ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಪ್ರಧಾನಿಯಾಗಿ ರತನ್ ಟಾಟಾ

By Staff
|
Google Oneindia Kannada News

Ratan Tata as PM for five Years
ಬೆಂಗಳೂರು, ಡಿ. 3 : ಇಂದಿನ ಭಾರತ ಅನೇಕ ಪಿಡುಗುಗಳ ನೆಲೆವೀಡಾಗಿದೆ. ಸಾಮಾಜಿಕ ಕ್ಷೋಭೆ, ಆರ್ಥ ವ್ಯವಸ್ಥೆಯ ಕುಸಿತ, ಮತ್ತು ಇಡೀ ದೇಶದ ಆಂತರಿಕ ಭದ್ರತೆ ಕಳವಳಕಾರಿ ಮಟ್ಟ ತಲುಪಿದೆ. ಇದಕ್ಕೆಲ್ಲ ರಾಜಕೀಯ ವ್ಯವಸ್ಥೆ ಮತ್ತು ರಾಜಕಾರಣಿಗಳ ಉಡಾಫೆಯೇ ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಾವು ಈ ಗಂಡಾತರದಿಂದ ಆಚೆ ಬರಬೇಕು. ಆದರೆ, ಏಕಾಏಕಿ ನಮ್ಮ ರಾಜಕಾರಣಿಗಳನ್ನು ಸುಧಾರಿಸುವುದು ಕಷ್ಟದ ಕೆಲಸ. ಅದಕ್ಕೋಸ್ಕರ ನಾವು ಹೊಸತಾಗಿ ಆಲೋಚನೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಏನಾದರೂ ಹೊಸ ಪ್ಲಾನ್ ಹಾಕಬೇಕು.

ರಾಷ್ಟ್ರ ಸ್ಥಿತಿ ಜಟಿಲವಾಗಿರುವಾಗ ಮೊದಲು ನಾವು ಏನೆಲ್ಲ ಹೊಸ ಪ್ರಯೋಗ ಮಾಡಲು ಕಟಿಬದ್ಧರಾಗಿರಬೇಕು. ರಾಷ್ಟ್ರ ಇನ್ನಷ್ಟು ಪ್ರಪಾತಕ್ಕೆ ಬೀಳದಂತೆ ಯಾವ ಬಗೆಯ ಎಚ್ಚರಿಕೆ ಕ್ರಮಗಳನ್ನು ಭಾರತ ಕೈಗೊಳ್ಳಬೇಕು;ಇಂಥ ತುರ್ತು ಸಂದರ್ಭಗಳನ್ನು ದಾಟಿ ಪ್ರಗತಿಯ ದಿಕ್ಕಿನಲ್ಲಿ ತ್ವರಿತವಾಗಿ ಹೆಜ್ಜೆ ಹಾಕಲು ಪ್ರಜೆಗಳು ಏನು ಮಾಡಬೇಕು; ಇವೆ, ದಾರಿಗಳಿವೆ. ಅದಕ್ಕೆ ಭಾರತದ ಪ್ರಜೆಗಳು ಮೊದಲು ಮಾನಸಿಕವಾಗಿ ಸಿದ್ಧರಾಗಬೇಕಷ್ಟೆ. ಮುಖ್ಯವಾಗಿ ಭಾರತದ ಇಂದಿನ ಎಲ್ಲ ಅನಿಷ್ಟಗಳಿಗೆ ನಮ್ಮ ನೇತಾರರೇ ಕಾರಣರಾಗಿರುವುದರಿಂದ ಅವರನ್ನು ಸ್ವಲ್ಪಕಾಲವಾದರೂ ದೂರವಿಡಬೇಕು. ಸ್ಪಲ್ಪ ಕಾಲ ಅಂದರೆ ಎಷ್ಟು ?

