ನಕ್ಸಲೀಯರ ಬಂದ್ ಕರೆಗೆ ಬಿಜೆಪಿ ಬೆಂಬಲ ಕೋರಿಕೆ

ಶಿವಮೊಗ್ಗ, ಜುಲೈ 17 : ನಕ್ಸಲೀಯರ ಹತ್ಯೆಯನ್ನು ಖಂಡಿಸಿ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಜುಲೈ 19ರಂದು ಕರೆಯಲಾಗಿರುವ ಬಂದ್‌ಗೆ ಬೆಂಬಲ ನೀಡಬೇಕೆಂದು ನಕ್ಸಲೀಯರು ಬಿಜೆಪಿಯನ್ನು ಕೋರಿಕೊಂಡಿದ್ದಾರೆ.

ಆಗುಂಬೆಯ ಬಳಿಯ ನೆಮ್ಮೂರು ಹಳ್ಳಿಗೆ ಇಂದು ಬೆಳಗಿನ ಜಾವದಲ್ಲಿ ಕೊಪ್ಪ ತಾಲೂಕಿನ ಬಿಜೆಪಿ ಶಾಸಕ ರಂಗನಾಥ್‌ರನ್ನು ಭೇಟಿ ಮಾಡಿದ ನಿರ್ಬಂಧಿತ ಸಿಪಿಐ(ಮಾಮೋ)ಗುಂಪಿನ ಆರು ನಕ್ಸಲೀಯರು ಬಂದ್‌ಗೆ ಬೆಂಬಲಿಸಬೇಕೆಂದು ಕೇಳಿಕೊಂಡಿದ್ದಾರೆ.

* * *

ಮಾತೆಮಹಾದೇವಿ ಗುಂಪಿನ ಕೋಪಕ್ಕೆ ಕನ್ನಡಭವನ ಬಲಿ!

ಆನುದೇವಾ ಹೊರಗಣವನು ಕೃತಿಯ ಬಗ್ಗೆ ಸಿಟ್ಟುಕೊಂಡಿದ್ದ ಗುಂಪೊಂದು, ನಗರದ ಕನ್ನಡ ಭವನಕ್ಕೆ ಮಂಗಳವಾರ ಕಲ್ಲು ತೂರಿದೆ.

ಈ ಸಂದರ್ಭದಲ್ಲಿ ಡಾ.ಬಂಜಗೆರೆ ಜಯಪ್ರಕಾಶ್‌ರ ಆನುದೇವಾ ಹೊರಗಣವನು ಕೃತಿ ಬಗ್ಗೆ ವರದಿ ಪಡೆಯಲು ರಾಜ್ಯ ಸರ್ಕಾರ ರಚಿಸಿರುವ ಸತ್ಯಸಂಶೋಧನಾ ಸಮಿತಿಯ ಸಭೆ ನಡೆಯುತ್ತಿತ್ತು. ಡಾ.ಕಲ್ಬುರ್ಗಿ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಗೆ ಚಂಪಾ ಆಗಮಿಸಿದ್ದನ್ನು ವಿರೋಧಿಸಿ, ಮಾತೆ ಮಹಾದೇವಿ ನೇತೃತ್ವದಲ್ಲಿ ಭಾರತ ವೀರಶೈವ ಮಹಾಸಭಾ ಸದಸ್ಯರು ಘೇರಾವ್ ಹಾಕಿದರು. ಪೊಲೀಸರ ನೆರವಿನಿಂದ ಚಂಪಾ ಕನ್ನಡ ಭವನ ಪ್ರವೇಶಿಸಿದರು. ಕೂಡಲೇ ವೀರಶೈವ ಮಹಾಸಭಾ ಸದಸ್ಯರು, ಕನ್ನಡಭವನದ ಕಿಟಕಿ ಬಾಗಿಲುಗಳ ಗಾಜಿಗೆ ಕಲ್ಲು ತೂರಿ, ಚಂಪಾ ವಿರುದ್ಧ ಘೋಷಣೆ ಕೂಗಿದರು. ಆನುದೇವಾ ಹೊರಗಣವನು ಕೃತಿ ನಿಷೇಧಕ್ಕೆ ಒತ್ತಾಯಿಸಿದರು.

* * *

ಅಂತಾರಾಷ್ಟ್ರೀಯ ಫೋಟೋ ಸಲಕರಣೆಗಳ ಪ್ರದರ್ಶನ

ಬೆಂಗಳೂರು, ಜುಲೈ 17 : ಕ್ಯಾಮೆರಾ ಮತ್ತಿತರ ಉಪಕರಣಗಳ ಅಂತಾರಾಷ್ಟ್ರೀಯ ಪ್ರದರ್ಶನ ಇಲ್ಲಿ ಜುಲೈ 20ರಿಂದ 22ರವರೆಗೆ ನಡೆಯಲಿದೆ.

ಏಷ್ಯಾದ ಇನ್ನೂರಕ್ಕೂ ಹೆಚ್ಚು ಉತ್ಪಾದಕರು ವಿವಿಧ ಬಗೆಯ ಸಾಮಗ್ರಿಗಳನ್ನು ಪ್ರದರ್ಶಿಸಲಿದ್ದಾರೆ. ಮೂರನೆ ಬಾರಿ ಜರುಗುತ್ತಿರುವ ಈ ಪ್ರದರ್ಶನವನ್ನು ಚೆನ್ನೈನ ಬೈಸೆಲ್ ಇಂಟರ್ಯಾಕ್ಷನ್ಸ್ ಸಂಸ್ಥೆ ಆಯೋಜಿಸಿದೆ.

ಪ್ರಶಸ್ತಿವಿಜೇತ ಛಾಯಾಚಿತ್ರಗಳ ಪ್ರದರ್ಶನ, ಶಿಬಿರಗಳು ಮತ್ತು ವಿಚಾರ ಸಂಕಿರಣಗಳನ್ನು ಈ ಸಂದರ್ಭದಲ್ಲಿ ನಡೆಸಲಾಗುವುದು ಎಂದು ಬೈಸೆಲ್‌ನ ನಿರ್ದೇಶಕ ವಸಂತ್ ಕುಮಾರ್ ಹೇಳಿದ್ದಾರೆ.

* * *

ಪಂಚಾಯತ್‌ಗೆ ಓಂಬುಡ್ಸ್‌ಮನ್‌ಗಳ ನೇಮಕ

ಮಂಗಳವಾರ ನಸುಕಿನಲ್ಲಿಯೇ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮರಣಹೊಂದಿದರೆ, ಇನ್ನೊಬ್ಬ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾನೆ.

ಗಾಯಗೊಂಡವರಲ್ಲಿ ಆರು ಜನರನ್ನು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಉಳಿದ ನಾಲ್ವರನ್ನು ಮಂಡ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿದೆ.

* * *

ಸುಮೊ-ಲಾರಿ ಮುಖಾಮುಖಿ ಡಿಕ್ಕಿ : ಮಂಡ್ಯದ ಬಳಿ ಮೂವರ ಸಾವು

ಮಂಗಳವಾರ ನಸುಕಿನಲ್ಲಿಯೇ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮರಣಹೊಂದಿದರೆ, ಇನ್ನೊಬ್ಬ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾನೆ.

ಗಾಯಗೊಂಡವರಲ್ಲಿ ಆರು ಜನರನ್ನು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಉಳಿದ ನಾಲ್ವರನ್ನು ಮಂಡ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+