ಶುಕ್ರವಾರ ಹಣ್ಣು ತರಕಾರಿ ಸಿಕ್ಕೋದಿಲ್ಲ ! ಸಿಕ್ಕರೆ ನಿಮ್ಮದೃಷ್ಟ!


ಶುಕ್ರವಾರ(ಆಗಸ್ಟ್ 03)ದಿಂದ ಹಣ್ಣು ತರಕಾರಿಗಳಿಗೆ ರಾಜ್ಯದಲ್ಲಿ ಪರದಾಟ ಆರಂಭವಾಗಲಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ನಡೆಯುತ್ತಿರುವ ಬಂದ್ ಗೆ, ಹಣ್ಣು ಮತ್ತು ತರಕಾರಿ ಸಗಟು ವರ್ತಕರ ಸಂಘ ಗುರುವಾರ ಬೆಂಬಲ ವ್ಯಕ್ತಪಡಿಸಿದೆ. ಗುರುವಾರ ಮಧ್ಯರಾತ್ರಿಯಿಂದಲೇ ರಾಜ್ಯದೆಲ್ಲೆಡೆ ಮಾರಾಟವನ್ನು ಸ್ಥಗಿತಗೊಳಿಸುವುದಾಗಿ ಸಂಘ ಹೇಳಿದೆ.

ಬಂದ್ ಪರಿಣಾಮ ಈಗಾಗಲೇ ಹಣ್ಣು ಮತ್ತು ತರಕಾರಿ ಬೆಲೆ ಗಗನಕ್ಕೇರಿವೆ.

***
ಸ್ಥಳೀಯ ಸಂಸ್ಥೆಗಳ ದಕ್ಕಿಸಿಕೊಳ್ಳಲು ಕುರುಕ್ಷೇತ್ರ

ರಾಜ್ಯದ ಸ್ಥಳೀಯ ಸಂಸ್ಥೆ ಗಳ ಚುನಾವಣೆ ಆಗಸ್ಟ್ .26ರಂದು ನಡೆಯಲಿದೆ. ಈ ಕುರಿತು ಅಧಿಕೃತ ಪ್ರಕಟಣೆಯನ್ನು ಚುನಾವಣಾ ಆಯೋಗ ಗುರುವಾರ ರಾತ್ರಿ ಹೊರಡಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

***
ಗುಲಬರ್ಗಾದಲ್ಲಿ ಕೇಂದ್ರೀಯ ವಿವಿ ಸ್ಥಾಪನೆಗೆ ಮನವಿ

ಗುಲಬರ್ಗಾದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಧಾನಿಯನ್ನು ಒತ್ತಾಯಿಸಲಾಗುವುದು ಎಂದು ಗೃಹಸಚಿವ ಎಂ.ಪಿ.ಪ್ರಕಾಶ್ ವಿಧಾನಸಭೆಗೆ ಹೇಳಿದ್ದಾರೆ.

ಬೆಂಗಳೂರು ಭೇಟಿಗೆ ಪ್ರಧಾನಿ ಮನಮೋಹನ ಸಿಂಗ್ ಅವರು ಶುಕ್ರವಾರ ಬರುತ್ತಿದ್ದು, ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ವಿವಿ ಸ್ಥಾಪನೆಗಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವವರು ಪ್ರತಿಭಟನೆಯನ್ನು ಕೈಬಿಡಬೇಕಾಗಿ ಅವರು ಕೇಳಿಕೊಂಡರು.

*

ತ.ನಾಡು ವಿರುದ್ಧ ಕ್ರಮ ಕೈಗೊಳ್ಳದಿರಲು ಮದನಿ ನಿರ್ಧಾರ

ಕೋಯಮತ್ತೂರು ಸರಣಿ ಸ್ಫೋಟ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾಗಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಅಬ್ದುಲ್ ನಾಸರ್ ಮದನಿ ಅವರು ತಮಿಳುನಾಡು ಸರ್ಕಾರದ ವಿರುದ್ಧ ಮೊಕದ್ದಮೆ ಹೂಡದಿರಲು ನಿರ್ಧರಿಸಿದ್ದಾರೆ.

ಈ ಪ್ರಕರಣದಲ್ಲಿ 9 ವರ್ಷಗಳ ಕಾಲ ಅವರನ್ನು ಕೋಯಮತ್ತೂರು ಜೈಲಿನಲ್ಲಿ ಕೂಡಿಡಲಾಗಿತ್ತು. ಆದರೆ ಈ ಪ್ರಕರಣವನ್ನು ತಮಿಳುನಾಡು ಸರ್ಕಾರ ಮತ್ತೆ ಕೈಗೊಂಡರೆ ತಾವು ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.

*

ಬಿಎಸ್ಸೆನ್ನೆಲ್ ಸಂಸ್ಥ್ಗೆಯ 20 ಸಾವಿರ ನೌಕರರಿಗೆ ಸ್ವಯಂ ನಿವೃತ್ತಿ

ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್ಸೆನ್ನೆಲ್ 20 ಸಾವಿರ ಸಿ ಹಾಗೂ ಡಿ ದರ್ಜೆ ನೌಕರರಿಗೆ ಸ್ವಯಂ ನಿವೃತ್ತಿ(ವಿಆರ್ ಎಸ್) ನೀಡಲು ಮುಂದಾಗಿದೆ.

ಆದರೆ ಸಂಸ್ಥೆಯ ಈ ಪ್ರಸ್ತಾಪವನ್ನು ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿ.ಎ.ಎನ್ .ನಂಬೂದರಿ ಪ್ರಬಲವಾಗಿ ವಿರೋಧಿಸಿದ್ದಾರೆ.

ಪ್ರತಿ ವರ್ಷ ಬಿಎಸ್ಸೆನ್ನೆಲ್ ನಿಂದ 10 ಸಾವಿರ ಉದ್ಯೋಗಿಗಳು ನಿವೃತ್ತರಾಗುತ್ತಾರೆ. ಯಾರ ಮೇಲೂ ವಿಆರೆಸ್ ಹೇರಬಾರದು ಎಂದು ಒಕ್ಕೂಟ ಒತ್ತಾಯಿಸುತ್ತಿದೆ.

* * *

ಬೆಂಗಳೂರಿನಲ್ಲಿ ಮರಳು ಸಾಗಣೆ ಲಾರಿ ಮುಷ್ಕರ

ಚಾಲಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ಲಾರಿ ಮಾಲೀಕರ ಒಕ್ಕೂಟ ಗುರುವಾರದಿಂದ ನಗರಕ್ಕೆ ಮರಳು ಸಾಗಣೆ ಸ್ಥಗಿತಗೊಳಿಸಿ, ಅನಿರ್ದಿಷ್ಟ ಕಾಲ ಮುಷ್ಕರ ಹೂಡಲಿದೆ.

ಪ್ರತಿ ತಿಂಗಳು ಲಾರಿಯೊಂದಕ್ಕೆ 1000 ರು. ಪರ್ಮಿಟ್ ದರ ಸಂಗ್ರಹಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಪರ್ಮಿಟ್ ಪದ್ದ್ಧತಿಯನ್ನು ಸ್ಥಗಿತಗೊಳಿಸಿ, 25 ಸಾವಿರ ರು ದಂಡ ವಿಧಿಸಲಾಗಿದೆ.

ಇದಲ್ಲದೇ ಚಾಲಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಿ, ಸಾರಿಗೆ ಮತ್ತು ಪೊಲೀಸ್ ಇಲಾಖೆ ಕಿರುಕುಳ ನೀಡುತ್ತಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ. ಚನ್ನಾರೆಡ್ಡಿ ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+