ಸೆಮಿಫೈನಲ್ : ವಿಜೇಂದರ್ ಗೆ ಅಗ್ನಿಪರೀಕ್ಷೆ

ಬೀಜಿಂಗ್, ಆ. 22 : ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಅಭಿನವ್ ಬಿಂದ್ರಾ ಚಿನ್ನದ ಪದಕ ಗಳಿಸಿದರೆ, ಸುಶೀಲ್ ಕುಮಾರ್ ಕುಸ್ತಿ ಪಂದ್ಯದಲ್ಲಿ ಕಂಚು ಪಡೆಯುವ ಮೂಲಕ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇದರ ಬೆನ್ನಲ್ಲೇ ಶುಕ್ರವಾರ ಮಧ್ಯಾಹ್ನ 12.46ಕ್ಕೆ ಬಾಕ್ಸಿಂಗ್ ನ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಭಾರತದ ವಿಜೇಂದರ್ ಕುಮಾರ್ ಅವರು ಕ್ಯೂಬಾದ ಎಮಿಲಿಯೋ ಕೊರೆಯಾ ಬೈಯೆಕ್ಸ್ ಅವರನ್ನು ಎದುರಿಸಲಿದ್ದಾರೆ.

ಭಾರತೀಯ ಬಾಕ್ಸಿಂಗ್ ಪಟು ಭಾರಿ ಉತ್ಸಾಹದಲ್ಲಿದ್ದು, ನೂರು ಕೋಟಿ ಭಾರತೀಯ ಕನಸಾದ ಇನ್ನೊಂದು ಚಿನ್ನ ಪದಕವನ್ನು ಗೆಲ್ಲುವರೆ ಎನ್ನುವುದು ಇಂದು ಮಧ್ಯಾಹ್ನ ನಿರ್ಧಾರವಾಗಲಿದೆ. ಎಮಿಲಿಯೋ ಉತ್ತಮ ಬಾಕ್ಸಿಂಗ್ ಪಟುವಾಗಿದ್ದು, ಚಿನ್ನ ಪದಕ ಗೆಲ್ಲುವ ನೆಚ್ಚಿನ ಆಟಗಾರನಾಗಿದ್ದಾನೆ. ಇದು ಎಮಿಲಿಯೋ ಅವರಿಗೆ ಚೊಚ್ಚಲ ಒಲಿಂಪಿಕ್ಸ್ ಕ್ರೀಡಾಕೂಟವಾದರೂ ಈಗಾಗಲೇ ಅವರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಬಾಕ್ಸಿಂಗ್ ವಿಶ್ವ ಚಾಂಪಿಯನ್ ಶಿಪ್, ಅಮೆರಿಕನ್ ಚಾಂಪಿಯನ್ ಶಿಪ್ ಪಂದ್ಯಗಳಲ್ಲಿ ಚಿನ್ನ ಗೆಲ್ಲುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಭಾರತದ ವಿಜೇಂದರ್ ಅವರಿಗೆ ಸುಲಭದ ಹಾದಿಯೇನು ಅಲ್ಲ ಎನ್ನುವ ಮಾತು ಕೇಳಿ ಬರತೊಡಗಿದೆ.

ಈಗಾಗಲೇ ಕಂಚಿನ ಪದಕವನ್ನು ಬಹುತೇಕವಾಗಿ ತನ್ನದಾಗಿಸಿಕೊಂಡಿರುವ ವಿಜೇಂದರ್ ಚಿನ್ನದ ಮೇಲೆ ಕಣ್ಣಿಟ್ಟಿದ್ದಾರೆ. ಸೋಲುವ ಮಾತೇ ಇಲ್ಲ. ಚಿನ್ನ ಗೆಲ್ಲುವುದೊಂದು ಅಂತಿಮ ಗುರಿ ಎಂದು ವಿಜೇಂದರ್ ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಇದರಿಂದ ಭಾರತೀಯ ಕ್ರೀಡಾಪ್ರೇಮಿಗಳು ಕಣ್ಣು ಬೀಜಿಂಗ್ ನತ್ತ ನೆಟ್ಟಿದೆ.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ
ಒಲಿಂಪಿಕ್ಸ್ ಬಾಕ್ಸಿಂಗ್ ನಲ್ಲಿ ಭಾರತದ ಆಸೆ ಜೀವಂತ
ಬಾಕ್ಸಿಂಗ್ ಕ್ವಾರ್ಟರ್ ಫೈನಲ್ ನಲ್ಲಿ ಸೋತ ಜಿತೇಂದರ್
ಸೋತು ಗೆದ್ದ ಅದೃಷ್ಟವಂತ ಕುಸ್ತಿಪಟು ಸುಶೀಲ್
ಒಲಿಂಪಿಕ್ಸ್ :ಭಾರತದ ಕುಸ್ತಿಪಟು ಸುಶೀಲ್ ಗೆ ಕಂಚು
ಒಲಿಂಪಿಕ್ಸ್ :ಕುಸ್ತಿಪಟು ರಾಜೀವ್ ತೊಮರ್ ಗೆ ಸೋಲು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+