ಒಂದೈದು ವರ್ಷ ಅಂತ ಇಟ್ಟುಕೊಳ್ಳೋಣ. ಮೊನ್ನೆ ಮುಂಬೈನ ತಾಜ್, ಒಬೇರಾಯ್ ಮತ್ತು ಟ್ರೈಡೆಂಟ್ ಹೋಟೆಲುಗಳ ಮೇಲೆ ಭಯೋತ್ಪಾದಕರ ಆಕ್ರಮಣವಾದಾಗ ರಾಷ್ಟ್ರೀಯ ಭದ್ರತಾ ದಳದ ( NSG) ಸಿಪಾಯಿಗಳು ಏನು ಮಾಡಿದರೋ ಅದರ ಪುನರಾವರ್ತನೆ ಆಗಬೇಕಾಗಿದೆ. ಅಂದರೆ, ಕೇವಲ ಲಾಠಿ, .333 ಗನ್ನುಗಳನ್ನು ಹೊಂದಿದ್ದ ಮಹಾರಾಷ್ಟ್ರ ಪೊಲೀಸರಿಂದ ದುಷ್ಟರನ್ನು ನಿಗ್ರಹಿಸುವ ಕೆಲಸ ಆಗದು ಎಂದು ತಿಳಿದಾಗ ಎನ್ ಎಸ್ ಜಿ ಕಮಾಂಡೋಗಳು ದೆಹಲಿಯಿಂದ ಬಂದರು. ಪ್ರಾಣದ ಹಂಗುತೊರೆದು ಉಗ್ರರು ಆಕ್ರಮಿಸಿಕೊಂಡ ಜಾಗಗಳಿಗೆ ನುಗ್ಗಿ ಅವರನ್ನು ಸದೆಬಡಿದರು. ಆನಂತರ ಆ ಪ್ರದೇಶವನ್ನು ಸ್ವಚ್ಛಮಾಡಿ ಮತ್ತೆ ನಾಗರಿಕ ಸಮುದಾಯದ ಸುಪರ್ದಿಗೆ ವಹಿಸಿ ವಾಪಸ್ಸು ಹೋದರು.

ಭಾರತದ ನಾಯಕತ್ವದ ವಿಷಯದಲ್ಲೂ ಇಂಥ ಒಂದು ಕಮಾಂಡೋ ಪಡೆಯ ತುರ್ತು ಅಗತ್ಯವಿದೆ. ಈ ಕಮಾಂಡೋ ದೇಶದ ಆಡಳಿತದ ಚುಕ್ಕಾಣಿಯನ್ನು ಹಿಡಿಯಬೇಕು. ತನ್ನ ಆದ್ಯತಾ ಕ್ಷೇತ್ರಗಳನ್ನು ಗುರುತಿಸಿಕೊಳ್ಳಬೇಕು. ಅವು ಹೀಗಿರಬೇಕು.

*ದೇಶದ ಭದ್ರತೆ ಮುಖ್ಯ. ಅದನ್ನು ಮೊದಲು ಭದ್ರಮಾಡಬೇಕು. ತಾವು ಈ ಆಡಳಿತದಲ್ಲಿ ಸುರಕ್ಷಿತ ಎಂದು ಪ್ರಜೆಗಳು ಭಾವಿಸುವಂತಾಗಬೇಕು.
*ಮೂಲಭೂತ ಸೌಕರ್ಯಗಳ ನಿರ್ಮಾಣ. ಅಂದರೆ, ಭಾರತ ಮತ್ತು ವಿದೇಶಿ ಬಂಡವಾಳವನ್ನು ಕಲೆಹಾಕಿ ಸಾರಿಗೆ, ಸಂಪರ್ಕ ಮತ್ತು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಬೇಕು.
*ಶಿಕ್ಷಣ ಕ್ಷೇತ್ರ ಸುಧಾರಿಸಬೇಕು. ಅದರಲ್ಲಿ ಸರಕಾರ ಮೂಗುತೂರಿಸಲೇ ಬಾರದು.
*ಆಡಳಿತ ನಡೆಸುವ ಸಂಸ್ಥೆ, ಕಚೇರಿಗಳಿಗೆ ಸ್ವಾಯತ್ತತೆ ಕೊಡಬೇಕು. ಆನಂತರ ಫಲಾಫಲಗಳಿಗೆ ಅವರೇ ಹೊಣೆಗಾರರಾಗುವಂತೆ ಕಟ್ಟುಪಾಡುಗಳಿರಬೇಕು.
*ಭಾರತ ಆರು ಲಕ್ಷ ಹಳ್ಳಿಗಳಿರುವ ದೇಶ ಎಂಬ ಹೆಮ್ಮೆಯ ಮಾತುಗಳನ್ನು ಆಡುವುದನ್ನು ನಿಲ್ಲಿಸಿ, 6,000 ಹೊಸ ನಗರಗಳನ್ನು ಕಟ್ಟಬೇಕು.
ಅಷ್ಟು ಮಾಡಿ ಸಾಕು. ಉಳಿದದ್ದೆಲ್ಲ ತಂತಾನೆ ಸರಿಹೋಗುತ್ತದೆ. ಮುಖ್ಯ ವಿಷಯವನ್ನು ಹೇಳಬೇಕು. ದೆಹಲಿಯಲ್ಲಿ ಹೊಸ ಸರಕಾರ ಸ್ಥಾಪನೆ ಆಗಬೇಕು.ಅದಕ್ಕೆ ರತನ್ ಟಾಟಾ ಪ್ರಧಾನಮಂತ್ರಿ ಆಗಬೇಕು..( ರಾಜೇಶ್ ಜೈನ್ ಅವರ ಲೇಖನದ ಪೂರ್ಣಪಾಠ ಓದಿ )

( ಅನುಮತಿ : ರಾಜೇಶ್ ಜೈನ್ )

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X