• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏಪ್ರಿಲ್‌ನಲ್ಲಿಯೇ ಚುನಾವಣೆ ನಡೆಸಲು ವೆಂಕಯ್ಯ ಆಗ್ರಹ

By Staff
|

BJP leader Venkaiah Naiduಬೆಂಗಳೂರು, ಮಾ.15 : ಕ್ಷೇತ್ರ ಪುನರ್‌ವಿಂಗಡನಾ ಕಾರ್ಯ ಸಂಪನ್ನವಾಗಿರುವುದರಿಂದ ಮೇ ಬದಲು ಏಪ್ರಿಲ್‌ನಲ್ಲಿಯೇ ರಾಜ್ಯದಲ್ಲಿ ಚುನಾವಣೆ ನಡೆಸಬೇಕೆಂದು ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಒತ್ತಾಯಿಸಿದ್ದಾರೆ.

ಕ್ಷೇತ್ರ ಪುನರ್‌ವಿಂಗಡನೆ ಕಾರ್ಯವನ್ನು ರಾಜ್ಯ ಚುನಾವಣಾ ಆಯೋಗ ಶೀಘ್ರವಾಗಿ ಮುಗಿಸಿದ್ದಕ್ಕೆ ಶ್ಲಾಘಿಸಿದ ಅವರು, ಮೇ ತಿಂಗಳಲ್ಲಿ ಬಿಸಿಲು ಜಾಸ್ತಿ ಇರುವುದರಿಂದ ಏಪ್ರಿಲ್ ತಿಂಗಳಿನಲ್ಲಿ ಚುನಾವಣೆ ನಡೆಸುವುದು ಸೂಕ್ತ ಎಂದು ಹೇಳಿದರು. ಮಾರ್ಚ್ 22ರೊಳಗೆ ಎರಡನೇ ಹಂತದ ಕ್ಷೇತ್ರ ಪುರನ್‌ವಿಂಗಡನೆಯೂ ಮುಗಿಯುವುದರಿಂದ ಚುನಾವಣೆ ದಿನಾಂಕವನ್ನು ಆದಷ್ಟು ಬೇಗನೆ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರದ ರೈತರ ಕಲ್ಯಾಣಕ್ಕಾಗಿ ಯಾವ ಪಕ್ಷ ಹೆಚ್ಚು ಶ್ರಮವಹಿಸಿದೆ ಎಂಬ ಬಗ್ಗೆ ಕಾಂಗ್ರೆಸ್‌ನೊಡನೆ ವಾಗ್ವಾದಕ್ಕೆ ಸಿದ್ಧ ಎಂದು ಸವಾಲೆಸೆದರು. ಕಾಂಗ್ರೆಸ್ ಪಕ್ಷ ರಾಷ್ಟ್ರವನ್ನು ಐವತ್ತು ವರ್ಷಗಳ ಕಾಲ ಆಳಿದೆ ಮತ್ತು ಹಾಳುಮಾಡಿದೆ ಮತ್ತು ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದೆ ಎಂದು ಯುಪಿಎ ಸರ್ಕಾರ ರೈತರ ಬಗ್ಗೆ ಕೈಗೊಂಡ ನೀತಿಯನ್ನು ಕಟುವಾಗಿ ಟೀಕಿಸಿದರು.

ಕೇಂದ್ರ ವಿತ್ತಮಂತ್ರಿ ಪಿ.ಚಿದಂಬರಂ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಮಾಡಿದ್ದು ಕಳೆದ ನಾಲ್ಕು ವರ್ಷಗಳಿಂದ ಕಡೆಗಣಿಸಲಾಗಿದ್ದ ರೈತರು ಮುಂದಿನ ಚುನಾವಣೆಯಲ್ಲಿ ಮತ ನೀಡುವಂತೆ ಪುಸಲಾಯಿಸುವ ತಂತ್ರ ಎಂದು ನಾಯ್ಡು ವ್ಯಂಗ್ಯವಾಡಿದರು. ಈ ಬಾರಿ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬಂದರೆ ರೈತರ ಶ್ರೇಯೋಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಭರವಸೆ ನೀಡಿದರು.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X