ಭುವನೇಶ್ವರ: ಕ್ರೀಡಾ ವಿದ್ಯಾರ್ಥಿನಿಲಯಕ್ಕೆ ಓಡಿದ ಬುಧಿಯಾ!
ಭುವನೇಶ್ವರ, ಸೆಪ್ಟೆಂಬರ್ 22 : ಒರಿಸ್ಸಾ ಸರಕಾರ, ವಂಡರ್ ಬಾಯ್ ಖ್ಯಾತಿಯ ಬುಧಿಯಾ ಸಿಂಗ್‌ನನ್ನು ದತ್ತು ತೆಗೆದುಕೊಳ್ಳುವುದರ ಮೂಲಕ ಅನಿಶ್ಚಿತವಾಗಿದ್ದ ಅವನ ಬದುಕಿಗೆ ತೆರೆ ಎಳೆದಿದೆ. ಈಗ ಇವನನ್ನು ಕ್ರೀಡಾ ವಿದ್ಯಾರ್ಥಿ ನಿಲಯಕ್ಕೆ ವರ್ಗಾಯಿಸಲಾಗಿದೆ.
ಬುಧಿಯಾ 65ಕಿಮೀಗಳ ದೂರವನ್ನು ಕೇವಲ ಏಳು ಗಂಟೆ ಎರಡು ನಿಮಿಷದಲ್ಲಿ ಕ್ರಮಿಸಿದ್ದ. ಪತ್ರಿಕೆಗಳ ಮುಖಪುಟ ಇವನ ಸಾಧನೆಗಳಿಂದ ತುಂಬಿ ಹೋಗಿತ್ತು. ಒರಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರ ಸೂಚನೆಯ ಮೇರೆಗೆ ಕ್ರೀಡಾ ಇಲಾಖೆ ಇವನಿಗೆ ಸೂಕ್ತ ತರಬೇತಿ ನೀಡಲಿದೆ.
ಇವನ ಗುರು, ತರಬೇತುದಾರ ಬಿರಾಂಚಿ ದಾಸ್‌ನಿಂದ ದೂರವಾದ ಮೇಲೆ ಒರಿಸ್ಸಾದ ಅತಿದೊಡ್ಡ ಕೊಳೆಗೇರಿ 'ಸಾಲಿಯಾ ಸಹಿ" ಎಂಬಲ್ಲಿ ತನ್ನ ತಾಯಿಯೊಂದಿಗೆ ವಾಸವಾಗಿದ್ದ. ಇದಕ್ಕೂ ಮುಂಚೆ ಇವನ ತಾಯಿ 800 ರೂಪಾಯಿಗೆ ಇವನನ್ನು ಮಾರಾಟ ಮಾಡಿದ್ದಳು. ಅವನ ಪ್ರತಿಭೆಗೆ ಮರುಳಾದ ಬಿರಾಂಚಿ ದಾಸ್ ದತ್ತು ತೆಗೆದುಕೊಂಡು ಸೂಕ್ತ ತರಬೇತಿ ಕೊಡುತ್ತಿದ್ದ.
ಹೀಗಿರಬೇಕಾದರೆ, ತನ್ನ ಮಗನನ್ನು ಕಿಮೀಗಟ್ಟಲೆ ಓಡಿಸುತ್ತಿದ್ದಾನೆ. ಅವನ ಆರೋಗ್ಯ ಕೆಡುತ್ತಿದೆ. ಬಿರಾಂಚಿ ದಾಸ್ ತನ್ನ ಮಗನಿಂದ ದುಡ್ಡು ಮಾಡಿಕೊಳ್ಳುತ್ತಿದ್ದಾನೆ ಎಂದು ಆತನ ತಾಯಿ ದೂರಿದ್ದಳು. ನನ್ನ ಗುರುಗಳು ಶಿಕ್ಷೆ ನೀಡುತ್ತಾರೆ ಎಂದು ಬುಧಿಯಾ ಸಹಾ ದೂರಿದ್ದ. ಈ ಪರಿಣಾಮ ಬಂಧನಕ್ಕೆ ಒಳಗಾಗಿದ್ದ ಬಿರಾಂಚಿ, ನಂತರ ಬುಧಿಯಾನ ತಂಟೆಗೆ ಹೋಗಲಿಲ್ಲ.
(ಯುಎನ್‌ಐ)












Click it and Unblock the Notifications