ಗುಲ್ಪರ್ಗ : ವಾಂತಿಭೇದಿಯಿಂದ 7ಮಂದಿ ಸ್ಥಿತಿ ಗಂಭೀರ
ಗುಲ್ಬರ್ಗ,ಆಗಸ್ಟ್ 04 : ಜಿಲ್ಲೆಯಲ್ಲಿ ವಾಂತಿಭೇದಿ ರೋಗ ಹಬ್ಬುತ್ತಿದ್ದು, ಸತ್ತವರ ಸಂಖ್ಯೆ ಶನಿವಾರ ಎರಡಕ್ಕೇರಿದೆ.
ಕಲುಷಿತ ನೀರು ಸೇವನೆಯಿಂದ ಜಿಲ್ಲೆಯ ಕಕ್ಕೇರಾ ಗ್ರಾಮದಲ್ಲಿ ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ. 250ಕ್ಕೂ ಅಧಿಕ ಮಂದಿ ವಾಂತಿಭೇದಿಯಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಳು ಜನರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
12ವರ್ಷದ ಬಾಲಕ ಮತ್ತು 45ವರ್ಷದ ಗ್ರಾಮ ಪಂಚಾಯ್ತಿ ಸದಸ್ಯ ಸಾವನ್ನಪ್ಪಿರುವ ವಿಚಾರವನ್ನು ಜಿಲ್ಲಾಧಿಕಾರಿ ಪಂಕಜ್ ಕುಮಾರ್ ಪಾಂಡೆ ಖಚಿತಪಡಿಸಿದ್ದಾರೆ. ವೈದ್ಯರ ಸಲಹೆ ನಿರ್ಲಕ್ಷಿಸಿ, ಆಸ್ಪತ್ರೆಯಿಂದ ಜನರು ಮನೆಗೆ ತೆರಳಿದ್ದು, ರೋಗ ಉಲ್ಪಣವಾಗಲು ಕಾರಣ. ವೈದ್ಯರ ತಂಡ ಗ್ರಾಮದಲ್ಲಿ ಅಗತ್ಯ ಚಿಕಿತ್ಸೆಯನ್ನು ನೀಡುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.
(ಯುಎನ್ಐ)












Click it and Unblock the Notifications