65 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್

ನವದೆಹಲಿ, ಡಿ. 4 : ಜಾಗತಿಕ ಮಾರುಕಟ್ಟೆಯ ಉಂಟಾಗಿರುವ ಆರ್ಥಿಕ ಹಿನ್ನೆಡೆಯಿಂದಾಗಿ ಭಾರತದಲ್ಲಿ ಕಳೆದ ಮೂರು ತಿಂಗಳಲ್ಲಿ ವಿವಿಧ ಉದ್ಯಮದ ಸುಮಾರು 65 ಸಾವಿರ ಉದ್ಯೋಗಿಗಳು ತಮ್ಮ ನೌಕರಿಯನ್ನು ಕಳೆದುಕೊಂಡಿದ್ದಾರೆ. ದೇಶದ 21 ಪ್ರತಿಷ್ಠಿತ ಕಂಪನಿಗಳ ಸರ್ವೆ ಕಾರ್ಯ ನಡೆಸಿದಾಗ ಅಗಸ್ಟ್ ನಿಂದ ಅಕ್ಟೋಬರ್ ವರೆಗೆ 65,507 ಉದ್ಯೋಗಿಗಳು ನೌಕರಿ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ.

ಆರ್ಥಿಕ ಹಿನ್ನೆಡೆಯ ಪರಿಣಾಮ ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಬೇಡಿಕೆ ಕಡಿಮೆಯಾಗಿರುವುದರಿಂದ ಉತ್ಪಾದನಾ ಕಂಪನಿಗಳು ಕೂಡಾ ಇದರ ಹೊಡೆತಕ್ಕೆ ತಲ್ಲಣಿಸಿವೆ. ಈ ಮೂರು ತಿಂಗಳ ಅವಧಿಯಲ್ಲಿ 1792 ಕೋಟಿ ರುಪಾಯಿಗಳ ನಷ್ಟ ಉಂಟಾಗಿದೆ. ಜವಳಿ ಉದ್ಯಮದಲ್ಲೂ ಇದರ ಕರಾಳ ಛಾಯೆ ಆವರಿಸಿದ್ದು, ಈಗಾಗಲೇ ಸುಮಾರು 9 ಸಾವಿರ ಉದ್ಯೋಗಿಗಳು ನೌಕರಿಯನ್ನು ಕಳೆದುಕೊಂಡಿದ್ದಾರೆ.

ಮಾರ್ಚ್ 2009ರ ವೇಳೆ ಜವಳಿ ಉದ್ಯಮವೊಂದರಲ್ಲಿ ಸುಮಾರು 5 ಲಕ್ಷ ಉದ್ಯೋಗಿಗಲಉ ನೌಕರಿ ಕಳೆದಕೊಳ್ಳಲಿದ್ದಾರೆ ಎಂದು ಕೇಂದ್ರ ಜವಳಿ ಇಲಾಖೆ ಮೂಲಗಳು ತಿಳಿಸಿವೆ. ಆರ್ಥಿಕ ಹಿನ್ನೆಡೆಯ ಮುಂದಿನ ಐದು ವರ್ಷದವರೆಗೂ ಜವಳಿ ಉದ್ಯಮದ ಮೇಲೆ ಬೀರಲಿದೆ ಎಂದು ಸಹ ಇಲಾಖೆ ಹೇಳಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+