ಶುಕ್ರವಾರ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅಂತ್ಯಕ್ರಿಯೆ
ಬೆಂಗಳೂರು, ಅ.11 : ಜನತಾ ಪರಿವಾರಗಳ ವಿಲೀನದ ಕನಸುಕಂಡಿದ್ದ ಹಿರಿಯ ರಾಜಕಾರಣಿ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಸೋಮಪ್ಪ ರಾಯಪ್ಪ ಬೊಮ್ಮಾಯಿ(84) ಇನ್ನಿಲ್ಲ. ಶುಕ್ರವಾರ(ಅ.12) ಅವರ ಅಂತ್ಯಕ್ರಿಯೆ ನೆರವೇರಲಿದೆ.
ಎಸ್.ಆರ್.ಬೊಮ್ಮಾಯಿ ಸ್ವಗೃಹದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಗುರುವಾರ(ಅ.11)ಇಡಲಾಗಿದೆ. ಮಧ್ಯಾಹ್ನ ಹುಬ್ಬಳ್ಳಿಗೆ ಶರೀರವನ್ನು ಕೊಂಡೊಯ್ಯಲಾಗುತ್ತದೆ. ಶುಕ್ರವಾರ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಬಹುಕಾಲದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬುಧವಾರ ರಾತ್ರಿ 8.45ಕ್ಕೆ ನಗರದ ವೊಕ್ಹಾರ್ಡೋ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು.
ಪುತ್ರರಾದ ಬಸವರಾಜ ಬೊಮ್ಮಾಯಿ(ಹಾಲಿ ಶಾಸಕ), ಮಹೇಶ್, ಪುತ್ರಿ ಗಿರಿಜಾ ಮತ್ತು ಉಮಾ ಅವರನ್ನು ಬಿಟ್ಟು ಬೊಮ್ಮಾಯಿ ಅಗಲಿದ್ದಾರೆ.
1988ರಲ್ಲಿ 10ತಿಂಗಳ ಕಾಲ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಿರ್ವಹಿಸಿದ್ದರು. ಆನಂತರ ಕೇಂದ್ರ ಸಚಿವರಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು.(ದಟ್ಸ್ ಕನ್ನಡ ವಾರ್ತೆ)












Click it and Unblock the Notifications