ಎಡಿಎ ರಂಗಮಂದಿರದಲ್ಲಿ ಈ ಶನಿವಾರ ಆಷಾಢ ವೈಭವ!
ಬೆಂಗಳೂರು, ಆಗಸ್ಟ್ 02 : ಶ್ರಾವಣ ವೈಭವ ನಾವೆಲ್ಲರೂ ಕೇಳಿದ್ದೇವೆ. ಆದರಿದು ಆಷಾಢ ವೈಭವ! ಶನಿವಾರ ಆಷಾಢ ವೈಭವವ ನೋಡಲು, ನಗರದ ಜೆ.ಸಿ.ರಸ್ತೆಯಲ್ಲಿರುವ ಎಡಿಎ ರಂಗಮಂದಿರಕ್ಕೆ ಬನ್ನಿ ಎನ್ನುತ್ತಿದೆ ಚಿತ್ಪಾವನ ಸಮಾಜ(ರಿ)ದ ಕರೆಯೋಲೆ.
ರಾಜಾಜಿನಗರದಲ್ಲಿರುವ ಚಿತ್ಪಾವನ ಸಮಾಜ(ರಿ.) ಆಷಾಢ ವೈಭವ ಕಾರ್ಯಕ್ರಮವನ್ನು ಆಯೋಜಿಸಿದೆ.
ಶನಿವಾರ(ಆಗಸ್ಟ್ 04) ಮಧ್ಯಾಹ್ನ 3ರಿಂದ ರಾತ್ರಿ 9ರವರೆಗೆ ನಾನಾ ಕಾರ್ಯಕ್ರಮ ವೈವಿಧ್ಯಗಳು ನಿಮಗಾಗಿ ಕಾದಿವೆ.
ಚಿತ್ಪಾವನ ಕಲಾವಿದರಿಂದ ಪಂಚ ವೀಣಾ ವಾದನ, ಭಾವಗೀತೆ, ಜಾನಪದ ಗೀತೆ, ಮೂಕಾಭಿನಯ, ಯಕ್ಷಗಾನ, ಭಕ್ತಿ ಸಂಗೀತ, ಜಾದೂ, ಕಲಾ ಗಂಗೋತ್ರಿ ತಂಡದವರಿಂದ ಮೈಸೂರು ಮಲ್ಲಿಗೆ ನಾಟಕ.. ಹೀಗೆ ಕಾರ್ಯಕ್ರಮಗಳ ಪಟ್ಟಿ ದೊಡ್ಡದು.
ಕೆ.ಎಸ್.ನರಸಿಂಹಸ್ವಾಮಿ ಅವರ ಕವನಗಳ ಕೇಳುತ್ತಾ, ಮೈಸೂರು ಮಲ್ಲಿಗೆ ನಾಟಕವನ್ನು ವೀಕ್ಷಿಸಬಹುದು. ರಾಜೇಂದ್ರ ಕಾರಂತರ ರಂಗನಾಟಕವನ್ನು, ಡಾ.ಬಿ.ವಿ.ರಾಜಾರಾಂ ನಿರ್ದೇಶಿಸುತ್ತಿದ್ದಾರೆ. ಸಂಜೆ 6ರಿಂದ 8ಗಂಟೆವರೆಗೆ ಮೈಸೂರು ಮಲ್ಲಿಗೆಯ ಕಂಪು, ಎಡಿಎ ರಂಗಮಂದಿರದ ತುಂಬ ಪಸರಿಸಲಿದೆ.
ಮನೆಮಂದಿಯೊಂದಿಗೆ ಆಷಾಢ ವೈಭವ ಕಾಣಲು ಎಡಿಎ ರಂಗಮಂದಿರಕ್ಕೆ ಬನ್ನಿ. ನಿಮ್ಮ ವಾಹನವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ನಿಲ್ಲಿಸಿ, ಬೇಗ ಬನ್ನಿ.. ಮೊದಲು ಬಂದವರಿಗೆ ಮಾತ್ರ ಇಲ್ಲಿ ಆಸನ ವ್ಯವಸ್ಥೆ.
ಇನ್ನು ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ :
ಚಿತ್ಪಾವನ ಸಮಾಜ (23102269)
ಚಿದಂಬರ ಮರಾಠೆ (98455 28336)
ಗಜಾನನ ಗೋಖಲೆ (99007 99226)
ಶರತ್ ಗೋಖಲೆ (98867 51983)
ಜೆ.ಪಿ (99452 74095)
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications