ಮಳೆ ನಿಂತ ಮೇಲೆ!
'ಮುಂಗಾರು ಮಳೆ" ಚಿತ್ರದ ಒಳ್ಳೆ ಪ್ರಭಾವವೇ ಇರಬೇಕು. ಈಗೀಗ ಕನ್ನಡ ಚಿತ್ರರಂಗದಲ್ಲಿ ಅಲ್ಲಲ್ಲಿ ಮಳೆ ಬೆಳೆ ಆಗುತ್ತಿದೆ. ಇತ್ತೀಚೆಗಷ್ಟೆ 'ಮುಂಗಾರು ಮಳೆ" ನೋಡಿ ಆನಂದಿಸಿದ ಬ್ರಿಟನ್‌ಕನ್ನಡಿಗರಿಗೆ ಇದೀಗ, 'ರಾಮ ಶಾಮ ಭಾಮ" ಚಿತ್ರ ನೋಡುವ ಅವಕಾಶ! ಅಂದಹಾಗೆ ಈ ಚಿತ್ರ ಸಿಡುಕುಮೋರೆಯವರಿಗಲ್ಲ, ನಗುವವರಿಗೆ ಮಾತ್ರ!
ಜೂನ್ 2ನೇ ತಾರೀಖು ಲಂಡನ್ ನಗರದ ಸೌಥ್ ಹಾಲ್ ಪ್ರದೇಶದಲ್ಲಿರುವ ಹಿಮಾಲಯ ಸಿನಿಮಾ ಚಿತ್ರಮಂದಿರದಲ್ಲಿ ಪ್ರದರ್ಶನ ಏರ್ಪಾಟಾಗಿದೆ. ಈಗಾಗಲೆ ಟಿಕೆಟ್ ಸಿಗುತ್ತಿದೆ , ಮುಂಗಡ ಟಿಕೆಟ್ ಪಡೆದು ನಿಮ್ಮ ಸೀಟನ್ನು ಕಾದಿರಿಸಿಕೊಳ್ಳಿ.
ಇನ್ನೂ ಹೆಚ್ಚಿನ ವಿವರಗಳನ್ನು ಬೇಕಂದ್ರೆ ಮಿತ್ರ ರವೀಂದ್ರ ಅವರನ್ನು ಸಂಪರ್ಕಿಸಿ. ಅವರ ಫೋನು : +44 (0) 785-668-7023. ಇ-ಮೇಲ್ - [email protected]
***
ಕಾಣೆಯಾಗಿದ್ದಾರೆ!
ನನ್ನ ವಯೋವೃದ್ಧ ತಂದೆ ತಪ್ಪಿಸಿಕೊಂಡಿದ್ದಾರೆ. ಕಳೆದ ಹತ್ತು ದಿವಸಗಳಿಂದ ಅವರು ಕಾಣೆಯಾಗಿ ನಾವೆಲ್ಲ ಚಿಂತಾಕ್ರಾಂತರಾಗಿದ್ದೇವೆ. ಆಕಸ್ಮಾತ್ ನಿಮ್ಮ ಕಣ್ಣಿಗೇನಾದರೂ ಅವರು ಕಂಡರೆ ನನಗೆ ಕೂಡಲೆ ತಿಳಿಸಿ ಎಂದು ಕೋರಿಕೊಂಡಿದ್ದಾರೆ ಬೆಂಗಳೂರು ನಂದಿನಿ ಲೇಔಟ್‌ನ ಜೇ ಕಟ್ಟಿ.
ಕಾಣೆಯಾಗಿರುವ ಪ್ರೊ. ಎಸ್. ಸಿದ್ಧಲಿಂಗಪ್ಪ ಕಟ್ಟಿ , ವಾಕಿಂಗ್‌ಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವರು ವಾಪಸ್ಸು ಬಂದಿಲ್ಲ. ಹೆಚ್ಚಿನ ವಿವರಗಳಿಗೆ ಈ ಪುಟ ನೋಡಿ. http://katti.jay.googlepages.com/appa
ಸಂಪರ್ಕಿಸಬೇಕಾದ ವಿಳಾಸ : ಪ್ರಸಾದ್ ಕಟ್ಟಿ 98861-50748, 99805-14177, 080-2542-3446
[email protected], [email protected]
***
ಕಂಕಣಬಲ
ಬೆಂಗಳೂರು ಬನಶಂಕರಿ 2ನೇ ಹಂತದಲ್ಲಿರುವ ವಧು-ವರಾನ್ವೇಷಣಾ ಕೇಂದ್ರವು, ಮೇ 25ರಿಂದ ಒಂದು ತಿಂಗಳ ಕಾಲ ತ್ರಿಮತಸ್ಥ ಬ್ರಾಹ್ಮಣ ವಧು-ವರರ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿದೆ. ನೋಂದಾಯಿಸಿಕೊಳ್ಳಿ. ಮದುವೆ ಆಗಬೇಕೂಂತ ಇರುವವರಿಗೆ ಈ ಪುಟದ ಕೊಂಡಿ ಕಳಿಸಿ. ಶುಭಸ್ಯ ಶೀಘ್ರಂ ! ಕರೆಮಾಡಿ : +91-94483-68257












Click it and Unblock the Notifications