ಅರುವತ್ತು ಸಾವಿರ ಕೋಟಿ ಸಾಲ ಮನ್ನಾ
ನವದೆಹಲಿ, ಫೆ 29: ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಡಲಾಗಿದೆ; ಗ್ರಾಮೀಣ ಪ್ರದೇಶಗಳ, ಮುಖ್ಯವಾಗಿ ರೈತರ ಮತ ಗಿಟ್ಟಿಸಿಕೊಳ್ಳುವ ಗಿಮಿಕ್ ಆಗಿದೆ ; ಅಥವಾ ಶ್ರೀಸಾಮಾನ್ಯನ ಬದುಕು ಸುಧಾರಿಸುವ ಉದ್ದೇಶದ ಮುಲಾಮು ಮುಂಗಡಪತ್ರ ಆಗಿದೆ. ಹೇಗಾದರೂ ಬಣ್ಣಿಸಿರಿ.ಅಂತೂ, ಇಂದು ಪಿ. ಚಿದಂಬರಂ ಮಂಡಿಸಿದ ಮುಂಗಡಪತ್ರ ಜನಪರ ಬಜೆಟ್ ಎಂಬುದರಲ್ಲಿ ಎರಡು ಮಾತಿಲ್ಲ.
2008-09 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವ ಪಿ. ಚಿದಂಬರಂ ಅವರು ಕೃಷಿ ಕ್ಷೇತ್ರಕ್ಕೆ ಒತ್ತುಕೊಟ್ಟಿರುವುದು ನಿಚ್ಚಳವಾಗಿದೆ. ಮುಖ್ಯವಾಗಿ ಎರಡು ಹೆಕ್ಟೇರ್ ಗಳಿಗೆ ಮೀರದ ರೈತರ ಸಾಲಮನ್ನಾ ಬೃಹತ್ ಪ್ರಮಾಣದಲ್ಲಿದೆ. ಒಟ್ಟು ಬ್ಯಾಂಕ್ ಸಾಲದ ಶೇಕಡಾ 4ರಷ್ಟು ಹಣ ಈ ಸಾಲ ಮನ್ನಾ ನುಂಗಿಹಾಕಿದೆ. ಶಿಕ್ಷಣ ವಿಭಾಗಕ್ಕೂ ಈ ಮುಂಗಡಪತ್ರ ವಿಶೇಷ ಒಲವು ತೋರಿಸಿದೆ. ಮಹಿಳೆ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸಾಕಷ್ಟು ಹಣ ಮೀಸಲಿಡಲಾಗಿದೆ.
ಹಾಗಂತ, ಚಿದಂಬರಂ ನಗರವಾಸಿಗಳನ್ನು ಕಡೆಗಣಿಸಿದ್ದಾರೆ ಎಂದೇನಲ್ಲ. ಸಂಬಳದಾರರಿಗೆ ಆದಾಯತೆರಿಗೆ ಬಿಸಿ ಹೆಚ್ಚಾಗದಂತೆ ಕಾಳಜಿ ವಹಿಸಿದ್ದಾರೆ. ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ರಿಯಾಯ್ತಿ ಜಾಸ್ತಿ ಕೊಟ್ಟಿದ್ದಾರೆ. ಮೇಲ್ವರ್ಗದ ಜನತೆಯರ ಅನುಕೂಲಕ್ಕಾಗಿ ಕಾರುಗಳ ಮೇಲಿಗೆ ಇಳಿದಿದೆ. ಇನ್ನು ದ್ವಿಚಕ್ರ ವಾಹನಗಳ ಬೆಲೆಗಳೂ ಇಳಿಯಲಿದ್ದು ಮಧ್ಯಮ ವರ್ಗದ ಜನತೆಗೆ ಅಲ್ಪಸ್ವಲ್ಪ ಹೊರೆ ಕಡಿಮೆ ಆಗುತ್ತದೆ.
ಇಸವಿ 2008ರ ಶ್ರೀಸಾಮಾನ್ಯನ ಅನಿವಾರ್ಯ ಸಂಗಾತಿಯಾಗಿರುವ ಸೆಲ್ ಫೋನ್ ಗಳ ಬೆಲೆ ಹೆಚ್ಚಾಗುತ್ತದೆ. ಸಿಗರೇಟ್ ಬೆಲೆ ಯಥಾಪ್ರಕಾರ ಹೆಚ್ಚಳವಾಗಿದೆ. ರಿಯಾಯ್ತಿ ವಿನಾಯ್ತಿಗಳ ಐಟಂವಾರು ವಿವರಗಳು ಕೆಳಕಂಡಂತಿವೆ :
ಕೃಷಿ ಕ್ಷೇತ್ರ
*250 ಜಿಲ್ಲೆಗಳಲ್ಲಿ ಒಟ್ಟು 500 ಮಣ್ಣು ಪರೀಕ್ಷಾ ಪ್ರಯೋಗಾಲಯಗಳ ಸ್ಥಾಪನೆಗೆ 75 ಕೋಟಿ ರು ನೀಡಿಕೆ.
*ಕೇಂದ್ರ ತೋಟಗಾರಿಕಾ ಇಲಾಖೆಯ ಯೋಜನೆಗೆ 1,100 ಕೋಟಿ ಅನುದಾನ
* ಹವಾಮಾನ ಆಧಾರಿತ ಕೃಷಿ ವಿಮೆ ಯೋಜನೆಗೆ 50 ಕೋಟಿ ರು ನೀಡಿಕೆ.
*ಟೀ ಸಂಶೋಧನಾ ಕೇಂದ್ರಗಳಿಗೆ 20 ಕೋಟಿ ರು ಅನುದಾನ
*ಕಾಫಿ ಹಾಗೂ ಗೋಡಂಬಿ ಬೆಳೆಗಾರರಿಗೆ ಹೆಚ್ಚಿನ ಸೌಲಭ್ಯ
* ರಾಷ್ಟ್ರೀಯ ಕೃಷಿ ವಿಕಾಸ ಯೋಜನಗೆ 2,80,000 ಕೋಟಿ ರು ನಿಗದಿ
*ಅತಿ ಸಣ್ಣ ನೀರಾವರಿ ಯೋಜನೆಗೆ 500 ಕೋಟಿ ರು ನೀಡಿಕೆ.
* 53 ಸಣ್ಣ ನೀರಾವರಿ ಯೋಜನೆಗಳ ಅನುಷ್ಠಾನ.
*2007 ಸಾಲಿನಲ್ಲಿ ದಾಖಲೆ ಪ್ರಮಾಣದ219.32 ಮಿಲಿಯನ್ ಟನ್ ಆಹಾರ ಧಾನ್ಯ ಉತ್ಪಾದನೆ
ಶಿಕ್ಷಣ ಕ್ಷೇತ್ರ:
*ಜವಹರ ನವೋದಯ ಶಾಲೆಗಳಿಗೆ 140 ಕೋಟಿ ರೂ ನೀಡಿಕೆ.
*20 ಜಿಲ್ಲೆಗಳಲ್ಲಿ ಹೊಸ ನವೋದಯ ಶಾಲೆಗಳ ಸ್ಥಾಪನೆ. ಸುಮಾರು 410 ವಿದ್ಯಾಲಯಗಳ ಸ್ಥಾಪನೆ ಗುರಿ..
*ಆಂಧ್ರ, ಬಿಹಾರ್ ಹಾಗೂ ರಾಜಸ್ಥಾನದಲ್ಲಿ 3 ಐಐಟಿಗಳ ಸ್ಥಾಪನೆ.
*16 ಕೇಂದ್ರೀಯ ವಿಶ್ವವಿದ್ಯಾಲಯಗಳ ಸ್ಥಾಪನೆ.
