಿರುವ ಬೆಂಗಳೂರಿಗೆ ರಾಷ್ಟ್ರೀಯ ತನಿಖಾ ಘಟಕ (ಎನ್ಎಸ್ ಜಿ) ಸ್ಥಾಪಿಸಬೇಕು ಎನ್ನುವುದು ಎಲ್ಲರ ಅನಿಸಿಕೆ ಹಾಗೂ ಒತ್ತಾಯವಾಗಿದೆ. ತಾಂತ್ರಿಕ, ವೈಜ್ಞಾನಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿದಿರುವ ಬೆಂಗಳೂರಿನ ರಕ್ಷಣೆಗೆ ಎನ್ಎಸ್ ಜಿ ಬೇಕೆಬೇಕು ಎಂದು ಕರ್ನಾಟಕ ಸರ್ಕಾರ ಹಾಗೂ ದೇಶದ ಪ್ರಮುಖ ಐಟಿ ಕಂಪನಿಗಳ ಮುಖ್ಯಸ್ಥರ ಒಕ್ಕೊರಲಿನ ಆಗ್ರಹವೂ ಕೇಂದ್ರ 33913http://kannada.oneindia.com/img/2009/01/06-cm-meets-pm1.jpg123437new delhiನವದೆಹಲಿಯಲ್ಲಿ ದಾಟು ಚಿತ್ರ ಪ್ರದರ್ಶನ/movies/headlines/2009/01/06-daatu-movie-show-karnataka-sangha-new-delhi.htmlರಾಜ್ಯ ಪ್ರಶಸ್ತಿ ವಿಜೇತ(ವಿಶೇಷ ಜ್ಯೂರಿ) ದಾಟು ಚಿತ್ರದ ವಿಶೇಷ ಪ್ರದರ್ಶನವನ್ನು ನವದೆಹಲಿಯ ಕರ್ನಾಟಕ ಸಂಘದಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ಹಾಗೂ ವಾರ್ತಾ ಇಲಾಖೆಯ ಸಹಯೋಗದೊಂದಿಗೆ ಈ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.ಈ ಚಿತ್ರದಲ್ಲಿ ನಿರ್ಮಾಪಕಿ ರೂಪಾ ಅಯ್ಯರ್ ಪ್ರಮುಖ ಪಾತ್ರ ನಿರ್ವಹಿಸಿದ್ದು, ದತ್ತಣ್ಣ, ಕಿರುತೆರೆ ನಟ ರಾಜೇಶ್ ಮುಂತಾದವರಿದ್ದಾರೆ. ಸದಭಿರುಚಿ ಚಿತ್ರಗಳನ್ನು ನೀಡುತ್ತಾ ಬಂದಿರುವ ಶಿವರುದ್ರಯ್ಯ ನವರು 33922http://kannada.oneindia.com/img/2009/01/06-daatu-movie-poster.jpg123437new delhiದೆಹಲಿ ಕನ್ನಡಿಗರಿಗೆ ದಾಟು ಚಿತ್ರದ ಅನುಭವ/movies/headlines/2009/01/0111-daatu-movie-an-overview-caste-conversion.htmlನವದೆಹಲಿ, ಜ. 11: ಚಲನಚಿತ್ರ ಮಾಧ್ಯಮವು ಸಮಾಜಕ್ಕೆ ಹೊಸ ದಿಕ್ಕು ತೋರಿಸುವ, ಬದಲಾವಣೆಗೆ ಕಾರಣವಾಗಬಹುದಾದ ಮಾಧ್ಯಮವಾಗಿದ್ದು, ಅದನ್ನು ಕೆ. ಶಿವರುದ್ರಯ್ಯ ಅವರು ಮಾನವೀಯ ನೆಲೆಯಲ್ಲಿ ಅತ್ಯಂತ ಸಮರ್ಥವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ವಿ. ಗೋಪಿನಾಥ್ ಶನಿವಾರದಂದು ಇಲ್ಲಿ ಹೇಳಿದರು.ಅವರು, ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ದೆಹಲಿಯಲ್ಲಿನ ಕರ್ನಾಟಕ ವಾರ್ತಾ ಕೇಂದ್ರವು ಇಂದು 34008http://kannada.oneindia.com/img/2009/01/11-daatu-dks.jpg123437new delhiಹುಬ್ಬಳಿ -ಧಾರವಾಡ ಮಂದಿ ದೆಹಲಿಗೆ/news/2009/01/15/hubli-dharwad-city-corporation-committee-new-delhi.htmlಹುಬ್ಬಳ್ಳಿ, ಜ. 15 : ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಚೇರಮನ್ ರಾಮಣ್ಣ ಬಡಿಗೇರ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಇತ್ತೀಚೆಗೆ ನವದೆಹಲಿ ಭೇಟಿ ನೀಡಿ ದೆಹಲಿ ಮಹಾನಗರ ಪಾಲಿಕೆ ಮುಖ್ಯ ಇಂಜಿನಿಯರ್ ಪ್ರದೀಪ ಖಂಡೇಲ್ ವಾಲ್ ಅವರೊಂದಿಗೆ ನಗರಾಭಿವೃದ್ಧಿಗೆ ಕುರಿತಂತೆ ಚರ್ಚೆ ನಡೆಸಿದರು. (ದಟ್ಸ್ ಕನ್ನಡ ಸುದ್ದಿ ಚಿತ್ರ)34082http://kannada.oneindia.com/img/2009/01/15-hubli-dharwad-councillors.jpg123437new delhiಶ್ರೀಸಾಮಾನ್ಯನಿಗೆ ನೋವಾಗದಂತೆ ಲಾಲೂ ಬಜೆಟ್/news/2009/02/13/my-budget-will-not-hurt-common-man-lalu.htmlನವದೆಹಲಿ, ಫೆ.13 : ಕೇಂದ್ರ ಸರ್ಕಾರದ ಕೊನೆಯ ರೈಲ್ವೆ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ಇಂದು ಸಂಸತ್ತಿನಲ್ಲಿ ತಮ್ಮ ಕೊನೆಯ ಬಜೆಟ್ ಮಂಡಿಸಲಿದ್ದಾರೆ. ಇತ್ತೀಚೆಗೆ ಭಯೋತ್ಪಾದನೆ ಮೀತಿಮೀರಿರುವ ಹಿನ್ನೆಲೆಯಲ್ಲಿ ಇಲಾಖೆಗೆ ಇನ್ನಷ್ಚು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಆರನೇ ಬಜೆಟ್ ಮಂಡಿಸುತ್ತಿರುವ ಲಾಲು 34622http://kannada.oneindia.com/img/2009/02/13-laloo1e.jpg124510upaಸಾಂಗ್ಲಿಯಾನಾ, ಕುನ್ನೂರು ಕಾಂಗ್ರೆಸ್ ಸೇರ್ಪಡೆ/news/2009/01/21/expelled-ktaka-bjp-leaders-join-congress.htmlನವದೆಹಲಿ, ಜ. 21 : ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿ ಬಿಜೆಪಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಅಮಾನತುಗೊಂಡಿದ್ದ ಮನೋರಮಾ ಮಧ್ವರಾಜ್, ಎಚ್ ಟಿ ಸಾಂಗ್ಲಿಯನಾ ಮತ್ತು ಮಂಜುನಾಥ್ ಕುನ್ನೂರು ಇಂದು ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿಕೊಂಡರು.ಕಳೆದ ವರ್ಷ ಜುಲೈ 22 ರಂದು ಲೋಕಸಭೆಯಲ್ಲಿ ಗೊತ್ತುವಳಿ ಪರವಾಗಿ ಮತ ಚಲಾಯಿಸಿದ್ದರು. ಮನೋರಮಾ ಮಧ್ವರಾಜ್ 34195http://kannada.oneindia.com/img/2009/01/21-sangliyana-congress.jpg124510upaಶ್ರೀಸಾಮಾನ್ಯನಿಗೆ ನೋವಾಗದಂತೆ ಲಾಲೂ ಬಜೆಟ್/news/2009/02/13/my-budget-will-not-hurt-common-man-lalu.htmlನವದೆಹಲಿ, ಫೆ.13 : ಕೇಂದ್ರ ಸರ್ಕಾರದ ಕೊನೆಯ ರೈಲ್ವೆ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ಇಂದು ಸಂಸತ್ತಿನಲ್ಲಿ ತಮ್ಮ ಕೊನೆಯ ಬಜೆಟ್ ಮಂಡಿಸಲಿದ್ದಾರೆ. ಇತ್ತೀಚೆಗೆ ಭಯೋತ್ಪಾದನೆ ಮೀತಿಮೀರಿರುವ ಹಿನ್ನೆಲೆಯಲ್ಲಿ ಇಲಾಖೆಗೆ ಇನ್ನಷ್ಚು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಆರನೇ ಬಜೆಟ್ ಮಂಡಿಸುತ್ತಿರುವ ಲಾಲು 34622http://kannada.oneindia.com/img/2009/02/13-laloo1e.jpg124510upa8 ಆಸ್ಕರ್ ಪ್ರಶಸ್ತಿ ಯಪಿಎ ಸರಕಾರದ ಸಾಧನೆ, ಕಾಂಗ್ರೆಸ್/news/2009/02/24/congress-counts-8oscars-as-part-of-upa-achievement.htmlನವದೆಹಲಿ, ಫೆ. 24 : ಪ್ರಶಸ್ತಿ ಗೆಲ್ಲಲು ಉತ್ತಮ ಕತೆ, ಚಿತ್ರಕತೆ, ಸಂಗೀತ, ನಿರ್ದೇಶನ ಮಾತ್ರ ಇದ್ದರೆ ಸಾಕೇ ಕೇಂದ್ರದಲ್ಲಿ ಉತ್ತಮ ಸರ್ಕಾರವೂ ಬೇಕು ? ಸೋಮವಾರ ಸ್ಲಂಡಾಗ್ ಮಿಲೇನಿಯರ್ ಚಿತ್ರ ಎಂಟು ಆಸ್ಕರ್ ಪ್ರಶಸ್ತಿ ಗಳಿಸಿದ್ದನ್ನು ಕಾಂಗ್ರೆಸ್ ತನ್ನ ಪಕ್ಷದ ಸಾಧನೆ ಎಂದು ಬಿಂಬಿಸತೊಡಗಿದೆ. ಕಳೆದ ಎನ್ ಡಿ ಎ ಸರಕಾರ ಲೋಕಸಭಾ ಚುನಾವಣೆಯ ಸಮಯದಲ್ಲಿ 34835http://kannada.oneindia.com/img/2009/02/24-abhishek-singhvi1.jpg124510upaಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ/news/2009/02/25/end-factionalism-in-congress-sonia-gandhi.htmlನವದೆಹಲಿ, ಫೆ. 25 : ಪಕ್ಷದಲ್ಲಿರುವ ಮುಖಂಡರು ಒಳಜಗಳಗಳನ್ನು ಮರೆತು ಏಕತೆಯಿಂದ ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು. ಕಾಂಗ್ರೆಸ್ಸಿನ 14ನೇ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ತಾಪ, ವೈಮನಸ್ಸು ಕೈಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಜಯಗಳಿಸಲು ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ 34859http://kannada.oneindia.com/img/2009/02/25-sonia-gandhi.jpg124510upaಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ/news/2009/02/26/farewell-session-of-14th-lok-sabha-on-feb26-upa.htmlನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ 34881http://kannada.oneindia.com/img/2009/02/26-india-parliament.jpgnews"> ಶಿಕ್ಷಣಕ್ಕೆ ಹೆಚ್ಚು ಅನುದಾನ ಕೇಂದ್ರಕ್ಕೆ ಕಾಗೇರಿ ಒತ್ತಾಯ | Education Minister Kageri urges centre for more allocation of fund - ಶಿಕ್ಷಣಕ್ಕೆ ಹೆಚ್ಚು ಅನುದಾನ ಕೇಂದ್ರಕ್ಕೆ ಕಾಗೇರಿ ಒತ್ತಾಯ - Kannada Oneindia

ಶಿಕ್ಷಣಕ್ಕೆ ಹೆಚ್ಚು ಅನುದಾನ ಕೇಂದ್ರಕ್ಕೆ ಕಾಗೇರಿ ಒತ್ತಾಯ

ನವದೆಹಲಿ, ಫೆ. 11 : ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ವಿವಿಧ ಬಾಬ್ತುಗಳಡಿಯಲ್ಲಿ ನೀಡುತ್ತಿರುವ ಯೋಜನಾ ಗಾತ್ರವನ್ನು 2009-10ನೇ ಸಾಲಿಗೆ 1568.16 ಕೋಟಿ ರೂ.ಗಳಿಗೆ ಏರಿಸಬೇಕು ಎಂದು ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್ ಅವರನ್ನು ಒತ್ತಾಯಿಸಿದರು.

ಇಲ್ಲಿ ಏರ್ಪಡಿಸಲಾಗಿದ್ದ 55ನೇ ಕೇಂದ್ರ ಶಿಕ್ಷಣ ಸಲಹಾ ಸಮಿತಿಯ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. 2008-09ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಸರ್ವ ಶಿಕ್ಷಾ ಅಭಿಯಾನದಡಿಯಲ್ಲಿ 960.42 ಕೋಟಿ ರೂ.ಗಳನ್ನು ನೀಡಿತ್ತು. ಆದರೆ, ಈ ಬಾರಿ ಹೆಚ್ಚಿನ ಅನುದಾನ ಬೇಕಾಗುತ್ತದೆ. ಯಾಕೆಂದರೆ, ರಾಜ್ಯದಲ್ಲಿ ಈ ಬಾರಿ 'ಕಲಿ- ನಲಿ' ಯೋಜನೆಯನ್ನು 1 ಮತ್ತು 2ನೇ ತರಗತಿಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ. ಜೊತೆಗೆ, ಇದನ್ನು 3 ಮತ್ತು 4ನೇ ತರಗತಿಗಳಿಗೆ 2010-11ನೇ ಸಾಲಿನಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ಶಿಕ್ಷಣದ ದೃಷ್ಟಿಯಿಂದ ಹಿಂದುಳಿದ ಜಿಲ್ಲೆಗಳಲ್ಲಿ ಹೆಚ್ಚು ಪ್ರಮಾಣದ ಶಿಕ್ಷಕರ ನೇಮಕಾತಿ ಮತ್ತು ಇನ್ನಷ್ಟು ಕೊಠಡಿಗಳನ್ನು ಕಟ್ಟಿಸಲು ಅಧಿಕ ಪ್ರಮಾಣದ ಹಣಕಾಸಿನ ನೆರವು ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚು ಅನುದಾನದ ನೆರವು ಕೋರಲಾಗಿದೆ ಎಂದು ಅವರು ಹೇಳಿದರು. ಸರ್ವ ಶಿಕ್ಷಾ ಅಭಿಯಾನದಲ್ಲಿ ರಾಜ್ಯ ಸರ್ಕಾರ ಗಮನಾರ್ಹ ಸಾಧನೆ ಮಾಡಿದೆ. ಆದರೂ, ರಾಜ್ಯಕ್ಕೆ ನೀಡಲಾಗುತ್ತಿರುವ ಅನುದಾನವನ್ನು ಇತರ ರಾಜ್ಯಗಳೊಂದಿಗೆ ಹೋಲಿಸಿ ನೋಡಿದರೆ ತುಂಬ ಕಡಿಮೆ ಪ್ರಮಾಣದಲ್ಲಿ ಇದೆ ಎಂಬುದು ತಿಳಿಯುತ್ತದೆ ಎಂದು ಅವರು ಹೇಳಿದರು.

ಸರ್ವ ಶಿಕ್ಷಾ ಅಭಿಯಾನದ ಮಾನದಂಡದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಪ್ರತ್ಯೇಕ ಅಳತೆಗೋಲು ನಿರ್ಧರಿಸಬೇಕು. ವಿದ್ಯಾರ್ಥಿ- ಶಿಕ್ಷಕರ ಅನುಪಾತವನ್ನು 1:40ರಿಂದ 1:30ಕ್ಕೆ ಇಳಿಸಿ, ಇದರಿಂದ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಲು ಹೆಚ್ಚಿನ ಶಿಕ್ಷಕರ ನೇಮಕಾತಿ ಮಾಡಬೇಕು. ಈ ಅಭಿಯಾನದಡಿ ಅಥವಾ ಶಿಕ್ಷಣ ಇಲಾಖೆಯ ವಿವಿಧ ಯೋಜನೆಗಳಲ್ಲಿ ದೈಹಿಕ ಶಿಕ್ಷಕರ ನೇಮಕಕ್ಕೆ ಮತ್ತು ತರಬೇತಿಗಾಗಿ ಹೆಚ್ಚು ಮಹತ್ವ ನೀಡಬೇಕು ಎಂದು ಒತ್ತಾಯಿಸಿದರು.

