ಉದ್ಯೋಗ ಅರಸಿ ಬಂದ ಗ್ರಾಮಸ್ಥರ ಮೇಲೆ ಗುಂಡಿನ ದಾಳಿ
ರೇವಾ, ಸೆಪ್ಟೆಂಬರ್ 22 : ಉದ್ಯೋಗಕ್ಕಾಗಿ ಬಂದ ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ್ದರಿಂದ ಒಬ್ಬ ಮೃತಪಟ್ಟಿದ್ದು, ಆರು ಜನ ಗಾಯಗೊಂಡಿದ್ದಾರೆ. ಘಟನೆಯು ಮಧ್ಯಪ್ರದೇಶದ ರೇವಾ ಜಿಲ್ಲೆಯ ಜೈಪೆ ಸಿಮೆಂಟ್ ಕಾರ್ಖಾನೆಯ ಗೇಟ್ ಬಳಿ ಶನಿವಾರ(ಸೆ.22) ನಡೆದಿದೆ.
ಗಾಯಾಳುಗಳನ್ನು ಸನಿಹದ ಸಂಜಯ್‌ಗಾಂಧಿ ಆಸ್ಪತ್ರೆಗೆ ಸೇರಿಸಲಾಗಿದೆ. ಇಷ್ಟಕ್ಕೂ ಗುಂಡು ಹಾರಿಸಿದ್ದು ಯಾರು ಎಂಬುದು ತಿಳಿದು ಬಂದಿಲ್ಲ. ಬಹುಶಃ ಕಾರ್ಖಾನೆಯ ಖಾಸಗಿ ರಕ್ಷಣಾ ಸಿಬ್ಬಂದಿ ಇಲ್ಲಾ ಪ್ರದರ್ಶನಕಾರರು ಗುಂಡು ಹಾರಿಸಿರಬಹುದು. ತನಿಖೆಯ ನಂತರ ಸತ್ಯ ಹೊರ ಬೀಳಲಿದೆ ಎಂದು ಜಿಲ್ಲಾಧಿಕಾರಿ ಡಿ.ಪಿ.ಅಹುಜಾ ತಿಳಿಸಿದ್ದಾರೆ.
ಪ್ರದರ್ಶನಕಾರರಲ್ಲಿ ಕೆಲವರು ಕಲ್ಲುಗಳನ್ನು ಎಸೆಯಲು, ವಾಹನಗಳಿಗೆ ಬೆಂಕಿ ಇಡಲು ಪ್ರಯತ್ನಿಸಿದ್ದರಿಂದ ಪೋಲೀಸರು ಲಾಠಿ ಪ್ರಯೋಗಿಸಬೇಕಾಯಿತು ಎಂದು ಪೋಲೀಸ್ ಮೂಲಗಳು ತಿಳಿಸಿವೆ. ಕಾರ್ಖಾನೆಯು ಗ್ರಾಮಸ್ಥರ ಜಮೀನನ್ನು ವಶಪಡಿಸಿಕೊಂಡಿತ್ತು. ಆ ಕಾರಣಕ್ಕಾಗಿ ಅವರು ಉದ್ಯೋಗ ಅರಸಿ ಕಾರ್ಖಾನೆಯ ಬಳಿ ಬಂದಿದ್ದರು.
(ಯುಎನ್‌ಐ)












Click it and Unblock the Notifications