ಅಂತಾರಾಷ್ಟ್ರೀಯ ಬಟಾಟೆ ವರ್ಷವಾಗಿ 2008 : ವಿಶ್ವಸಂಸ್ಥೆ
ಬೆಂಗಳೂರು, ಅ.18 : ವಿಶ್ವಸಂಸ್ಥೆಯು 2008ನ್ನು 'ಅಂತಾರಾಷ್ಟ್ರೀಯ ಬಟಾಟೆ ವರ್ಷ" ಎಂದು ಪ್ರಕಟಿಸಿದೆ. ವಿಟಮಿನ್ ಸಿ, ಶರ್ಕರಪಿಷ್ಟ ಮತ್ತು ಪೊಟಾಷಿಯಂ ನಂತಹ ಪೋಷಕ ಗುಣಗಳಿಂದ ಸಮೃದ್ಧವಾದ ಬಟಾಟೆ, ಅಪೌಷ್ಟಿಕತೆಯನ್ನು ನೀಗಿಸುತ್ತದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಆಲೂಗಡ್ಡೆಯ ಪ್ರಾಮುಖ್ಯತೆಯನ್ನು ತಿಳಿಸಲು 2005ರಲ್ಲೇ ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆಯು ಈ ಕುರಿತು ಸಾಮಾನ್ಯ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. 2008ರಲ್ಲಿ ವರ್ಷ ಪೂರಾ ಬಟಾಟೆ ಬಗ್ಗೆ ಅವಗಾಹನೆ ಬೆಳಸಿ ಆಹಾರ ಭದ್ರತೆ ಮತ್ತು ಬಡತನವನ್ನು ನಿವಾರಿಸಲು ಪ್ರಯತ್ನಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಅಂತಾರಾಷ್ಟ್ರೀಯ ಬಟಾಟೆ ವರ್ಷವನ್ನು ಆಚರಿಸಲು ಅಮೆರಿಕದ ಕೆಲವು ರಾಜತಾಂತ್ರಿಕರಿಂದ ಬಹಳಷ್ಟು ವಿರೋಧವಿತ್ತು. ಆದರೆ ನಾವು ಹಲವು ಮೂಲಗಳಿಂದ ಬಂದ ಬೇಡಿಕೆಯನ್ನು ಪುರಸ್ಕರಿಸಿ ಮನ್ನಣೆ ನೀಡಿದ್ದೇವೆ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2004ನ್ನು ಅಕ್ಕಿ ವರ್ಷ, 2002ನ್ನು ಪರ್ವತಗಳ ವರ್ಷ ಎಂದು ಈಗಾಗಲೇ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಖಗೋಳ ವರ್ಷಕ್ಕಾಗಿ ಇಟಾಲಿಯನ್ನರು ವಿಶ್ವಸಂಸ್ಥೆಯ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
(ಏಜನ್ಸೀಸ್)












Click it and Unblock the Notifications