11ನೇ ಯೋಜನೆಯಲ್ಲಿ ಶಿಕ್ಷಣಕ್ಕೆ ಕನಿಷ್ಠ ಶೇ 10ರಷ್ಟು ಹಣ ಮೀಸಲಿಡಬೇಕು, ಕರ್ನಾಟಕದ ಬಹು ವರ್ಷಗಳ ಬೇಡಿಕೆಯಾದ ಐಐಟಿಯನ್ನು ರಾಜ್ಯಕ್ಕೆ ಮಂಜೂರು ಮಾಡಬೇಕು, ವಿಜಾಪುರ ಮತ್ತು ತುಮಕೂರು ವಿಶ್ವವಿದ್ಯಾಲಯಗಳಿಗೆ ಯುಜಿಸಿ ಅನುದಾನ ನೀಡಬೇಕು' ಎಂದು ಅವರು ಮನವಿ ಮಾಡಿದರು. ಸಂಸ್ಕೃತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಶಿಕ್ಷಕರ ನೇಮಕಾತಿ, ವಿದ್ಯಾರ್ಥಿ ವೇತನದಲ್ಲಿ ಹೆಚ್ಚಳ. ಕಂಪ್ಯೂಟರ್ ಇತ್ಯಾದಿ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ- ಮುಂತಾದವುಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡಬೇಕು ಎಂದು ಅವರು ಆಗ್ರಹಿಸಿದರು.

ಹೆಚ್ಚು ಅಧಿಕಾರ

ರಾಜ್ಯದಲ್ಲಿ ಐಸಿಎಸ್‌ಇ ಮತ್ತು ಸಿಬಿಎಸ್‌ಸಿ ಶಾಲೆಗಳನ್ನು ನಡೆಸುತ್ತಿರುವ ಹಲವು ಶಾಲೆಗಳ ಆಡಳಿತ ಮಂಡಳಿಗಳು ಯಾವುದೇ ಲಂಗುಲಗಾಮು ಇಲ್ಲದಂತೆ ವರ್ತಿಸುತ್ತಿವೆ. ಮನಬಂದಂತೆ ಅವುಗಳು ಶುಲ್ಕ ವಸೂಲಿ ಮಾಡುತ್ತಿವೆ. ಇದರಿಂದ ಸಮಾಜದ ಎಲ್ಲ ವರ್ಗದ ಜನರಿಗೂ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಬಿಎಸ್‌ಸಿ ಮತ್ತು ಐಸಿಎಸ್‌ಸಿ ಶಾಲೆಗಳ ವ್ಯವಸ್ಥಾಪಕ ಮಂಡಳಿಗಳ ಮೇಲೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಹೆಚ್ಚು ಅಧಿಕಾರಗಳು ಇರಬೇಕು. ಅಂಥ ಅಧಿಕಾರಗಳನ್ನು ರಾಜ್ಯ ಸರ್ಕಾರಗಳಿಗೆ ಕೇಂದ್ರ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಈಗಾಗಲೇ ಗ್ರಾಮೀಣ ಭಾರತದಲ್ಲಿ 43 ಪಾಲಿಟೆಕ್ನಿಕ್ ಪ್ರಾರಂಭಿಸಲು ನಿರ್ಧರಿಸಿದೆ. 11ನೇ ಯೋಜನೆಯಲ್ಲಿ ಇವುಗಳನ್ನು ಒಳಗೊಂಡಂತೆ ಹೆಚ್ಚಿನ ಪಾಲಿಟೆಕ್ನಿಕ್ ಮಂಜೂರಾತಿ ನೀಡಬೇಕು. ರಾಜ್ಯದ 21 ಪದವಿ ಕಾಲೇಜುಗಳಿಗೆ ಮಂಜೂರಾತಿ ನೀಡಬೇಕು. ಜೊತೆಗೆ ಎಸ್‌ಸಿ, ಎಸ್‌ಟಿ ಜನಸಂಖ್ಯೆ ಹೆಚ್ಚಿರುವ ರಾಜ್ಯದ 16 ಜಿಲ್ಲೆಗಳಿಗೆ ಹೆಚ್ಚುವರಿ ಅನುದಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕೇಂದ್ರೀಯ ವಿಶ್ವವಿದ್ಯಾಲಯವನ್ನು ಗುಲ್ಬರ್ಗಾದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರದ ಸಮಿತಿಯೊಂದು ಪರಿವೀಕ್ಷಣೆ ಮಾಡಿದೆ. ಕೂಡಲೇ ಅದಕ್ಕೆ ಅನುಮತಿ ನೀಡಬೇಕು. ಹಾಗೂ ಮೈಸೂರಿನಲ್ಲಿ ವಿಶ್ವದರ್ಜೆಯ ವಿಶ್ವವಿದ್ಯಾಲಯ ಸ್ಥಾಪಿಸಲು ಕೇಂದ್ರೀಯ ಸಮಿತಿಯಿಂದ ಪರಿಶೀಲನೆ ನಡೆಸಿ, ಕೂಡಲೇ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+