ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರು.12.65 ಕೋಟಿಗೆ ಹರಾಜಾದ ಫೋನ್ ಸಂಖ್ಯೆ

By Staff
|
Google Oneindia Kannada News

ದುಬೈ, ಸೆ.20: ಕತಾರ್ ಟೆಲಿಕಾಂ ಸಂಸ್ಥೆ ನಿರ್ವಹಿಸಿದ ಬಹಿರಂಗ ಹರಾಜಿನಲ್ಲಿ ಕ್ಯುಟೆಲ್ ದೂರವಾಣಿ ಕಂಪನಿಯ 6666666 ಫೋನ್ ಸಂಖ್ಯೆ ರು.12.65 ಕೋಟಿಗಳಿಗೆ ಮಾರಾಟವಾಗಿದೆ.

ಈ ಸಂಖ್ಯೆಯನ್ನು ಕೊಂಡುಕೊಂಡ ಗ್ರಾಹಕನ ಹೆಸರನ್ನು ಬಹಿರಂಗಪಡಿಸಿಲ್ಲ. ಇಂದು ನಡೆದ ಹರಾಜನ್ನು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗುರುತಿಸಿದ್ದು 2009ನೇ ಆವೃತ್ತಿಯಲ್ಲಿ ಪ್ರಕಟಿಸುವುದಾಗಿ ತಿಳಿಸಿದೆ. ಒಂದು ಫೋನ್ ಸಂಖ್ಯೆ ಇಷ್ಟೊಂದು ಭಾರಿ ಮೊತ್ತಕ್ಕೆ ಮಾರಟವಾಗುತ್ತಿರುವುದು ಪ್ರಪಂಚದಲ್ಲಿ ಇದೇ ಮೊದಲು.ಧರ್ಮಾರ್ಥ ಸಂಸ್ಥೆಯ ಸಹಾಯಾರ್ಥವಾಗಿ ಈ ಹರಾಜನ್ನು ನಿರ್ವಹಿಸಲಾಗಿತ್ತು.

ಈ ಹಿಂದೆ ಚೀನಾದಲ್ಲಿ 8888 8888 ಎಂಬ ಸಂಖ್ಯೆ ರು.2 ಕೋಟಿಗಳಿಗೆ ಮಾರಟವಾಗಿತ್ತು. ''ದುಬೈನ ಕ್ಯುಟೆಲ್ ಕಂಪನಿ ಈ ರೀತಿಯ ಹೊಸ ಪ್ರಚಾರಗಳ ಪರಂಪರೆಯನ್ನೇ ಹೊಂದಿದೆ. ಹರಾಜಿನಲ್ಲಿ ದಾಖಲೆ ಬೆಲೆಗೆ ಮೊಬೈಲ್ ಸಂಖ್ಯೆ ಮಾರಟವಾಗಿರುವುದರಿಂದ ನಮಗೆ ತುಂಬ ಹೆಮ್ಮೆ ಅನಿಸುತ್ತದೆ'' ಎನ್ನುತ್ತಾರೆ ಕ್ಯುಟೆಲ್ ನಿರ್ದೇಶಕ ಅಡೆಲ್ ಅಲ್ ಮುತಾವ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X