ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂಕೋರ್ಟಿನ ಐರಾವತ ನ್ಯಾ. ಬಾಲಕೃಷ್ಣ

By Staff
|
Google Oneindia Kannada News

ನವದೆಹಲಿ, ಡಿ. 4 : ಯಾವುದು ತಪ್ಪು ಯಾವುದು ಸರಿ ಎಂದು ರಾಷ್ಟ್ರಕ್ಕೆ ನೀತಿ ಪಾಠ ಹೇಳುವ ನ್ಯಾಯಮೂರ್ತಿಗಳು ಸರಕಾರದ ಬೊಕ್ಕಸಕ್ಕೆ ದುಬಾರಿ ಆನೆಗಳಾಗಿರುವ ವಿಚಾರ ಬೆಳಕಾಗಿದೆ. ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳ ವಿದೇಶ ಪ್ರವಾಸದ ಬಿಲ್ಲುಗಳನ್ನು ಗಮನಿಸಿದರೆ, ಅಬ್ಬಬ್ಬಾ! ಎಂದು ನೀವೇ ಉದ್ಗಾರ ತೆಗಿಯುತ್ತೀರಿ.

ಮಾಹಿತಿ ಹಕ್ಕು ಕಾಯಿದೆ ಪ್ರಕಾರ ಸರ್ವೋಚ್ಛ ನ್ಯಾಯಾಲಯ ಹೊರಹಾಕಿರುವ ಅಂಕಿಅಂಶಗಳ ಪ್ರಕಾರ ಕೆಲವರು ನ್ಯಾಯಮೂರ್ತಿಗಳು ಆನೆಗಳಾಗಿ ಕಂಡುಬಂದರೆ, ಮುಖ್ಯನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮಾತ್ರ ಐರಾವತದಂತೆ ಕಾಣುತ್ತಾರೆ. 2005ರಿಂದ ಅವರು ಇದುವರೆಗೆ 12 ಬಾರಿ ವಿದೇಶ ಪ್ರವಾಸ ಮಾಡಿದ್ದು ಬರೀ ಏರ್ ಟಿಕೆಟ್ ವೆಚ್ಚವೇ 75 ಲಕ್ಷ ರೂಪಾಯಿಗಿಂತ ಹೆಚ್ಚಿದೆ.

ಸನ್ಮಾನ್ಯ ಬಾಲಕೃಷ್ಣನ್ ಅವರು ತಾವೊಬ್ಬರೇ ಅಲ್ಲದೆ ಜತೆಗೆ ತಮ್ಮ ಮಡದಿಯನ್ನೂ ಪ್ರವಾಸಕ್ಕೆ ಕರೆದೊಯ್ದಿರುವುದರಿಂದ ಬಿಲ್ಲು ಖರ್ಚುವೆಚ್ಚಗಳ ಬಿಲ್ಲು ಊದಿಕೊಂಡಿದೆ. ಬಾಲಕೃಷ್ಣನ್ ಅವರು ಮಾತ್ರವಲ್ಲ, ಇಂಥ ದುಬಾರಿ ವಿದೇಶ ಪ್ರವಾಸ ಮಾಡಿರುವ ಅನೇಕ ನ್ಯಾಯಮೂರ್ತಿಗಳ ವಿವರಗಳು ಲಭಿಸಿವೆ.

ಬಾಲಕೃಷ್ಣ ಅವರ ಖರ್ಚು ವೆಚ್ಚಗಳ ಲೆಕ್ಕ ಇಲ್ಲಿಗೆ ನಿಲ್ಲುವುದಿಲ್ಲ. ವಸತಿ, ಊಟ ಮತ್ತಿತರ ಬಾಬತ್ತುಗಳ ವೆಚ್ಚ ಕೂಡಿಸಿದರೆ ಒಟ್ಟಾರೆ ಬಿಲ್ಲು ಏರ್ ಬಸ್ ಮೀರಿಸುವಷ್ಟು ದೊಡ್ಡದಾಗುತ್ತದೆ. ಅದಿರಲಿ, ಈಗ್ಯಾಕೆ ಜಡ್ಜುಗಳ ಖರ್ಚುವೆಚ್ಚಗಳ ವಿಚಾರ ಬಂತಪ್ಪಾ ಎಂದರೆ, ಮಾಹಿತಿ ಹಕ್ಕು ಆಂದೋನಲದ ಸಕ್ರಿಯ ಕಾರ್ಯಕರ್ತ ದೇವ್ ಆಶೀಶ್ ಭಟ್ಟಾಚಾರ್ಯ್ ಎಂಬುವವರು ಈ ಲೆಕ್ಕಗಳನ್ನು ಕೊಡುವಂತೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿದ್ದರು. ಅದಕ್ಕೆ ಉತ್ತರವಾಗಿ ಕೋರ್ಟು ಅವರ ವಿದೇಶಪ್ರವಾಸದ ವಿವರಗಳನ್ನು ನೀಡಿತು.

ಇಷ್ಟು ದಿನ ರಾಜಕಾರಣಿಗಳ ಮೇಲೆ ಸವಾರಿ ಮಾಡುತ್ತಿದ್ದ ನ್ಯಾಯಮೂರ್ತಿಗಳೇ ವಿವಾದಕ್ಕೆ ಗುರಿಯಾಗಿದ್ದಾರೆ. ಬೇಲಿಯೇ ಎದ್ದು ಹಲ್ಲು ಮೇಯುವುದು ಅಂದ್ರೆ ಇದೇನಾ? ಮಾಹಿತಿ ಹಕ್ಕನ್ನು ಪ್ರಜೆಗಳು ಬಳಸಿಕೊಳ್ಳಬೇಕು. ನಿಮಗೆ ಸರಕಾರದ ಇಲಾಖೆಗಳಿಂದ ಮಾಹಿತಿ ಬೇಕಿದ್ದರೆ ಕೇಳಿ ಪಡೆದುಕೊಳ್ಳಿರಿ. ಹೇಗೆ ಎಂತು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X