ಶ್ರೀನಗರ-ಅಮರನಾಥ್ ಹಾದಿಯಲ್ಲಿ ಸಜೀವ ಬಾಂಬ್
ಶ್ರೀನಗರ, ಜು. 31 : ಕೇಂದ್ರ ಮೀಸಲು ಪಡೆಯ ಸಮಯಪ್ರಜ್ಞೆಯಿಂದ ಅಮರನಾಥ್ ಯಾತ್ರಾರ್ಥಿಗಳನ್ನು ಗುರಿಯಾಗಿರಿಸಿಕೊಂಡು ಶ್ರೀನಗರ-ಬಾಲ್ತಾಲ್ ರಸ್ತೆಯಲ್ಲಿ ಹುದುಗಿಸಿಟ್ಟಿದ್ದ ಸಜೀವ ಬಾಂಬ್ ವೊಂದನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಹಮದಾಬಾದ್ ಮತ್ತು ಬೆಂಗಳೂರು ಸ್ಫೋಟಗಳಲ್ಲಿ ಬಳಸಿರುವ ಸುಧಾರಿತ ಸ್ಫೋಟಕ ವಸ್ತುಗಳನ್ನು ಇಲ್ಲಿ ಕೂಡಾ ಬಳಕೆ ಮಾಡಲಾಗಿದೆ ಎಂದು ಪೊಲೀಸರ ಮೂಲಗಳು ತಿಳಿಸಿವೆ.
ಕೇಂದ್ರೀಯ ಮೀಸಲು ಪಡೆಯ 118 ನ್ ಬೆಟಾಲಿಯನ್ ಪಡೆಯು ಶ್ರೀನಗರ-ಬಾಲ್ತಾಲ್ ರಸ್ತೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದ ಸಮಯದಲ್ಲಿ ಈ ಜೀವಂತ ಬಾಂಬ್ ಪತ್ತೆಯಾಗಿದೆ. ಈ ರಸ್ತೆಯ ಮೂಲಕ ಅಮರನಾಥ್ ಯಾತ್ರಾರ್ಥಿಗಳು ಪ್ರಯಾಣಿಸಬೇಕಿದ್ದು, ಅವರನ್ನು ಗುರಿಯಾಗಿರಿಸಿಕೊಂಡು ಈ ಬಾಂಬ್ ಸ್ಫೋಟಿಸುವ ಸಂಚು ರೂಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೊರೆತಿರುವ ಸಜೀವ ಬಾಂಬ್ ಭಾರಿ ಶಕ್ತಿಯುತವಾಗಿದ್ದು. ಸ್ಫೋಟಗೊಂಡಿದ್ದಲ್ಲಿ ಭಾರಿ ಅನಾಹುತ ಕಾದಿತ್ತು ಎಂದು ಅವರು ಹೇಳಿದ್ದಾರೆ.
ಶ್ರೀನಗರ ಬಾಲ್ತಾಲ್ ರಸ್ತೆ ತುಂಬಾ ಜನನಿಬಿಡ ಪ್ರದೇಶವಾಗಿದ್ದು, ಈ ರಸ್ತೆ ಎಲ್ಲ ಪ್ರದೇಶಗಳ ಸಂಪರ್ಕ ಬಿಂದುವಾಗಿದೆ. ಅಮರನಾಥ್ ಯಾತ್ರಿಗಳು ಈ ಮೂಲಕವೇ ತೆರಳುತ್ತಾರೆ. ಭದ್ರತೆ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಭಾರಿ ಪೊಲೀಸರನ್ನು ನಿಯೋಜಿಸಲಾಗಿದೆ. ರಸ್ತೆಯಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ತಪಾಸಣೆ ನಡೆಸಲಾಗುತ್ತಿದೆ ಪೊಲೀಸರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಗಡಿ ಉಲ್ಲಂಘನೆ ಮಾಡಿದ ಪಾಕ್ ಯೋಧರಿಂದ ದಾಳಿ












Click it and Unblock the Notifications