ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ನಾರಾಯಣಮೂರ್ತಿಗೆ ಫ್ರಾನ್ಸ್ ದೇಶದ ಗೌರವ

By Staff
|
Google Oneindia Kannada News

ಇನ್ಫಿ ನಾರಾಯಣಮೂರ್ತಿಗೆ ಫ್ರಾನ್ಸ್ ದೇಶದ ಗೌರವನವದೆಹಲಿ, ಜ.27: ಐಟಿ ವಲಯದ ಸಾಧಕ, ಕನ್ನಡಿಗ ಇನ್ಫೋಸಿಸ್ ನ ಎನ್ .ಆರ್. ನಾರಾಯಣಮೂರ್ತಿ ಅವರಿಗೆ ಫ್ರಾನ್ಸ್ ದೇಶದ ಅತ್ಯುತ್ತಮ ನಾಗರಿಕ ಗೌರವವಾದ "ಆಫೀಸರ್ ಆಫ್ ದಿ ಲೇಜಸ್ ಆಫ್ ಹಾನರ್' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಶನಿವಾರ(ಜ.26)ಇಲ್ಲಿ ನಡೆದ ಸಮಾರಂಭದಲ್ಲಿ ಫ್ರಾನ್ಸ್ ದೇಶದ ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಖಾತೆ ಸಚಿವ ವಲೆರಿ ಪೆಕ್ರೆಸ್ಸೆ ಅವರಿಂದ, ನಾರಾಯಣಮೂರ್ತಿಯವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಸುಮಾರು 82,000 ಉದ್ಯೋಗಿಗಳನ್ನು ಹೊಂದಿರುವ ಇನ್ಫೋಸಿಸ್ ಬೆಳೆದು ಬಂದ ಹಾದಿ ಎಲ್ಲರಿಗೂ ಮಾದರಿಯಾಗಿದೆ ಎಂದು ಫ್ರಾನ್ಸ್ ನ ಸಚಿವರು ಈ ಸಂದರ್ಭದಲ್ಲಿ ಹೇಳಿದರು.

1802 ರಲ್ಲಿ ನಪೊಲಿಯನ್ ಬೋನಾಪರ್ಟೆ ಸ್ಥಾಪಿಸಿದ Legion of Honour ಪ್ರಶಸ್ತಿ, ಫ್ರೆಂಚ್ ರಿಪಬ್ಲಿಕ್ ನ ಅತ್ಯುತ್ತಮ ನಾಗರೀಕ ಪ್ರಶಸ್ತಿಯಾಗಿದೆ. ಫ್ರಾನ್ಸ್ ದೇಶದವರಲ್ಲದೆ, ವಿದೇಶದ ಅನೇಕ ಜನರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.ಭಾರತದಿಂದ ಸತ್ಯಜೀತ್ ರೇ, ಪಂಡಿತ್ ರವಿಶಂಕರ್, ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಗೆ ಈ ಪ್ರಶಸ್ತಿಯ ಗೌರವ ಲಭಿಸಿದೆ.

(ಏಜನ್ಸೀಸ್ )
ನಾರಾಯಣ ಮೂರ್ತಿಗೆ ಪದ್ಮವಿಭೂಷಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X