ಪ್ರಮೀಳಾ ನೇಸರ್ಗಿಗೆ 'ಕನ್ನಡ ವೀರ'ಪ್ರಶಸ್ತಿ
ಗುಲ್ಬರ್ಗ, ಜ.17: ಪ್ರಸಕ್ತ ವರ್ಷದ 'ಕನ್ನಡ ವೀರ' ಪ್ರಶಸ್ತಿಯನ್ನು ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮೀಳಾ ನೇಸರ್ಗಿ ಸೇರಿದಂತೆ ಸ್ವಾತಂತ್ರ ಹೋರಾಟಗಾರ ಬುದ್ಧಿವಂತ ಶೆಟ್ಟಿ ಮತ್ತು ಬೆಂಗಳೂರು ಮೂಲದ ವಕೀಲರಾದ ಎಂ.ಎಸ್. ದೇವರಾಜ್ ಅವರಿಗೆ ಕೊಟ್ಟು ಸನ್ಮಾನಿಸಲಾಗಿದೆ.
ಕನ್ನಡ ಭಾಷೆ ಮತ್ತು ರಾಜ್ಯದ ಏಳಿಗೆಗಾಗಿ ಶ್ರಮಿಸಿದವರಿಗೆ ಕನ್ನಡ ಸೈನ್ಯ 'ಕನ್ನಡ ವೀರ' ಪ್ರಶಸ್ತಿಯನ್ನು ಪ್ರತಿ ವರ್ಷ ಕೊಟ್ಟು ಸನ್ಮಾನಿಸುತ್ತಿದೆ ಎಂದು ಕನ್ನಡ ಸೈನ್ಯದ ಅಧ್ಯಕ್ಷರಾದ ಸೋಮನಾಥ್ ಕಟ್ಟೇಮನಿ ಅವರು ತಿಳಿಸಿದರು. ಪಶಸ್ತಿ ಪ್ರದಾನ ಸಮಾರಂಭವನ್ನು ಮಾಜಿ ಶಾಸಕ ಅನಿಲ್ ಲಾಡ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತೋಂಟದಾರ್ಯ ಶಿವಾಚಾರ್ಯ ಸ್ವಾಮೀಜಿ ಮತ್ತು ಶಿವಯೋಗಿ ಮುರುಘರಾಜೇಂದ್ರ ಮಹಾಸ್ವಾಮಿಗಳು ಭಾಗವಹಿಸಿದ್ದರು.
(ದಟ್ಸ್‌ಕನ್ನಡ ವಾರ್ತೆ)












Click it and Unblock the Notifications