ಕಂಗ್ಲಿಷ್ ರಾಜಕಾರಣಿಗಳಿಗೆ ಕರವೇ ತರಾಟೆ

ಬೆಂಗಳೂರು, ಆ.5: ರಾಜಕಾರಣಿಗಳೇ ಕರ್ನಾಟಕ ವಿಧಾನಸಭೆಯಲ್ಲಿ ನೀವು ಕನ್ನಡದಲ್ಲಿ ಮಾತ್ರ ಮಾತನಾಡಿ, ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಕೈಗೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ.

ಬಿಜಿಪಿ ಶಾಸಕ ಡೆರಿಕ್ ಫುಲ್ಲಿನ್‌ಫಾ ವಿಧಾನಸಭೆಯಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿದ ಕಾರಣ ಅವರ ಕಚೇರಿ ಮೇಲೆ ಕರವೇ ಕಾರ್ಯಕರ್ತರು ದಾಳಿ ಮಾಡಿ ಪ್ರತಿಭಟಿಸಿದ್ದರು. ಈ ಕುರಿತು ಪ್ರತಿಕ್ರಿಯಿಸುತ್ತಿದ್ದ ಫುಲ್ಲಿನ್‌ಫಾ ಇದೊಂದು ಅಮಾನವೀಯ ಕೃತ್ಯ. ತಾವು ಆಂಗ್ಲೊ-ಇಂಡಿಯನ್ ಆದ ಕಾರಣ ಕನ್ನಡದಲ್ಲಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಹಾಗಂತ ನನಗೆ ಕನ್ನಡ ಭಾಷೆಯ ಬಗ್ಗೆ ಅಭಿಮಾನ ಇಲ್ಲ ಎಂದಲ್ಲ. ತಮ್ಮ ಪತ್ನಿ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ನನಗೂ ಕನ್ನಡ ಗೊತ್ತಿದ್ದರೆ ಈ ಹೊತ್ತು ಕರ್ನಾಟಕದಲ್ಲಿ ಅತಿದೊಡ್ಡ ನಾಯನಾಗಿರುತ್ತಿದೆ ಎಂದರು.

ಕರವೇ ಮುಖಂಡ ಅಂಜನಪ್ಪ ಮಾತನಾಡುತ್ತಾ, ಯಾರೇ ಆಗಲಿ ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯನ್ನು ವಿಧಾನಸಭೆಯಲ್ಲಿ ಬಳಸಿದ್ದೇ ಆದರೆ ನಮ್ಮ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದರು. ಒಟ್ಟಿನಲ್ಲಿ ಈ ಘಟನೆ ಮೂಲಕ ಕನ್ನಡ ವಿರೋಧಿ ರಾಜಕಾರಣಿಗಳಿಗೂ ಕರವೇ ಚುರುಕು ಮುಟ್ಟಿಸಿದೆ.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+