ಎಂಟು ವರ್ಷಗಳ ನಂತರ ತವರಿಗೆ ಬಂದ ಬೆನಜಿರ್ ಭುಟ್ಟೋ
ಕರಾಚಿ, ಅ.18 : ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜಿರ್ ಭುಟ್ಟೋ ಗುರುವಾರ(ಅ.18), ತವರಿಗೆ ಮರಳಿದ್ದಾರೆ. ಎಂಟು ವರ್ಷಗಳ ನಂತರ ಅವರು ತವರಿಗೆ ಮರಳಿದ್ದು, ಪ್ರಜಾಪ್ರಭುತ್ವ ಮರು ಸ್ಥಾಪನೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
1998ರಲ್ಲಿ ಅಕ್ರಮ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ಅವರನ್ನು ಬಂಧಿಸುವ ಅವಕಾಶಗಳಿದ್ದವು. ಹೀಗಾಗಿ ಬಂಧನದ ಭೀತಿಯಿಂದ ಭುಟ್ಟೋ ಸ್ವಯಂ ಪ್ರೇರಿತರಾಗಿ ಗಡೀಪಾರಾಗಿದ್ದರು.
***
ಕಿರಣ್ ಮಜುಂದಾರ್ ಗೆ ಪ್ರಶಸ್ತಿ
ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ ಅವರಿಗೆ ಏಷ್ಯಾ ಆರ್ಥಿಕ ಅಭಿವೃದ್ಧಿ ಪ್ರಯತ್ನಕ್ಕಾಗಿ ವ್ಯೂವ್ ಕ್ಲಿಕೋಟ್ ಪ್ರಶಸ್ತಿ ನೀಡಲಾಗುತ್ತಿದೆ. ಅಭಿವೃದ್ಧಿಶೀಲ ದೇಶಗಳ ಆರ್ಥಿಕ ಬೆಳವಣಿಗೆಯಲ್ಲಿ ಬಯೋಕಾನ್ ಪ್ರಮುಖ ಪಾತ್ರವಹಿಸುತ್ತಿರುವ ಕಾರಣ ಕಿರಣ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ.
(ಏಜನ್ಸೀಸ್)












Click it and Unblock the Notifications