*ಪ್ರೌಢ ಶಿಕ್ಷಣ ಯೋಜನೆಗೆ 4554 ಕೋಟಿ ರು ಮೀಸಲು.
*ಭೂಪಾಲ್ ಹಾಗೂ ತಿರುವನಂತಪುರದಲ್ಲಿ 3 ಐಐಎಸ್ ಸಿ ಸ್ಥಾಪನೆ.
*ಎಲ್ಲಾ ಜ್ಞಾನ ಕೇಂದ್ರಗಳನ್ನು ಬ್ರಾಂಡ್ ಬ್ಯಾಂಡ್ ಮೂಲಕ ಸಂಪರ್ಕ ಸಾಧ್ಯತೆ.
*ಎಲ್ಲಾ ವಿವಿಗಳ ನಡುವೆ ಡಿಜಿಟಲ್ ಸಂಪರ್ಕ ಸಾಧಿಸುವ ಗುರಿ.
*ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರತಿಭಾವಂತರಿಗೆ ಸ್ಕಾಲರ್ ಶಿಪ್ .
*ರಾಷ್ಟ್ರೀಯ ಜ್ಞಾನ ಸಂಪರ್ಕ ಯೋಜನಾ ಕೇಂದ್ರದ ಅಭಿವೃದ್ಧಿಗೆ 100 ಕೋಟಿ ನೀಡಿಕೆ
*ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 1500 ರು ಗಳಿಗೆ ಏರಿಕೆ.
*ಶಿಕ್ಷಣ ಆರೋಗ್ಯಕ್ಕೆ ಶೇ. 20 ರಷ್ಟು ಹಣ ಮೀಸಲು.
*80 ಕೋಟಿ ರು ಬಾಲಿಕ ವಿದ್ಯಾಲಯಕ್ಕೆ ನೀಡಿಕೆ.
*ಮಧ್ಯಾಹ್ನ ಬಿಸಿಯೂಟವನ್ನು ಉನ್ನತ ಮಾಧ್ಯಮಿಕ ಶಾಲೆಗಳಿಗೂ ವಿಸ್ತರಿಸಲಾಗುವುದು.
*ಬಿಸಿಯೂಟ ಯೋಜನೆಗೆ 8000 ಕೋಟಿ ರು ಮೀಸಲು
*ಸರ್ವ ಶಿಕ್ಷಣ ಅಭಿಯಾನಕ್ಕೆ 13,100 ಕೋಟಿ ರು. ಮೀಸಲು.
*ಭಾರತ ನಿರ್ಮಾಣ ಯೋಜನೆಗೆ 31,281 ಕೋಟಿ ರು
*34400 ಕೋಟಿ ರು ಶಿಕ್ಷಣ ಕ್ಷೇತ್ರಕ್ಕೆ ಮೀಸಲು
*6 ಸಾವಿರ ಉನ್ನತ ದರ್ಜೆಯ ಶಾಲೆಗಳ ನಿರ್ಮಾಣ
*ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಎಲ್ಲಾ ಜಿಲ್ಲೆಗಳಿಗೂ ವಿಸ್ತರಣೆ
*ಉದ್ಯೋಗ ಖಾತ್ರಿ ಯೋಜನೆಗೆ 16,000 ಕೋಟಿ ರು ಅನುದಾನ.
