ಪ್ರತಿಭಾ 13ನೇ ರಾಷ್ಟ್ರಪತಿ :ಘೋಷಣೆಗೆ ಕ್ಷಣಗಣನೆ
ನವದೆಹಲಿ : ರಾಷ್ಟ್ರಪತಿ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಶನಿವಾರ ಬೆಳಗ್ಗೆ 11ಗಂಟೆಯಿಂದ ಆರಂಭಗೊಂಡಿದೆ. ಮಧ್ಯಾಹ್ನ 2ರೊಳಗೆ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಯುಪಿಎ ಮತ್ತು ಎಡಪಕ್ಷಗಳ ಅಭ್ಯರ್ಥಿ ಪ್ರತಿಭಾ ಪಾಟೀಲ್ ಮತ್ತು ಎನ್ ಡಿಎ ಬೆಂಬಲಿತ ಅಭ್ಯರ್ಥಿ ಭೈರೋನ್ ಸಿಂಗ್ ಶೇಖಾವತ್ ಕಣದಲ್ಲಿದ್ದು, ಪ್ರತಿಭಾ ಗೆಲುವು ಈಗಾಗಲೇ ನಿಶ್ಚಯವಾಗಿದೆ.ಅಧಿಕೃತ ಘೋಷಣೆಯಷ್ಟೇ ಹೊರಬೀಳಬೇಕಾಗಿದೆ.
ಗುರುವಾರ 682 ಸಂಸದರು, 3,755 ಶಾಸಕರು ಚುನಾವಣೆಯಲ್ಲಿ ಮತಚಲಾಯಿಸಿದ್ದರು. ಪ್ರತಿಭಾ ಆಯ್ಕೆಯ ಮುಖಾಂತರ ದೇಶ ಮಹಿಳಾ ರಾಷ್ಟ್ರಪತಿಯನ್ನು ಕಾಣಲಿದೆ.
(ಏಜನ್ಸೀಸ್)












Click it and Unblock the Notifications