ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ. 10 ರಿಂದ ಎಸ್ಎಎಸ್ ತೆರಿಗೆ ಜಾರಿ

By Staff
|
Google Oneindia Kannada News

ಬೆಂಗಳೂರು, ಫೆ. 3 : ಬಿಬಿಎಂಪಿ ವ್ಯಾಪ್ತಿಯಲ್ಲಿ ಫೆ 10 ರಂದು ಸ್ವಯಂ ಘೋಷಿತ ಆಸ್ತಿ ತೆರಿಗೆ (ಎಸ್ಎಎಸ್) ಪದ್ಧತಿ ಜಾರಿಗೆ ಬರಲಿದೆ. ಮೌಲ್ಯವರ್ಧಿತ ತೆರಿಗೆ ಹಾಗೂ ಸ್ವಯಂ ಘೋಷಿತ ಅಸ್ತಿ ತೆರಿಗೆ ಪದ್ಧತಿಗೆ ಸಂಬಂಧಿಸಿದಂತೆ ತೀವ್ರ ಪರ-ವಿರೋಧಗಳು ವ್ಯಕ್ತವಾಗಿದ್ದರಿಂದ ಗೊಂದಲಕ್ಕೆ ಕಾರಣವಾಗಿತ್ತು. ಈಗ 2000ರ ಅನ್ವಯ ಎಸ್ಎಎಸ್ ಪದ್ಧತಿಯಲ್ಲಿ ಆಸ್ತಿ ತೆರಿಗೆ ಪಾವತಿಸಬಹುದು.

ಆಸ್ತಿ ತೆರಿಗೆ ಪಾವತಿಸಲೆಂದೇ 370 ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಇನ್ನು ಮುಂದೆ ಈ ಕೇಂದ್ರಗಳಲ್ಲಿ ಮಾತ್ರ ಆಸ್ತಿ ತೆರಿಗೆ ಪಾವತಿಸಬೇಕು. ಕೇಂದ್ರ ಕಚೇರಿ, ವಲಯ ಕಚೇರಿ ಹಾಗೂ ಬೆಂಗಳೂರು ಒನ್ ಸೆಂಟರ್ ಗಳಲ್ಲಿ ಆಸ್ತಿ ತೆರಿಗೆ ಸ್ವೀಕರಿಸುವುದಿಲ್ಲ. ಪ್ರತಿ ನಾಲ್ಕು ಸಾವಿರ ಆಸ್ತಿಗೊಂದು ಸಹಾಯವಾಣಿ ಕೇಂದ್ರ ತೆರೆಯಲಾಗಿದೆ.

ವಲಯವಾರು ಹಾಗೂ ವರ್ಗವಾರು ತೆರಿಗೆ ದರ ನಿಗದಿಪಡಿಸಲಾಗಿದೆ. ಈ ಮಾಹಿತಿಯನ್ನು ಒಳಗೊಂಡು ಕೈಪಿಡಿ ಇನ್ನ ನಾಲ್ಕು ದಿನದೊಳಗೆ ಈ ಕೇಂದ್ರಗಳಲ್ಲಿ ಲಭ್ಯವಿದೆ. ಅಲ್ಲದೆ, ಬಿಬಿಎಂಪಿಯ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿ ಪಡೆಯಬಹುದು. ತೆರಿಗೆ ಪಾವತಿಸುವ ಅರ್ಜಿಯನ್ನು ಎರಡು ದಿನಗಳಲ್ಲಿ ವೆಬ್ ಸೈಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.

ನಗರದ ಒಟ್ಟು ಆಸ್ತಿಗಳನ್ನು ಎ ಬಿ ಸಿ ಡಿ ಇ ಮತ್ತು ಎಫ್ ಎಂದು ಆರು ವಲಯಗಳಾಗಿ ವರ್ಗೀಕರಿಸಲಾಗಿದೆ. ಇದರ ವ್ಯಾಪ್ತಿಯಲ್ಲಿ ಒಟ್ಟು 20 ಸಾವಿರ ರಸ್ತೆಗಳು ಬರಲಿವೆ. ಬಿಬಿಎಂಪಿ ರಚನೆಯಾದ ಮೇಲೆ ವಲಯಗಳು ಬದಲಾಗಿವೆ. ಅಂತಹ ಕಡೆಗಳಲ್ಲಿ ಶೇ. 20ರಷ್ಟು ಹೆಚ್ಚಳವಾಗಲಿದೆ. ಇದರಂತೆ ಸದಾಶಿವನಗರ ಮತ್ತು ಸೇಂಟ್ ಮಾರ್ಕ್ಸ್ ರಸ್ತೆ ಮತ್ತಿತರ ಕಡೆಗಳಲ್ಲಿ ತೆರಿಗೆ ಹೆಚ್ಚಳವಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಆಸ್ತಿ ತೆರಿಗೆ ಕುರಿತಂತೆ ಹೆಚ್ಚಿನ ವಿವರಗಳಿಗೆ ಈ ಕೊಂಡಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X