• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹುಬ್ಬಳ್ಳಿ-ಅಂಕೋಲಾ ರೈಲುಮಾರ್ಗ ಕೈಬಿಡಲು ಶಿಫಾರಸು

By Staff
|

ಹುಬ್ಬಳ್ಳಿ, ಮಾ.15 : ಹುಬ್ಬಳ್ಳಿ ಮತ್ತು ಅಂಕೋಲಾ ನಡುವಿನ ಬ್ರಾಡ್‌ಗೇಜ್ ಯೋಜನೆಯನ್ನು ಕೈಬಿಡುವಂತೆ ಕರ್ನಾಟಕ ಅರಣ್ಯ, ಜೀವವಿಜ್ಞಾನ ಮತ್ತು ಪರಿಸರ ಇಲಾಖೆ ಶಿಫಾರಸು ಮಾಡಿರುವುದು ಈ ರೈಲು ಸಂಪರ್ಕಕ್ಕಾಗಿ ಹೋರಾಡ‌ುತ್ತಿರುವ ಉತ್ತರ ಕರ್ನಾಟಕದ ಜನತೆಯನ್ನು ರೊಚ್ಚಿಗೆಬ್ಬಿಸುವಂತೆ ಮಾಡಿದೆ.

ಕರ್ನಾಟಕ ಅರಣ್ಯ, ಜೀವವಿಜ್ಞಾನ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಭಿಜಿತ್ ದಾಸ್‌ಗುಪ್ತಾ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಯೋಜನೆ ಕೈಬಿಡುವಂತೆ ಶಿಫಾರಸು ಮಾಡಿ ಬರೆದಿರುವ ಪತ್ರವನ್ನು ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಶಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದ ಗಮನಕ್ಕೆ ತಂದರು.

ಈ ಯೋಜನೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕೆಂದು ಉತ್ತರ ಕರ್ನಾಟಕದ ಜನತೆ ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಮುಂದಿನ ಕಾರ್ಯಯೋಜನೆಯನ್ನು ನಿಶ್ಚಯಿಸಲು ಸಂಸತ್ ಅಧಿವೇಶನದ ಬಳಿಕ ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆಯುವುದಾಗಿ ಜೋಶಿ ತಿಳಿಸಿದರು.

ಪತ್ರದಲ್ಲಿ ದಾಸ್‌ಗುಪ್ತಾ, ಯಲ್ಲಾಪುರ ವಿಭಾಗದ ಕಿರವತ್ತಿ ರೇಂಜ್‌ನಲ್ಲಿರುವ ಕಾಡಿನಲ್ಲಿ ಆನೆ ಸಂತತಿಗೆ ರೈಲು ಯೋಜನೆ ಧಕ್ಕೆ ಉಂಟುಮಾಡುತ್ತದೆ. ಅಲ್ಲದೆ, ಕಾಳಿ, ಬೇಡ್ತಿ ಮತ್ತು ಗಂಗಾವತಿ ನೀರಾವರಿ ಪ್ರದೇಶದಲ್ಲಿರುವ ಅಪರೂಪದ ಗಿಡಮರಗಳು ನಾಶವಾಗುತ್ತವೆಂದು ಹೇಳಿದ್ದಾರೆ.

ರೈಲು ಯೋಜನೆಗಾಗಿ ಈ ದಾರಿಯಲ್ಲಿ ಬರುವ ಬೃಹತ್ ಮರಗಳನ್ನು ಕಡಿದುಹಾಕುವುದರಿಂದ ಮಣ್ಣಿನ ಸವಕಳಿಯಾಗಿ ಪರಿಸರ ಹಾಳಾಗುವುದರಿಂದ ಯೋಜನೆಯನ್ನು ಕೈಬಿಡುವುದೇ ಒಳಿತು. ಯೋಜನೆಯಿಂದ ಜನಸಾಮಾನ್ಯರಿಗೆ ಯಾವುದೇ ಉಪಯೋಗವಿಲ್ಲ. ಕಬ್ಬಿಣ ಮತ್ತು ಮ್ಯಾಂಗನೀಜ್ ಅದಿರು ಸಾಗಣೆಗೆ ಮಾತ್ರ ಸಹಕಾರಿಯಾಗಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆಂದು ಜೋಶಿ ವಿವರಿಸಿದರು.

ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಜನತೆಯಲ್ಲಿ ಯೋಜನೆಯ ಉಪಯುಕ್ತತೆಯ ಬಗ್ಗೆ ತಿಳಿವಳಿಕೆ ಮೂಡಿಸಲು ಚಳವಳಿ ಹೂಡುವುದಾಗಿ ಜೋಶಿ ಹೇಳಿದರು.

(ಯುಎನ್ಐ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more