ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಶ್ಯಾವಾಟಿಕೆ : ಪೊಲೀಸನ ಹೆಂಡತಿ, ಮಗಳ ಬಂಧನ

By Staff
|
Google Oneindia Kannada News

ಬೆಂಗಳೂರು, ಮಾ.15 : ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿಯಿರುವ ಪೊಲೀಸ್ ಪೇದೆಯ ಮನೆಯ ಶಯ್ಯಾಗೃಹದಲ್ಲೇ ವೇಶ್ಯಾವಾಟಿಕೆ ನಡೆಯುತ್ತಿದ್ದುದನ್ನು ಪೊಲೀಸರು ಶುಕ್ರವಾರ ರಾತ್ರಿ ಬಯಲಿಗೆಳೆದಿದ್ದಾರೆ.

ಈ ಸಂಬಂಧ ಬಂಧಿತರಾದವರು ಸ್ವತಃ ಪೊಲೀಸ್ ಪೇದೆಯ ಹೆಂಡತಿ ಮತ್ತು ಹದಿಹರೆಯದ ಮಗಳು. ಹೆಂಡತಿ ಭಾಗ್ಯ ಮತ್ತು ಮಗಳು ಶಿಲ್ಪಾ ಎಂದು ತಿಳಿದುಬಂದಿದೆ. ವೇಶ್ಯಾವಾಟಿಕೆ ನಡೆಯುತ್ತಿರುವ ಖಚಿತ ಸುಳಿವಿನ ಮೇಲೆ ಕಾಟನ್‌ಪೇಟೆ ಪೊಲೀಸರು ಮೈಸೂರು ರಸ್ತೆಯಲ್ಲಿರುವ ಪೊಲೀಸ್ ಕ್ವಾರ್ಟರ್ಸ್ ಮೇಲೆ ದಾಳಿ ನಡೆಸಿ ತಾಯಿ ಮಗಳಿಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಸ್ವತಃ ಹೆಂಡತಿ ಮತ್ತು ಮಗಳನ್ನು ಇಂಥ ಅನೈತಿಕ ದಂಧೆಗೆ ಬಿಟ್ಟಿದ್ದ ಪೊಲೀಸ್ ಪೇದೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಆತ ಜಯನಗರದ ಠಾಣೆಯಲ್ಲಿ ಪೇದೆಯಾಗಿದ್ದಾನೆ ಎನ್ನಲಾಗಿದೆ.

ಸಿಕ್ಕಿಬಿದ್ದಿರುವ ಸಂಸಾರವನ್ನು ಕ್ವಾರ್ಟರ್ಸ್‌ನಿಂದ ಹೊರಹಾಕಿ ಮನೆಯನ್ನು ತೆರವುಗೊಳಿಸಬೇಕೆಂದು ಪೊಲೀಸ್ ವರಿಷ್ಠರು ಆದೇಶ ಹೊರಡಿಸಿದ್ದಾರೆ. ಅವರನ್ನು ವಶಕ್ಕೆ ತೆಗೆದುಕೊಂಡಿರುವ ಕಾಟನ್‌ಪೇಟೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

(ದಟ್ಸ್‌ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X