ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.26,27: ಬೆಂಗಳೂರಿನಲ್ಲಿ ಸಕತ್ ಟ್ರಾಫಿಕ್ ಕಿರಿಕ್!

By Staff
|
Google Oneindia Kannada News

ಬೆಂಗಳೂರು, ಅ.25 : ನೆದರ್ ಲ್ಯಾಂಡ್ ರಾಣಿ ಬ್ರೀಟಿಕ್ನ್ ಅವರು ಶುಕ್ರವಾರ ನಗರಕ್ಕೆ ಆಗಮಿಸುತ್ತಿದ್ದಾರೆ. ಅವರ ಎರಡು ದಿನಗಳ ಭೇಟಿ ಹಿನ್ನೆಲೆಯಲ್ಲಿ, ನಗರದ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಅ.26ರಂದು ಬೆಳಗ್ಗೆ 10:30ರಿಂದ 11:30ರವರೆಗೆ ವಿಮಾನ ನಿಲ್ದಾಣ ರಸ್ತೆ, ಮಧ್ಯಾಹ್ನ 2:30ರಿಂದ ಸಂಜೆ 4ಗಂಟೆವರೆಗೆ ವಿಮಾನ ನಿಲ್ದಾಣ ರಸ್ತೆ, ಇಂದಿರಾನಗರ 100 ಅಡಿ ರಸ್ತೆ, ಟ್ರಿನಿಟಿ ಚರ್ಚ್ ರಸ್ತೆ, ಎಂ.ಜಿ.ರಸ್ತೆ,ಡಿಕನ್ಸನ್ ರಸ್ತೆ, ಕಬ್ಬನ್ ರಸ್ತೆ, ರಾಜಭವನ್ ರಸ್ತೆ, ಎಲ್.ಎಚ್. ರಸ್ತೆ ಹಾಗೂ ರೇಸ್ ಕೋರ್ಸ್ ರಸ್ತೆ, 2:30ರಿಂದ 6ಗಂಟೆವರೆಗೆ ಟಿ.ಚೌಡಯ್ಯ ರಸ್ತೆ ಹಾಗೂ ರಾಜಭವನ ರಸ್ತೆಗಳ ಬಳಿ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಅ.27ರಂದು ಬೆಳಗ್ಗೆ 8ರಿಂದ 11:30ರವರೆಗೆ ಹಾಗೂ ಮಧ್ಯಾಹ್ನ 12ರಿಂದ 1:30ರವರೆಗೆ ವಿಮಾನ ನಿಲ್ದಾಣ ರಸ್ತೆ, ಇಂದಿರಾನಗರ 100 ಅಡಿ ರಸ್ತೆ, ಕೋರಮಂಗಲ 80 ಅಡಿ ರಸ್ತೆ, ಹೊರ ವರ್ತುಲ ರಸ್ತೆ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ರಸ್ತೆಗಳಲ್ಲಿ ನಿರ್ಬಂಧ ಹೇರಲಾಗಿದೆ.

ಈ ಸಮಯಗಳಲ್ಲಿ ಸಾರ್ವಜನಿಕರು ತಾಳ್ಮೆಯಿಂದ ಇತರ ಮಾರ್ಗಗಳನ್ನು ಅನುಸರಿಸಬೇಕೆಂದು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X