ಹೊಗೇನಕಲ್ ವಿವಾದ ಪ್ರಧಾನಿ ಬಳಿಗೆ ಸರ್ವಪಕ್ಷ ನಿಯೋಗ

ಬೆಂಗಳೂರು, ಜು.31: ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ತಮಿಳುನಾಡು ಸರ್ಕಾರ ತಕ್ಷಣ ತಡೆಯಬೇಕೆಂದು ಸೂಚಿಸಲು ಸರ್ವಪಕ್ಷ ನಿಯೋಗದ ನಾಯಕರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಶೀಘ್ರದಲ್ಲೇ ಭೇಟಿ ಮಾಡಲಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿ(ಎಸ್)ನ ಪುಟ್ಟೇಗೌಡ ಕೇಳಿದ ಪ್ರಶ್ನೆಗೆ ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ ಉತ್ತರಿಸುತ್ತಾ , ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆ ಅಧಿವೇಶನ ಮುಗಿತ ನಂತರ ಶೀಘ್ರದಲ್ಲೇ ಸರ್ವಪಕ್ಷ ಸಭೆಯನ್ನು ಆಯೋಜಿಸಿ ವಿವಾದಿತ ಹೊಗೇನಕಲ್ ಯೋಜನೆಯ ಬಗ್ಗೆ ಚರ್ಚಿಸಲಿದ್ದಾರೆ. ಕರ್ನಾಟಕದ ಹಕ್ಕನ್ನು ಯಾವುದೇ ಕಾರಣಕ್ಕೂ ಬಲಿಕೊಡುವುದಿಲ್ಲ ಎಂದು ತಿಳಿಸಿದರು.

ಹೊಗೇನಕಲ್ ಪ್ರಾಂತ್ಯದಲ್ಲಿ ಸಮೀಕ್ಷೆ ನಡೆಸಲು ಮೂರು ವರ್ಷಗಳ ಹಿಂದೆ ಎರಡೂ ರಾಜ್ಯಗಳಿಗೆ ಸೇರಿದ ಜಂಟಿ ತಂಡವನ್ನು ರಚಿಸಿದ್ದರು. ಇದುವರೆಗೂ ತಮಿಳುನಾಡಿಗೆ ಸೇರಿದ ಅಧಿಕಾರಿಗಳು ಕೇವಲ ಒಂದು ಬಾರಿ ಮಾತ್ರ ಸಭೆಗೆ ಹಾಜರಾಗಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.

(ದಟ್ಸ್‌ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+