* 300 ಐಟಿಐ ಅಭಿವೃದ್ಧಿಗೆ 750 ಕೋಟಿ ರು ಅನುದಾನ
*ಮೈಸೂರು ವಿಶ್ವವಿದ್ಯಾಲಯಕ್ಕೆ 100 ಕೋಟಿ ರು ಅನುದಾನ
*ಮಾಹಿತಿ ತಂತ್ರಜ್ಞಾನ ವಲಯಕ್ಕೆ 1680 ಕೋಟಿರು
*300 ಐಟಿಐ ಅಭಿವೃದ್ಧಿಗೆ 750 ಕೋಟಿ ರು ಅನುದಾನ
*ಮೈಸೂರು ವಿಶ್ವವಿದ್ಯಾಲಯಕ್ಕೆ 100 ಕೋಟಿ ರು ಅನುದಾನ
*ಮದರಸಗಳ ಅಭಿವೃದ್ಧಿಗೆ 45.5 ಕೋಟಿ ಅನುದಾನ
ಮಹಿಳೆ ಮತ್ತು ಅಲ್ಪ ಸಂಖ್ಯಾತರು:
*ಮಹಿಳೆಯರಿಗೆ 1.8 ಲಕ್ಷದವರೆಗೆ ತೆರಿಗೆ ವಿನಾಯಿತಿ
*ಹಿರಿಯ ನಾಗರೀಕರಿಗೆ ಆದಾಯ ಮಿತಿ 2.25 ಲಕ್ಷಕ್ಕೆ ನಿಗದಿ
* ಅಲ್ಪ ಸಂಖ್ಯಾತರ ಇಲಾಖೆಗೆ 1000 ಕೋಟಿ ರು ಅನುದಾನ.
*ಮಕ್ಕಳ ಅಭಿವೃದ್ಧಿ ಯೋಜನೆಗೆ ಶೇ. 24 ರಷ್ಟು ಹೆಚ್ಚಿನ ಅನುದಾನ
*ಮಹಿಳಾ ಕಲ್ಯಾಣಯೋಜನೆಗಳಿಗೆ 11,460 ಕೋಟಿ ರು ನಿಗದಿ
* ಪೊಲಿಯೋ ನಿರ್ಮೂಲನ ಯೋಜನೆಗೆ 1,042 ಕೋಟಿ ರು
ಬ್ಯಾಕಿಂಗ್ /ಆದಾಯತೆರಿಗೆ:
*ಆದಾಯ ತೆರಿಗೆ ಮಿತಿ 1.5 ಲಕ್ಷಕ್ಕೆ ಏರಿಕೆ
*ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ಇಳಿಕೆ
*ಕಾರ್ಪೋರೇಟ್ ವಲಯದ ತೆರಿಗೆಯಲ್ಲಿ ಯಾವುದೇ ಬದಲಾವಣೆಇಲ್ಲ
*ಬ್ಯಾಂಕ್ ವಹಿವಾಟು ತೆರಿಗೆ ರದ್ದು
*ಕಸ್ಟಮ್ಸ್ ಸುಂಕದಲ್ಲಿ ಬದಲಾವಣೆ ಇಲ್ಲ
*ಸುರಕ್ಷಿತ ಬ್ಯಾಕಿಂಗ್ ವಹಿವಾಟಿಗೆ PAN(Permanent Account Number) ಕಾರ್ಡ್ ನ ಅವಶ್ಯಕತೆ
ವಾಹನ:
*ಸಣ್ಣ ಕಾರುಗಳ ಮೇಲೆ ತೆರಿಗೆ ಸುಂಕ ಶೇ14ರಷ್ಟು ಇಳಿಕೆ
*ಹೈಬ್ರೀಡ್ ಕಾರುಗಳ ಬೆಲೆ ಇಳಿಕೆ
*ಸಣ್ಣಕಾರುಗಳ ಮೇಲೆ ಶೇ.16ರಿಂದ ಶೇ. 12ಕ್ಕೆ ತೆರಿಗೆ ಇಳಿಕೆ
*ದ್ವಿಚಕ್ರ ವಾಹನಗಳ ಮೇಲಿನ ತೆರಿಗೆ ಇಳಿಕೆ
*ಬ್ರಾಂಡ್ ರಹಿತ ಡೀಸೆಲ್ ಮೇಲೆ ಪ್ರತಿ ಲೀಟರ್ ಗೆ 4.6 ರು ಸುಂಕ
* ಬಸ್ಸುಗಳು, ಚಾಸೀಸ್ ತಯಾರಿಕೆ ಮೇಲಿನ ಸುಂಕಕ್ಕೆ ವಿನಾಯಿತಿ
* ತೈಲ ನಿಕ್ಷೇಪ ಸಂಶೋಧನೆಗೆ ವಿದೇಶಿ ಬಂಡಾವಳ 8 ಬಿಲಿಯನ್ ಡಾಲರ್ ಹೂಡಿಕೆ.
