• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತಕ್ಕೆ ಬಿಜಯಂಗೈಯುತ್ತಿರುವ ವಾಲ್ಮಾರ್ಟ್

By Super
|

ಬೆಂಗಳೂರು, ನ. 13 : ಕ್ಯಾಷ್ ಅಂಡ್ ಕ್ಯಾರಿ. ಅಕ್ಕಿ, ಬೇಳೆ, ಹುಣಿಸೆಹಣ್ಣು, ಹಣ್ಣು ತರಕಾರಿ, ಬಟ್ಟೆ, ಪಾದರಕ್ಷೆ, ಕಾಸ್ ಮೆಟಿಕ್ಸ್.. ಏನುಂಟು ಏನಿಲ್ಲ. ನಿತ್ಯೋಪಯೋಗಿ ವಸ್ತುಗಳನ್ನು ಮಾರುವ ಉತ್ತರ ಅಮೆರಿಕಾದ ಪ್ರಸಿದ್ಧ ವಾಲ್ ಮಾರ್ಟ್ ಮಳಿಗೆಯ ಸಮೂಹ ಭಾರತಕ್ಕೆ ಕಾಲಿಡಲಿದೆ. ಪ್ರತೀಕೂಲ ಮಾರುಕಟ್ಟೆಯ ಸ್ಥಿತಿಗತಿ ನಡುವೆಯೂ ಭಾರತದಲ್ಲಿ ಅಂಗಡಿಗಳನ್ನು ತೆರೆಯುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ ಭಾರತಿ ವಾಲ್ ಮಾರ್ಟ್ ನ ನಿರ್ದೇಶಕ ಮತ್ತು ಸಿಇಒ ರಾಜ್ ಜೈನ್.

ಭಾರತದಲ್ಲಿ ಬಂಡವಾಳ ಹೂಡುವ ದೂರಗಾಮಿ ಯೋಜನೆಗಳನ್ನು ವಾಲ್ ಮಾರ್ಟ್ ಹಾಕಿಕೊಂಡಿದೆ. ಭಾರತದ ನಾನಾ ನಗರಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸಲು ಬದ್ಧವಾಗಿರುವ ಭಾರತಿ ಎಂಟರ್ ಪ್ರೈಸಸ್ ಅಮೆರಿಕಾದ ಜನತಾ ಬಜಾರ್ ಎಂದು ಕರೆಯಿಸಿಕೊಳ್ಳುವ ವಾಲ್ ಮಾರ್ಟ್ ನೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಂಡಿದೆ.

ಮಳಿಗೆಗಳನ್ನು ಆರಂಭಿಸುವ ಮುನ್ನ ಬೃಹತ್ ಪ್ರಮಾಣದಲ್ಲಿ ಕಿರಾಣಿ ವ್ಯಾಪಾರ ಮಾಡುವ ಚತುರತೆಯನ್ನು ಸಂಪಾದಿಸಿಕೊಳ್ಳಲು ಭಾರತಿ ಎಂಟರ್ ಪ್ರೈಸಸ್ ಪಂಜಾಬ್ ಸರಕಾರದೊಂದಿಗೆ ಒಂದು ಒಡಂಬಡಿಕೆಗೆ ಇತ್ತೀಚೆಗೆ ಸಹಿಹಾಕಿದೆ. ಇದರ ಪ್ರಕಾರ, ವಾಲ್ ಮಾರ್ಟ್ ವ್ಯಾಪಾರ ವಹಿವಾಟಿಗೆ ಪೂರಕವಾದ ತಂತ್ರಜ್ಞಾನ ಜಾಣ್ಮೆಗಳು, ಪದಾರ್ಥ ಪೂರೈಕೆ ಜಾಲ ಸೃಷ್ಟಿ ಹಾಗೂ ಸಿಬ್ಬಂದಿ ತರಬೇತಿಯನ್ನು ಹಮ್ಮಿಕೊಳ್ಳುತ್ತಿದೆ.

ವಾಲ್ ಮಾರ್ಟ್ ಮೊದಲಿಗೆ ತನ್ನ ಅಂಗಡಿಗಳನ್ನು ಪಂಜಾಬ್ ನಲ್ಲಿ ತೆರೆಯುತ್ತದೆ. ಅಮೃತಸರ, ಜಲಂಧರ್ ಮತ್ತು ಲೂಧಿಯಾನದಲ್ಲಿ ಮಳಿಗೆ ಸ್ಥಾಪಿಸಲು ತಯ್ಯಾರಿ ನಡೆದಿದೆ. ಈ ಅಂಗಡಿಗಳು 2009ರ ಏಪ್ರಿಲ್ ಜೂನ್ ಅವಧಿಯಲ್ಲಿ ಕಾರ್ಯಾರಂಭ ಮಾಡುತ್ತವೆ. ಒಂದು ವಾಲ್ ಮಾರ್ಟ್ ಮಳಿಗೆ ಸುಮಾರು ಐವತ್ತು ಸಾವಿರದಿಂದ ಒಂದು ಲಕ್ಷ ಚದರಅಡಿ ಜಾಗ ಆಕ್ರಮಿಸುತ್ತದೆ. ಮುಂದಿನ ಏಳು ವರ್ಷಗಳ ಅವಧಿಯಲ್ಲಿ ವಾಲ್ ಮಾರ್ಟ್ ಒಟ್ಟು 5000 ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶ ಇಟ್ಟುಕೊಂಡಿದೆ.

(ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Wal-Mart, grocery and retail chain operator, will be going ahead with its plans to launch its cash and carry stores despite the current market instability, said Raj Jain, managing director and chief executive officer, Bharti Wal-Mart here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more