ಬಂಗಾರ ಮತ್ತು ಬೆಳ್ಳಿ ಬೆಲೆ ಮತ್ತೊಮ್ಮೆ ಮತ್ತಷ್ಟು ಹೆಚ್ಚಳ!
ಮುಂಬಯಿ,ಜುಲೈ 21 : ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶನಿವಾರ ಹೆಚ್ಚಿವೆ.ಮುಂದಿನ ವಾರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.
ಒಂದೇ ದಿನದಲ್ಲಿ ಬೆಳ್ಳಿ ಕೆ.ಜಿ.ಗೆ 55ರೂಪಾಯಿ, ಹತ್ತು ಗ್ರಾಂ ಚಿನ್ನಕ್ಕೆ 90ರೂಪಾಯಿ ಹೆಚ್ಚಳ ದಾಖಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೇ, ಪ್ರಿಯತಮೆಯನ್ನು ಚಿನ್ನ, ರನ್ನ ಎಂದು ಕರೆದಷ್ಟೇ ಆಸೆ ತೀರಿಸಿಕೊಳ್ಳಬೇಕಾಗುತ್ತದೆ!
ಸದ್ಯದ ದರ ಪಟ್ಟಿ :
999 ಗ್ರೇಡ್ ನ ಬೆಳ್ಳಿ ದರ (ಕೆ.ಜಿ.) ರೂ.18,255.
99.5 ಸ್ಟಾಂಡರ್ಡ್ ನ ಶುದ್ಧ ಚಿನ್ನದ ದರ(10 ಗ್ರಾಂ) ರೂ.8,955(8,865)
99.9 ಸ್ಟಾಂಡರ್ಡ್ ನ ಶುದ್ಧ ಚಿನ್ನದ ದರ(10 ಗ್ರಾಂ) ರೂ.9,005(8,915)
(ಏಜನ್ಸೀಸ್)












Click it and Unblock the Notifications