ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಣ್ಣುಮಕ್ಕಳಿಗೆ ಶೀಲಾ ದೀಕ್ಷಿತ್‌ರ ಹೊಸ ಯೋಜನೆ

By Staff
|
Google Oneindia Kannada News

ನವದೆಹಲಿ, ಮಾ.8: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಪ್ರಚಿ ಎಂಬ ನವಜಾತ ಹೆಣ್ಣು ಶಿಶುವಿನ ಪೋಷಕರಿಗೆ 10 ಸಾವಿರ ರೂ. ಚೆಕ್ ವಿತರಿಸುವ ಮೂಲಕ 'ಲಾಡ್ಲಿ' ಎಂಬ ಹೊಸ ಯೋಜನೆಗೆ ಶುಕ್ರವಾರ ಚಾಲನೆ ನೀಡಿದರು.

ಈ ಯೋಜನೆಯ ಪ್ರಕಾರ, ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುತ್ತಿದ್ದಂತೆ ಅವರ ಬ್ಯಾಂಕ್ ಖಾತೆಯಲ್ಲಿ 1ಲಕ್ಷ ರೂ.ಗಳನ್ನು ರಾಜ್ಯಸರ್ಕಾರ ಜಮೆಮಾಡುತ್ತದೆ. ಈ ಯೋಜನೆಯ ಲಾಭ ಪಡೆಯಬೇಕಾದರೆ ಆ ಹೆಣ್ಣು ಮಗುವಿನ ಪೋಷಕರ ವಾರ್ಷಿಕ ಆದಾಯ 1 ಲಕ್ಷ ರೂ.ಗಳನ್ನು ಮೀರಿರಬಾರದು.

ಈ ಒಂದು ಯೋಜನೆ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿದೆ. ಹೆಣ್ಣು ಮಗು ಯಾವುದೇ ಪೋಷಕರಿಗೂ ಹೊರೆಯಾಗಬಾರದು ಎಂಬ ಉದ್ದೇಶದಿಂದ ಹಾಗೂ ಭ್ರೂಣ ಹತ್ಯೆಯನ್ನು ತಡೆಗಟ್ಟ ಬೇಕೆನ್ನುವ ಮಹದಾಸೆಯಿಂದ 'ಲಾಡ್ಲಿ' ಯೋಜನೆಯನ್ನು ಜಾರಿಗೆ ತರಲಾಗಿದೆ. ಹೆಣ್ಣು ಮಕ್ಕಳು ಇಂದು ಕುಟುಂಬದ ಪ್ರಗತಿಯ ಸಂಕೇತವಾಗಿದ್ದಾರೆ ಎಂದು ಶೀಲಾ ದೀಕ್ಷಿತ್ ತಿಳಿಸಿದರು.

ಭಾರತೀಯ ಸ್ಟೇಟ್ ಬ್ಯಾಂಕ್ ಸಹಯೋಗದೊಂದಿಗೆ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಹೆಣ್ಣು ಮಗು ಹುಟ್ಟುತ್ತಿದ್ದಂತೆ ಮಗುವಿನ ಹೆಸರಿನಲ್ಲಿ 10 ಸಾವಿರ ರೂ.ಗಳನ್ನು ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಲಾಗುತ್ತದೆ. ಒಂದು, ಆರು, ಒಂಬತ್ತು, ಹತ್ತು ಹಾಗೂ ಹನ್ನೆರಡನೇ ತರಗತಿಗಳಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ 5 ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಬ್ಯಾಂಕ್ ಖಾತೆಯಲ್ಲಿ ಸಂಗ್ರಹವಾಗುವ ಈ ಹಣವನ್ನು ಹುಡುಗಿಯ ವಿದ್ಯಾಭ್ಯಾಸಕ್ಕೆ ಹಾಗೂ ಮದುವೆಗೆ ಉಪಯೋಸಬಹುದು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X