ಜಿಲ್ಲಾ ಸುದ್ದಿಗಳು : ಐಟಿ ಮಂದಿ ಮೇಲೆ ನಾಗತಿಹಳ್ಳಿ ಕಿಡಿ
ಮಂಗಳೂರು, ಸೆಪ್ಟೆಂಬರ್ 22 : ಐಟಿ ಮತ್ತು ಬಿಟಿ ಉದ್ಯಮದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಈ ಸತ್ಯದ ಅರಿವಿಲ್ಲದ ಐಟಿ/ಬಿಟಿ ಮಂದಿ ನಾವೇ ಸಾಧಕರು, ನಾವೇ ದೇಶದ ಉದ್ಧಾರಕರು ಎಂಬಂತೆ ಬೀಗುತ್ತಾರೆ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ನಗರದಲ್ಲಿ ನಡೆದ 'ಮಾತಾಡ್ ಮಾತಾಡು ಮಲ್ಲಿಗೆ' ಚಿತ್ರದ ಸಂವಾದವೊಂದರಲ್ಲಿ ಅವರು ಮಾತನಾಡುತ್ತಿದ್ದರು. ಈ ಉದ್ದಿಮೆಗಳು ನೀರ ಮೇಲಿನ ಗುಳ್ಳೆ ಇದ್ದಂತೆ. ಇವು ಶಾಶ್ವತವಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.
'ಮಾಮಾಮ'ಚಿತ್ರದಲ್ಲಿ ರೈತರ ಬದುಕಿನ ಕತೆ ಹೇಳಿದ್ದ ನಾಗತಿಹಳ್ಳಿ, ಬಹುರಾಷ್ಟ್ರೀಯ ಕಂಪನಿಗಳ ವಿರುದ್ಧ ಕಿಡಿಕಾರಿದ್ದರು. ಈಗ ಸಂವಾದದಲ್ಲಿ ಐಟಿ ಮಂದಿ ಮೇಲೆ ಕಿಡಿಕಾರಿದರು.
***
ಕೊಪ್ಪಳದಲ್ಲಿ ಶನಿವಾರ ಗಣೇಶೋತ್ಸವ
ಕೊಪ್ಪಳ, ಸೆಪ್ಟೆಂಬರ್ 22 : ಕೊಪ್ಪಳದಲ್ಲಿ ಗಣೇಶೋತ್ಸವ ಆತಂಕದ ವಾತಾವರಣ ಸೃಷ್ಟಿಸಿದೆ. ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಅನೇಕ ಅಂಗಡಿ ಮಳಿಗೆಗಳು ಹಾನಿಗೊಳಗಾಗಿವೆ. ಈ ಮಧ್ಯೆ ಶನಿವಾರ ಗಣೇಶ ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿದೆ. ಅಹಿತಕರ ಘಟನೆ ತಪ್ಪಿಸಲು ಪೊಲೀಸರು ನಿಗಾ ವಹಿಸಿದ್ದು, ಬಿಗಿಭದ್ರತೆಯ ನಡುವೆ ಗಣೇಶ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.
***
ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ
ದಾವಣಗೆರೆ, ಸೆಪ್ಟೆಂಬರ್ 22 : ಕೆಎಎಸ್ ದರ್ಜೆಯ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡುವ ಅಧಿಕಾರವನ್ನು ನೀಡಿ ಲೋಕಾಯುಕ್ತವನ್ನು ಬಲಮಾಡಿದ್ದೇವೆ. ಸದ್ಯದಲ್ಲೇ ಶಾಸಕರು ಸೇರಿದಂತೆ ರಾಜಕಾರಣಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವನ್ನು ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
***
ಕಾವೇರಿ ತೀರ್ಥ
ಮಡಿಕೇರಿ, ಸೆಪ್ಟೆಂಬರ್ 22 : ಅ.18ರಂದು ತುಲಾಂತ್ಯ ಮುಹೂರ್ತದಲ್ಲಿ ಪವಿತ್ರ ಕಾವೇರಿ ತೀರ್ಥ ಉದ್ಬವವಾಗಲಿದೆ. ಪ್ರತಿವರ್ಷ ಅ.17ರಂದು ತೀರ್ಥೋತ್ಭವವಾಗುತ್ತಿತ್ತು.












Click it and Unblock the Notifications