ಲಕ್ಷ್ಮೀ ಹೊರಟಳು ತವರಿಗೆ.. ಅವಳಿಗೆ ಶುಭವಾಗಲಿ..

Lakshmi
ಬೆಂಗಳೂರು, ಡಿ.15 : ಹೆಚ್ಚುವರಿಯಾಗಿ ಎರಡು ಕೈ ಮತ್ತು ಎರಡು ಕಾಲು ಹೊಂದಿದ್ದ ಎರಡು ವರ್ಷದ ಪುಟ್ಟ ಬಾಲಕಿ ಲಕ್ಷ್ಮಿ ಈಗ ಸಾಮಾನ್ಯ ಸ್ಥಿತಿಗೆ ಮರಳಿದ್ದು, ಶನಿವಾರ(ಡಿ.15) ಮನೆಗೆ ತೆರಳುತ್ತಿದ್ದಾಳೆ.

ತವರು ನೆಲ ಬಿಹಾರಕ್ಕೆ ತೆರಳುತ್ತಿರುವ ಲಕ್ಷ್ಮೀಯ ಹೆತ್ತವರ ಮುಖದಲ್ಲಿ ಸಂತೃಪ್ತ ಭಾವ. ವೈದ್ಯಕೀಯ ರಂಗಕ್ಕೆ ಸವಾಲಾಗಿದ್ದ ಈ ಬಾಲಕಿಯನ್ನು, ಸಾಮಾನ್ಯ ಸ್ಥಿತಿಗೆ ತರುವಲ್ಲಿ ಬೆಂಗಳೂರಿನ ಸ್ಪರ್ಶ್ ಆಸ್ಪತ್ರೆ ಯಶಸ್ವಿಯಾಗಿದೆ. ನ.6ಮತ್ತು 7ರಂದು ಸುದೀರ್ಘ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು, ಹೆಚ್ಚುವರಿ ಭಾಗಗಳನ್ನು ದೇಹದಿಂದ ಬೇರ್ಪಡಿಸುವಲ್ಲಿ ಸಫಲರಾದರು.

ಶನಿವಾರ ಬೆಳಗ್ಗೆ ಲಕ್ಷ್ಮೀ ಕುಟುಂಬ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿತು. ಆಸ್ಪತ್ರೆ ಸಿಬ್ಬಂದಿಯ ಸೇವೆ ಮತ್ತು ಬೆಂಗಳೂರು ಜನರ ಪ್ರೀತಿಗೆ ಪೋಷಕರು ಧನ್ಯವಾದವನ್ನು ಅರ್ಪಿಸಿದ್ದಾರೆ.

ದೆಹಲಿ ಸೇರಿದಂತೆ ವಿವಿಧ ನಗರಗಳ ಆಸ್ಪತ್ರೆಗಳು ಶಸ್ತ್ರ ಚಿಕಿತ್ಸೆಗೆ ಕೈಚೆಲ್ಲಿದ್ದರು. ಶಸ್ತ್ರ ಚಿಕಿತ್ಸೆಗೆ 2.40 ಲಕ್ಷ ರೂಪಾಯಿ ವೆಚ್ಚವಾಗಿದ್ದು, ಸ್ಪರ್ಶ್ ಆಸ್ಪತ್ರೆ ಯಾವುದೇ ಹಣ ಪಡೆಯದೇ ಉಚಿತವಾಗಿ ಶಸ್ತ್ರ ಚಿಕಿತ್ಸೆ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+