ಮಾಯಾವತಿ ಪ್ರಧಾನಿ ಅಭ್ಯರ್ಥಿ ಅಲ್ಲ ಎಂದ ಕಾರಟ್
ನವದೆಹಲಿ, ಜು.31: ಬಿಎಸ್‌ಪಿ ಪ್ರಧಾನ ನಾಯಕಿ ಮಾಯಾವತಿ ನಮ್ಮ ಪ್ರಧಾನಿ ಅಭ್ಯರ್ಥಿ ಅಲ್ಲಎಂದು ಸಿಪಿಎಂನ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಗುರುವಾರ ಸ್ಪಷ್ಟಪಡಿಸಿದ್ದಾರೆ. ಮಾಯಾವತಿಯೊಂದಿನ ನಮ್ಮ ಇಂದಿನ ರಾಜಕೀಯ ಸಂಬಂಧ ಬರೀ ಚುನಾವಣೆ ಹೊಂದಾಣಿಕೆಯಷ್ಟೇ ಎಂದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕಾರಟ್, ಈಗಿನ ಹೊಂದಾಣಿಕೆ ತೃತೀಯ ರಂಗವನ್ನು ಸ್ಥಾಪಿಸುವುದಲ್ಲ. ತೃತೀಯ ರಂಗ ಎನ್ನುವುದು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಎಂದು ಅವರು ಹೇಳಿದರು. ಯುಪಿಎ ಪಕ್ಷದೊಂದಿಗೆ ಚುನಾವಣೋತ್ತರ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶವನ್ನು ಅವರು ತಳ್ಳಿಹಾಕಿದರು. 2009ರ ಚುನಾವಣೆಗೆ ಯುಪಿಎ ಪಕ್ಷದೊಂದಿಗೆ ಯಾವುದೇ ಚುನಾವಣೋತ್ತರ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಅವರು ತಿಳಿಸಿದರು.
ಒಟ್ಟಿನಲ್ಲಿ ಎಡಪಕ್ಷಗಳು ತೃತೀಯರಂಗದ ಪರಿಕಲ್ಪನೆಯನ್ನು ಸದ್ಯಕ್ಕೆ ಪಕ್ಕಕ್ಕಿಟ್ಟಿವೆ. ಈಗೇನಿದ್ದರೂ ಮುಂದಿನ ರಾಜಕೀಯ ಲಾಭ ಪಡೆಯುವುದಷ್ಟೇ ಅವರ ಮುಂದಿನ ಗುರಿ. ಹಾಗಾಗಿ ಮಾಯಾವತಿ ತಮ್ಮ ಮುಂದಿನ ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.ಈ ಬಗ್ಗೆ ಮಾಯಾವತಿ ಪ್ರತಿಕ್ರಿಯಿಸಿಲ್ಲ.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications