ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಬುರ್ಗಿ,ಹುಬ್ಬಳ್ಳಿಯಲ್ಲಿ ಸಿಇಟಿ.ಕೌನ್ಸಿಲಿಂಗ್

By Staff
|
Google Oneindia Kannada News

cm visits jidaga math, kalburgi
ಕಲ್ಬುರ್ಗಿ, ಡಿ. 3 : ಮುಂಬರುವ ದಿನಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿ.ಇ.ಟಿ.) ಕೌನ್ಸಿಲಿಂಗ್ ಕೇಂದ್ರಗಳನ್ನು ಗುಲಬರ್ಗಾ ಮತ್ತು ಹುಬ್ಬಳ್ಳಿಗಳಲ್ಲಿಯೂ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠದ ಉದ್ಘಾಟನೆ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಬೆಂಗಳೂರಿನಲ್ಲಿ ಐ.ಐ.ಟಿ. ಅಧ್ಯಯನ ಕೋರ್ಸು ಮಂಜೂರು ಮಾಡುವಂತೆ ಬೆಂಗಳೂರಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿಗಳನ್ನು ಒತ್ತಾಯಿಸಲಾಗುವುದು ಎಂದರು.

12ನೇ ಶತಮಾನದ ಶಿವಶರಣರ ಹಲವಾರು ಮೌಲಿಕ ವಿಷಯಗಳು ವಚನ ಸಾಹಿತ್ಯದ ಮೂಲಕ ಸಮಾಜದ ಎಲ್ಲ ವರ್ಗದವರನ್ನು ಆಕರ್ಷಿಸಿದ್ದು ಜನಸಾಮಾನ್ಯರ ದನಿಯಾಗಿ ಇಡೀ ಜಗತ್ತಿಗೇ ಹೊಸ ದಿಕ್ಕು ಹಾಗೂ ಹೊಸ ಚೇತನ ನೀಡಿದೆ. ಕ್ರಾಂತಿಯೋಗಿ ಬಸವಣ್ಣನವರ ಹೆಗಲಿಗೆ ಹೆಗಲುಕೊಟ್ಟು ಸಾಮಾಜಿಕವಾಗಿ ಜನತೆಯನ್ನು ಎಚ್ಚರಿಸುವ ಹಾಗೂ ನಡೆ-ನುಡಿ ಒಂದಾಗಬೇಕೆಂಬ ಸ್ಪಷ್ಟ ನಿಲುವನ್ನು ಶರಣ ಹಡಪದ ಅಪ್ಪಣ್ಣ ಹೊಂದಿದ್ದರು ಎಂದರು.

ಸಮಕಾಲೀನ ಸಮಾಜಕ್ಕೆ ದಾರಿ ತೋರುವ ವಚನ ಸಾಹಿತ್ಯ ಭಾರತೀಯ ಸಮಾಜದಲ್ಲಿ ಮಹತ್ತರ ಘಟ್ಟ ಹೊಂದಿದ್ದು, ಇಂದಿನ ಪೀಳಿಗೆಗೆ ಶಿವಶರಣರ, ಸಂತರ ತತ್ವಾದರ್ಶಗಳ ಪರಿಚಯವಾಗಬೇಕು. ಇವರ ಸಾಧನೆ ತತ್ವಾದರ್ಶಗಳನ್ನು ಜನತೆಗೆ ಮುಟ್ಟಿಸುವಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಶರಣ ಹಡಪದ ಅಪ್ಪಣ್ಣ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠಗಳು ಕಾರ್ಯನಿರ್ವಹಿಸಬೇಕೆಂದರು.

ಸಂತರ, ಶಿವಶರಣರ ತತ್ವಾದರ್ಶ, ಕ್ಷೇತ್ರಾಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ಹರಿಸುತ್ತಿದ್ದು, ಕಾರ್ಯಕ್ರಮ ಸಹ ಹಮ್ಮಿಕೊಂಡಿದೆ. ಶಿವಶರಣರ ಬೀಡಾಗಿರುವ ಬೀದರ ಜಿಲ್ಲೆಯ ಬಸವಕಲ್ಯಾಣದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ 30 ಕೋಟಿ ರೂ. ಬಿಡುಗಡೆ ಮಾಡಿದ್ದು, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಚುರುಕುಗೊಳಿಸಲಾಗಿದೆ. ಅದೇ ರೀತಿ ಕನಕದಾಸರ ಜನ್ಮಸ್ಥಳ ಬಾಡಾ ಮತ್ತು ಕರ್ಮಭೂಮಿ ಕಾಗಿನೆಲೆ ಅಭಿವೃದ್ಧಿಗಾಗಿ 16 ಕೋಟಿ ರೂ. ನೀಡಲಾಗಿದೆ. ಶಿಶುನಾಳ ಷರೀಫರ ಕ್ಷೇತ್ರದ ಅಭಿವೃದ್ಧಿಗಾಗಿ ಒಂದು ಕೋಟಿ ರು. ಒದಗಿಸಲಾಗಿದೆ.

ಹಿಂಸೆ, ದಂಗೆ, ಭಯೋತ್ಪಾದನೆಯಿಂದ ಇಡೀ ಪ್ರಪಂಚ ನಲುಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇಂದಿನ ಯುವ ಪೀಳಿಗೆ ಇಂತಹ ಗಂಡಾಂತರಗಳನ್ನು ಎದುರಿಸುವ ಆತ್ಮಸ್ಥೈರ್ಯ ತುಂಬಬೇಕಾಗಿದೆ. ನಮ್ಮ ಸಮಾಜ ಮತ್ತು ಯುವಜನಾಂಗ ಜಾಗೃತರಾಗಬೇಕು ಎಂದರು. ರಾಜ್ಯದ ಬಹುದಿನಗಳ ಬೇಡಿಕೆಯಾದ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಈಗ ಸಿಕ್ಕಿದ್ದು , ಕನ್ನಡಿಗರು ಆರ್ಥಿಕ ಸ್ವಾವಲಂಬನೆ ಬದುಕು ರೂಪಿಸಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ ಎಂದರು.
(ದಟ್ಸ್ ಕನ್ನಡ ವಾರ್ತೆ)
ಇದನ್ನೂ ಓದಿ:
ಉಗ್ರರ ಆಟ ನಡೆಯುವುದಿಲ್ಲ: ಯಡಿಯೂರಪ್ಪ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X