ಬೆಂಗಳೂರಿನಲ್ಲಿ ದೇಶದ ಪ್ರಪ್ರಥಮ ಮೊಬೈಲ್ ಸ್ಟುಡಿಯೋ
ಬೆಂಗಳೂರು, ಜುಲೈ 02 : ಸೃಷ್ಟಿ ಸ್ಕೂಲ್ ಆಫ್ ಆರ್ಟ್,ಡಿಸೈನ್ ಅಂಡ್ ಟೆಕ್ನಾಲಜಿ ಜೊತೆ 2ವರ್ಷಗಳ ಒಪ್ಪಂದ ಮಾಡಿಕೊಂಡಿರುವ ನೋಕಿಯಾ ಕಂಪನಿ, ಮೊಬೈಲ್ ವಿನ್ಯಾಸ ಸ್ಟುಡಿಯೋವನ್ನು ನಗರದಲ್ಲಿ ಆರಂಭಿಸಲಿದೆ. ಇದು ಭಾರತದ ಮೊದಲ ಮೊಬೈಲ್ ಡಿಸೈನ್ ಸ್ಟುಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಮೊಬೈಲ್ ವಿನ್ಯಾಸ ಸ್ಟುಡಿಯೋ ಪ್ರಾರಂಭಿಸಿ , ಹೊಸ ಬಗೆಯ ವಿನ್ಯಾಸಗಳ ರಚನೆಗೆ ಒತ್ತು ನೀಡಲಾಗುವುದು ಎಂದು ನೋಕಿಯಾ ಸಂಸ್ಥೆ ಗುರುವಾರ ಹೇಳಿದೆ.
ಫಿನ್ ಲ್ಯಾಂಡ್ ಹಾಗೂ ಲಂಡನ್ ನಲ್ಲಿ ಈ ಮಾದರಿಯ ಸ್ಟುಡಿಯೋಗಳನ್ನು ನೋಕಿಯಾ ಸಂಸ್ಥೆ ಹೊಂದಿದೆ. ಈ ಕೇಂದ್ರಗಳಲ್ಲಿ ಸುಮಾರು 34 ದೇಶಗಳ 300 ವಿನ್ಯಾಸಗಾರರು ಹೊಸ ರಚನೆಯಲ್ಲಿ ತೊಡಗಿದ್ದಾರೆ.
(ಯುಎನ್ಐ)












Click it and Unblock the Notifications