ಪುಣೆಯ ಯೆರವಾಡಾ ಜೈಲಿಗೆ ಸಂಜಯ್ ಸ್ಥಳಾಂತರ

ಮುಂಬೈ, ಆಗಸ್ಟ್ 02 : ಅರ್ಥರ್ ರಸ್ತೆ ಜೈಲಿನಲ್ಲಿಯೇ ಇರಿಸಬೇಕೆಂದು ನಟ ಸಂಜಯ್ ದತ್ ಮಾಡಿದ್ದ ಮನವಿಗೆ ಟಾಡಾ ನ್ಯಾಯಾಲಯದಿಂದ ಪುರಸ್ಕಾರ ಸಿಕ್ಕಿಲ್ಲ.

1998ರ ಮುಂಬೈ ಸರಣಿ ಸ್ಫೋಟದಲ್ಲಿ ಅಕ್ರಮವಾಗಿ ಅಸ್ತ್ರಗಳನ್ನು ಇರಿಸಿಕೊಂಡಿದ್ದ ಆರೋಪದ ಮೇಲೆ 6 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಂಜಯ್ ದತ್‌ರನ್ನು ಪುಣೆಯ ಯೆರವಾಡಾ ಜೈಲಿಗೆ ಸ್ಥಳಾಂತರಿಸಲು ಆದೇಶಿಸಲಾಗಿದೆ.

ಸ್ಥಳಾಂತರಿಸಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮತ್ತು ಪ್ರಾಣಕ್ಕೆ ಕುತ್ತು ಆಗುವ ಸಂಭವವಿದ್ದುದರಿಂದ ಆರ್ಥರ್ ಜೈಲಿನಲ್ಲಿಯೇ ಇರಿಸಬೇಕೆಂದು ಸಂಜಯ್ ಮನವಿ ಮಾಡಿದ್ದರು.

ಕೇವಲ ವಿಚಾರಣಾಧೀನ ಕೈದಿಗಳನ್ನು ಮಾತ್ರ ಇಟ್ಟುಕೊಳ್ಳುವ ಅರ್ಥರ್ ಜೈಲು ಸಂಜಯ್‌ರನ್ನು ಪುಣೆಗೆ ಸ್ಥಳಾಂತರಿಸಬೇಕೆಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ದತ್ ಅವರ ವಕೀಲ ಸತೀಶ್ ಮನೆಶಿಂಧೆ ಅವರು ಈ ಸುದ್ದಿಯನ್ನು ದೃಢಪಡಿಸಿದ್ದಾರೆ.

(ಯುಎನ್ಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+