ಶಂಕಿತ ಉಗ್ರರ ನ್ಯಾಯಾಂಗ ಬಂಧನಕ್ಕೆ ಆದೇಶ
ದಾವಣಗೆರೆ, ಫೆ.15: ಶಂಕಿತ ಉಗ್ರರಾದ ರಿಯಾಜುದ್ದೀನ್ ನಾಸೀರ್ ಮತ್ತು ಅಸಾದುಲ್ಲಾ ಅಬುಬಕರ್ ಅವರನ್ನು ಫೆ.28ರವರೆಗೆ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಶುಕ್ರವಾರ ಆದೇಶಿಸಿತು.
ಶಂಕಿತ ಉಗ್ರರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಓಡಿ ಪೊಲೀಸರು ಹೆಚ್ಚಿನ ವಿಚಾರಣೆಗೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದರು. ಸುಮಾರು 30 ನಿಮಿಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಧೀಶ ಜಿನರಾಳಕರ್ ಅವರು ಬಂಧಿತರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ನಂತರ ಉಗ್ರರನ್ನು ಬಿಗಿ ಬಂದೋಬಸ್ತ್‌ನಲ್ಲಿ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ಹೈದರಾಬಾದ್ ಮೂಲದ ರಿಯಾಜುದ್ದೀನ್ ಪಾಕ್‌ನ ಮುಜಫರಾಬಾದ್‌ನಲ್ಲಿ ಉಗ್ರವಾದದ ತರಬೇತಿ ಪಡೆದಿದ್ದ ವಿಚಾರವನ್ನು ಮಂಪರು ಪರೀಕ್ಷೆಯಲ್ಲಿ ಬಾಯ್ಬಿಟ್ಟಿದ್ದ. ಸಿಓಡಿ ಐಜಿಪಿ ಶ್ರೀಕಂಠಪ್ಪ, ಡಿವೈಎಸ್‌ಪಿ ವಿ.ಎಂ.ಜ್ಯೋತಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಕರೆತಂದಿದ್ದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications