ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರುಷರನ್ನು ಮೀರಿಸಿದ ಭಾರತ ನಾರಿಯರ ಸಾಧನೆ

By Staff
|
Google Oneindia Kannada News

Indian Women works 60 hrs in a week:Studyನವದೆಹಲಿ, ಮಾ.8: ದುಡಿಮೆಯಲ್ಲಿ ಭಾರತೀಯ ಮಹಿಳೆಯರು ಪುರುಷರಿಗಿಂತ ಮುಂದಿದ್ದಾರೆ. ಭಾರತೀಯ ಮಹಿಳೆಯರ ದುಡಿಮೆ ವಾರಕ್ಕೆ 60 ಗಂಟೆಗಳಿಗೂ ಅಧಿಕ ಎಂದು ವಾಣಿಜ್ಯೋದ್ಯಮ ಮಹಾ ಸಂಘಗಳ ಒಕ್ಕೂಟದ(ಅಸೋಚಾಮ್) ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಬಿಡುಗಡೆ ಮಾಡಲಾದ ವರದಿಯಲ್ಲಿ ತಿಳಿಸಿದೆ.

ಸಾಂಪ್ರದಾಯದ ಭಾರತೀಯ ಕುಟುಂಬದಲ್ಲಿ ಪತಿ, ಅತ್ತೆ ದುಡಿಯುತ್ತಿರುವ ಮಹಿಳೆಯನ್ನು ಬೆಂಬಲಿಸುತ್ತಿದ್ದಾರೆ. ಕಚೇರಿಯಿಂದ ಮನೆಗೆ ಬರುವುದು ತಡವಾದರೂ ಮನೆಯವರು ಗೊಣಗುವುದಿಲ್ಲ. ಸರ್ಕಾರಿ ಕಚೇರಿಗಳಲ್ಲೂ ಮಹಿಳೆಯರು ದುಡಿಯುವ ಅವಧಿ ಹೆಚ್ಚುತ್ತಿದೆ. ಮಹಿಳೆಯರು ಮಾಡುವ ಉದ್ಯೊಗಗಳಲ್ಲಿ ದಕ್ಷತೆ ಹೆಚ್ಚುತ್ತಿರುವ ಕಾರಣ ಅವರಿಗೆ ಸಿಗುವ ಸಂಬಳ, ಇತರ ಭತ್ಯೆಗಳು ಹೆಚ್ಚುತ್ತಿವೆ ಎನ್ನುತ್ತಾರೆ ವಾಣಿಜ್ಯೋದ್ಯ ಮಹಾ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ವೇಣುಗೋಪಾಲ್ ಎನ್. ದೂತ್.

ಶಿಕ್ಷಕ ವೃತ್ತಿ, ಹೊಲಿಗೆ ವೃತ್ತಿ, ನೇಯ್ಗೆ, ಶಿಶು ವಿಹಾರದಂತಹ ವೃತ್ತಿಗಳನ್ನು ಮಹಿಳೆಯರು ಈಗ ಹೆಚ್ಚಾಗಿ ಇಷ್ಟಪಡುತ್ತಿಲ್ಲ. ವಿಮಾನ ಯಾನ, ಮುದ್ರಣ ಹಾಗೂ ಟಿವಿ ಮಾಧ್ಯಮ, ಸೇವಾ ಕ್ಷೇತ್ರ, ಬ್ಯಾಂಕಿಂಗ್ ಮತ್ತು ವಾಣಿಜ್ಯ, ಐಟಿ, ವೈದ್ಯಕೀಯ ವೃತ್ತಿಗಳನ್ನು ಈಗಿನ ಭಾರತೀಯ ಮಹಿಳೆಯರು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಪುರುಷರ ಪ್ರಾಬಲ್ಯ ಹೆಚ್ಚಾಗಿದ್ದ ಎಂಜಿನಿಯರಿಂಗ್, ಸೇನೆ, ಪೊಲೀಸ್, ಅರೆ ಸೇನಾ ಪಡೆಗಳಿಗೂ ಮಹಿಳೆಯರು ಪಾದರ್ಪಣೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ಷೇತ್ರಗಳಲ್ಲಿ ಪುರುಷರಿಗೆ ತೀವ್ರ ಸ್ಪರ್ಧೆಎದುರಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X