ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ರಾಜ್ ಹುಟ್ಟುಹಬ್ಬದಂದು ಕನ್ನಡಿಗರಿಗೆ ಹೊಸ ಪಕ್ಷ

By Staff
|
Google Oneindia Kannada News

ಡಾ.ರಾಜ್ ಹುಟ್ಟುಹಬ್ಬದಂದು ಕನ್ನಡಿಗರಿಗೆ ಹೊಸ ಪಕ್ಷಬೆಂಗಳೂರು, ಫೆ.10: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲರು ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ.ಚಂಪಾ ಅವರ ಪಕ್ಷಕ್ಕೆ 'ಸ್ವಾಭಿಮಾನಿ ಕರ್ನಾಟಕ ಪಕ್ಷ' ಎಂದು ಹೆಸರಿಸಲಾಗಿದೆ. ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟುಹಬ್ಬ(ಏ.24)ದಂದು ಹೊಸ ಪಕ್ಷವನ್ನು ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು ಚಂದ್ರಶೇಖರ ಪಾಟೀಲರು ಸುದ್ದಿಗಾರರಿಗೆ ತಿಳಿಸಿದರು.

ಕರ್ನಾಟಕದಲ್ಲಿರುವ ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ, ಸಮಾನ ಮನಸ್ಕರನ್ನು ಒಂದುಗೂಡಿಸಿ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವುದು ನಮ್ಮ ಉದ್ದೇಶವಾಗಿದೆ.ಕನ್ನಡ ನೆಲ ಜಲಕ್ಕೆ ಅನ್ಯಾಯವಾಗುವುದನ್ನು ತಡೆಗಟ್ಟಲು ರಾಜಕೀಯ ಶಕ್ತಿಯನ್ನು ಒಗ್ಗೂಡಿಸುವುದು ನಮ್ಮ ಆಶಯ. ಕನ್ನಡ ಪರ ಸಂಘಟನೆಗಳು, ದಲಿತ ಸಂಘಗಳು,ರೈತ ಸಂಘಗಳು ರಾಜ್ಯದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರವಹಿಸುತ್ತಾ ಬಂದಿವೆ. ಈ ಸಂಘಟನೆಗಳ ಜತೆ ಪರಸ್ಪರ ಮಾತುಕತೆ ನಡೆಸಲಾಗುವುದು ಎಂದು ಚಂಪಾ ಹೇಳಿದರು.
ಪಕ್ಷದ ಪ್ರಮುಖ ಸದಸ್ಯರುಗಳು:

ಪ್ರೊ.ಚಂಪಾ(ಅಧ್ಯಕ್ಷ),ರು.ಬಸಪ್ಪ (ಉಪಾಧ್ಯಕ್ಷ),ದ್ವಾರನಕುಂಟೆ ಪಾತಣ್ಣ(ಪ್ರಧಾನಕಾರ್ಯದರ್ಶಿ), ರಮಾದೇವಿ ವಿಶ್ವೇಶ್ವರಯ್ಯ, ನೆ.ಬ.ರಾಮಲಿಂಗಶೆಟ್ಟಿ ೯ಸಹ ಕಾರ್ಯದರ್ಶಿ), ನಾ.ಮಲ್ಲಿಕಾರ್ಜುನ (ಖಜಾಂಚಿ).

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಉಳಿವುದೇ?
ರಾಜ್ಯದಲ್ಲಿ ಗೋಕಾಕ ಚಳವಳಿಯ ಕಾಲದಿಂದ ಪ್ರಾದೇಶಿಕ ಪಕ್ಷಕ್ಕೊಂದು ಆಯಾಯ ಸಿಗದೆ ಅಸ್ತಿತ್ವ ಕಳೆದುಕೊಂಡಿರುವುದು ಕಂಡು ಬರುತ್ತದೆ.ಕೆಲ ರಾಜಕಾರಣಿಗಳು ಪ್ರಮುಖ ಪಕ್ಷ ತೊರೆದು ,ಹೊಸ ಪಕ್ಷ ಕಟ್ಟಿ, ಅದನ್ನು ಬೆಳಸಲು ಆಗದೆ ಹೆಣಗಿದ್ದನ್ನು ನೋಡಬಹುದು.ಪಿ.ಲಂಕೇಶರ ಪ್ರಗತಿರಂಗ, ಪ್ರೊ.ನಂಜುಂಡಸ್ವಾಮಿಯವರಕನ್ನಡದೇಶ, ವಿಜಯಸಂಕೇಶ್ವರರ ಕನ್ನಡನಾಡು, ದೇವನೂರು ಮಹಾದೇವರ ಸರ್ವೋದಯ ಪಕ್ಷ ತನ್ನದೇ ಆದ ಕಾರಣಗಳಿಂದ ಬೆಳವಣಿಗೆ ಕಾಣದೆ ಮರೆಯಾದವು.

(ದಟ್ಸ್‌ಕನ್ನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X