ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಕೀಪರ್ ಗಿಲ್ ಕ್ರಿಸ್ಟ್ ನಿವೃತ್ತಿ

By Staff
|
Google Oneindia Kannada News

ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಕೀಪರ್ ಗಿಲ್ ಕ್ರಿಸ್ಟ್ ನಿವೃತ್ತಿಅಡಿಲೇಡ್ , ಜ.27: ಕ್ರಿಕೆಟ್ ಜಗತ್ತಿನ ಶ್ರೇಷ್ಠ ವಿಕೇಟ್ ಕೀಪರ್ ಆಸ್ಟ್ರೇಲಿಯಾದ ಆಡಂ ಗಿಲ್ ಕ್ರಿಸ್ಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ವಿದಾಯ ಹೇಳಿದ್ದಾರೆ. ಹಠಾತ್ ನಿವೃತ್ತಿ ಘೋಷಣೆಗೆ ಯಾವುದೇ ಕಾರಣವನ್ನು ಗಿಲ್ ಕ್ರಿಸ್ಟ್ ನೀಡಿಲ್ಲ.

36 ರ ಹರೆಯದ ಗಿಲ್ ಕ್ರಿಸ್ಟ್ ಭಾರತ ವಿರುದ್ಧದ ಸರಣಿಯ ನಂತರ, ಕ್ರಿಕೆಟ್ ಜೀವನ ಮುಗಿಸಲಿದ್ದಾರೆ.ನಾನು ಪತ್ನಿ ಮೇಲ್ ಹಾಗೂ ಮಕ್ಕಳಾದ ಹ್ಯಾರಿಸನ್ ,ಆನ್ನಿ ಮತ್ತು ಆರ್ಚಿಯರೊಂದಿಗೆ ಹೆಚ್ಚಿನ ಸಮಯ ಕಳೆಯಲು ಇಚ್ಛಿಸಿದ್ದೇನೆ ಎಂದು ಆಡಂ ಹೇಳಿದ್ದಾರೆ.

ಪ್ರಸ್ತುತ ಸರಣಿಯಲ್ಲಿ ಸತತವಾಗಿ ಕ್ಯಾಚ್ ಗಳನ್ನು ಕೈಚೆಲ್ಲುವ ಮೂಲಕ ತಂಡದ ಸಹ ಆಟಗಾರರು, ಮಾಜಿ ಆಟಗಾರರಿಂದ ಟೀಕೆಗೆ ಗುರಿಯಾಗಿದ್ದರು. ಆಸೀಸ್ ನ ಮಾಧ್ಯಮ ಹಾಗೂ ಕ್ರಿಕೆಟ್ ವೀಕ್ಷಕ ವಿವರಣೆಗಾರರು ಕೂಡ ಆಡಂ ಅವರ ಅವರ ಆಟದ ಬಗ್ಗೆ ಅಪಸ್ವರ ಎತ್ತ್ತಿದ್ದರು. ಬಹುಶಃ ಇದರಿಂದ ಮನನೊಂದ ಗಿಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆ ಪ್ರಾರಂಭವಾಗಿದೆ.

ವಿಶ್ವದಾಖಲೆ(414 ವಿಕೆಟ್ ಬಲಿ ತೆಗೆದುಕೊಂಡಿದ್ದು) ಸಾಧಿಸಿದ ಬೆನ್ನಲ್ಲೇ ಈ ನಿವೃತ್ತಿ ಘೋಷಿಸಿದ್ದು, ಹಲವರ ಅಚ್ಚರಿಗೆ ಕಾರಣವಾಗಿದೆ. ಇಯಾನ್ ಹೀಲಿ ನಂತರ ಆಸೀಸ್ ಕಂಡ ಅತ್ಯುತ್ತಮ ವಿಕೇಟ್ ಕೀಪರ್ ಗಿಲ್ ಕ್ರಿಸ್ಟ್ ಎನ್ನಬಹುದು. ಏಳನೇ ಕ್ರಮಾಂಕದಲ್ಲಿ ಹಾಗೂ ಆರಂಭಿಕ ಆಟಗಾರನಾಗಿ ಗಿಲ್ ಕ್ರಿಸ್ಟ್ ಆಸೀಸ್ ಪರ ಅತಿ ವೇಗದ ಶತಕ ಹಾಗೂ ಟೆಸ್ಟ್ ನಲ್ಲಿ ಅತಿ ವೇಗದ ದ್ವಿಶತಕ ಗಳಿಸಿದ ಸಾಧನೆ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 100 ಸಿಕ್ಸರ್ ಬಾರಿಸಿರುವ ವಿಶ್ವದ ಏಕೈಕ ಆಟಗಾರರಾಗಿದ್ದಾರೆ.

ದಾಖಲೆ ವೀರ ಗಿಲ್ಲಿ:

ಪೂರ್ಣ ಹೆಸರು: ಆಡಂ ಕ್ರೇಗ್ ಗಿಲ್ ಕ್ರಿಸ್ಟ್
ಅಡ್ಡ ಹೆಸರು: ಗಿಲ್ಲಿ, ಚರ್ಚಿ
ಜನನ: 14 ನೇ ನವೆಂಬರ್ 1971, ಬೆಲ್ಲಿನ್ ಜೆನ್ , ಆಸ್ಟ್ರೇಲಿಯಾ
ಶೈಲಿ: ಎಡಗೈ ಆಟಗಾರ, ವಿಕೇಟ್ ಕೀಪರ್
ಟೆಸ್ಟ್ ಪಾದಾರ್ಪಣೆ: ಪಾಕಿಸ್ತಾನ ವಿರುದ್ಧ ಬ್ರಿಸ್ಬೆನ್, ನವೆಂಬರ್ 1999.
ಒಟ್ಟು ಟೆಸ್ಟ್ ಗಳು: 96; ರನ್ : 5,566
ಸರಾಸರಿ: 47.89, ಶತಕ:17, ಗರಿಷ್ಠ ಮೊತ್ತ: ಅಜೇಯ 204.
ವಿಕೇಟ್ ಕೀಪಿಂಗ್ ಸಾಧನೆ: ವಿಶ್ವ ದಾಖಲೆಯ 414 ಬಲಿ (377 ಕ್ಯಾಚ್, 37 ಸ್ಟಂಪಿಂಗ್)
ಏಕದಿನ ಪಂದ್ಯ: 277; ರನ್: 9,594; ಸರಾಸರಿ:36.03; ಶತಕ:15; ಗರಿಷ್ಠ:172
ವಿಕೇಟ್ ಕೀಪಿಂಗ್ ಸಾಧನೆ: ವಿಶ್ವದಾಖಲೆಯ 454 ಬಲಿ (401 ಕ್ಯಾಚ್, 53 ಸ್ಟಂಪಿಂಗ್)

(ದಟ್ಸ್ ಕ್ರಿಕೆಟ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X