ಉಗ್ರರ ಬಗ್ಗೆ ಯುಪಿಎ ಮೃದು ಧೋರಣೆ : ಸುಷ್ಮಾ

ಮುಂಬೈ, ಜು. 31 : ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ವಿಶ್ವಾಸಮತದಲ್ಲಿ ಸಾಬೀತುಪಡಿಸಿ ವಾರ ಕಳೆದರೂ ಅದರ ಮೇಲೆ ದೋಷಾರೋಪಣೆಗಳು ನಿಂತಿಲ್ಲ. ಲಂಚದ ನೀಡಲು ಸಮಾಜವಾದಿ ಪಕ್ಷ ಮುಂದಾಗಿತ್ತು ಎನ್ನುವ ಗಂಭೀರ ಅಂಶ ಕಣ್ಣೆದುರು ಇರುವಾಗಲೇ, ಸುಮಾರು 32 ಬಿಜೆಪಿ ಸಂಸದರನ್ನು ಯುಪಿಎ ನಾಯಕರು ಸಂಪರ್ಕಿಸಿದ್ದರು, ತಮ್ಮ ಪರ ಮತ ಚಲಾಯಿಸಿದರೆ ಸಂಪುಟದಲ್ಲಿ ಸಚಿವ ಸ್ಥಾನದ ಆಮಿಷ ಒಡ್ಡಿದ್ದರು ಎಂದು ಆರೋಪಿಸುವ ಮೂಲಕ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಅಧಿಕಾರದ ಒಂದೇ ಉದ್ದೇಶಕ್ಕಾಗಿ ಸಂವಿಧಾನ ಅವಮಾನಕ್ಕೆ ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ಜನಾಂಗದ ಮತ ಗಳಿಸಲು ಯುಪಿಎ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದ ಅವರು, ಈ ಮೂಲಕ ದೇಶದಲ್ಲಿ ಭಯೋತ್ಪಾಕರ ದಾಳಿ ಹೆಚ್ಚಾಗಲು ಕೇಂದ್ರದ ಮೃದು ಧೋರಣೆಯೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.

ಇತ್ತೀಚೆಗೆ ಬೆಂಗಳೂರು ಮತ್ತು ಗುಜರಾತಿನಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ಜನತೆ ತತ್ತರಿಸಿದ್ದಾರೆ. ದೇಶವೇ ಅಲ್ಲೋಲಕಲ್ಲೋಲವಾಗುವಂತ ಸ್ಥಿತಿಗೆ ತಲುಪಿದೆ. ಇದರ ಹೊಣೆಗಾರಿಕೆಯನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಹೊರಬೇಕು. ಕಳೆದ ನಾಲ್ಕು ಚಿಲ್ಲರೆ ವರ್ಷಗಳಿಂದ ಕೇಂದ್ರದಲ್ಲಿ ಆಡಳಿತದಲ್ಲಿರುವ ಯುಪಿಎ ಸರ್ಕಾರದ ಗುಪ್ತಚರ ಇಲಾಖೆ ಪೂರ್ಣ ಕುಸಿದಿದೆ. ಈ ಮೂಲಕ ಅಮಾಯಕ ಜನರ ಪ್ರಾಣ ಕಳೆದುಕೊಳ್ಳಲು ಯುಪಿಎ ಸರ್ಕಾರದ ಮೃದು ನೀತಿಯನ್ನುವುದು ಸ್ಪಷ್ಟವಾಗಿ ತಿಳಿದುಬರುತ್ತದೆ ಎಂದು ಸುಷ್ಮಾ ಸ್ವರಾಜ್ ಆರೋಪಿಸಿದರು.

ದೇಶದಲ್ಲಿ ಭಯೋತ್ಪಾದನೆಯಷ್ಟೆ ಭೂತವಾಗಿ ಪರಿಣಮಿಸಿರುವ ನಕ್ಸಲ್ ರನ್ನು ಪೋಷಿಸಿದವರು ಇದೇ ಯುಪಿಎ ಸರ್ಕಾರ ಎಂದು ತರಾಟೆ ತಗೆದುಕೊಂಡ ಅವರು, ಜನ ವಿರೋಧಿ ನೀತಿ ಅನುಸರಿಸುತ್ತಿರುವ ಯುಪಿಎ ಸರ್ಕಾರವನ್ನು ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಯಲಿದ್ದಾರೆ ಎಂದು ಅವರು ವ್ಯಂಗ್ಯವಾಡಿದರು.

(ದಟ್ಸ್ ಕನ್ನಡ ವಾರ್ತೆ)
ವಿಶ್ವಾಸ ಮತ : ಯುಪಿಎಗೆ ನಿಚ್ಚಳ ಗೆಲುವು
ಲೋಕಸಭೆ : ಓಟಿಗೆ ನೋಟು ಪ್ರಕರಣ ಸ್ಪೀಕರ್ ಮುಂದೆ
ರಾಜ್ಯ ಬಿಜೆಪಿಯ ನಾಲ್ಕು ಸಂಸದರು ಯುಪಿಎ ಪರ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+