ಆರೋಗ್ಯ:
*ಜೀವ ರಕ್ಷಕ ಔಷಧಿಗಳ ಮೇಲೆ ಶೇ. 5 ರಷ್ಟು ತೆರಿಗೆ ಇಳಿಕೆ
*ಔಷಧಿ ಉತ್ಪನ್ನಗಳ ಮೇಲೆ ಶೇ.14ರಷ್ಟು ತೆರಿಗೆ ಕಡಿತ
*ಹೊಸ ಆಸ್ಪತ್ರೆಗಳಿಗೆ 5 ವರ್ಷಗಳ ವರೆಗೆ ತೆರಿಗೆ ಇಲ್ಲ
*ಗ್ರಾಮೀಣ ಆರೋಗ್ಯ ಸೌಲಭ್ಯ ಹೆಚ್ಚಳಕ್ಕೆ 12,050 ಕೋಟಿ ರು ನಿಗದಿ
ಮನರಂಜನೆ:
*ಕೇಬಲ್ ಸೆಟ್ ಅಪ್ ಬಾಕ್ಸ್ ಗಳ ಮೇಲೆ ಸಂಪೂರ್ಣ ತೆರಿಗೆ ರದ್ದು
*ಸೆಲ್ ಫೋನ್ ಗಳ ಬೆಲೆ ದುಬಾರಿ.
*ಬ್ರಾಂಡ್ ಬ್ಯಾಂಡ್ ಇಂಟರ್ ನೆಟ್ ದರ ಇಳಿಕೆ.
ಇತರೆ:
*ಹುಲಿ ಸಂರಕ್ಷಣೆಗೆ 50 ಕೋಟಿ ರು ನೀಡಿಕೆ
* ಕೊಳಚೆ ಮತ್ತು ಒಳಚರಂಡಿ ಅಭಿವೃದ್ಧಿಗೆ 1200 ಕೋಟಿ ರು ನಿಗದಿ
* ಜಲಕ್ಷಾಮ ಉಳ್ಳ ಪ್ರದೇಶಗಳ ಅಭಿವೃದ್ಧಿಗಾಗಿ ವಿಶ್ವಬ್ಯಾಂಕ್ ಜತೆಗೆ 730 ಮಿಲಿಯನ್ ಡಾಲರ್ ಒಪ್ಪಂದ
* 6 ನೇ ಕೇಂದ್ರ ವೇತನ ಆಯೋಗ ತನ್ನ ವರದಿಯನ್ನು ಮಾರ್ಚ್ 31ಕ್ಕೆ ಸಲ್ಲಿಸಲಿದೆ.
* ಲಾಭ ರಹಿತ ಕೇಂದ್ರಗಳ ತಾಂತ್ರಿಕತೆ ಹೆಚ್ಚಳಕ್ಕೆ 15,000 ಕೋಟಿ ರು ನಿಗದಿ
(ದಟ್ಸ್ ಕನ್ನಡವಾರ್ತೆ)
ಪೂರಕ ಓದಿಗೆ:
ಕೇಂದ್ರ ಬಜೆಟ್ : ಸಂಬಳದಾರರಿಗೆ ಸಂತಸದ ಸುದ್ದಿ
ಸಣ್ಣ ಮತ್ತು ಮಧ್ಯಮ ರೈತರ ಸಾಲ ಸಂಪೂರ್ಣ ಮನ್ನಾ
ಬಜೆಟ್ 08-09 : ಶಿಕ್ಷಣ ಕ್ಷೇತ್ರಕ್ಕೆ ಏನು ಸಿಕ್ಕಿದೆ?
ಕೇಂದ್ರ ಬಜೆಟ್ 2008-09ನ ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications