ಪೆಟ್ರೋಲ್ ಬಂಕ್ ಮುಷ್ಕರ ರದ್ದು: ತೈಲ ದರ ಮತ್ತೆ ಏರಿಕೆ?
ನವದೆಹಲಿ : ಶುಕ್ರವಾರ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು, ಪೆಟ್ರೋಲ್ ಬಂಕ್ ಮಾಲೀಕರು ಹಿಂದಕ್ಕೆ ಪಡೆದಿದ್ದಾರೆ.
ಪೆಟ್ರೋಲ್ ಬಂಕ್ ಮಾಲೀಕರ ಮನವೊಲಿಸಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ, ಮಾರಾಟದ ಕಮೀಷನ್ ಮೊತ್ತವನ್ನು ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ.
ಪ್ರಸ್ತುತ ಪ್ರತಿ ಲೀಟರ್ ಪೆಟ್ರೋಲ್‌ಗೆ 0.89 ರೂ., ಮತ್ತು ಡೀಸೆಲ್‌ಗೆ 0.52 ರೂ., ಕಮಿಷನ್ ಪಡೆಯುತ್ತಿದ್ದಾರೆ. ಇನ್ಮುಂದೆ ಕ್ರಮವಾಗಿ 2.14 ರೂ. ಮತ್ತು 1.51 ರೂ. ಕಮಿಷನ್ ನೀಡಬೇಕೆಂಬುದು ಪೆಟ್ರೋಲ್ ಬಂಕ್ ಮಾಲೀಕರ ಒತ್ತಾಯ.
ಸರ್ಕಾರ ಬೇಡಿಕೆಗೆ ಸ್ಪಂದಿಸಿದರೆ, ಕಮಿಷನ್ ಹೊರೆ ನೇರವಾಗಿ ಗ್ರಾಹಕರ ಮೇಲೆ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.
ಬೇಡಿಕೆ ಈಡೇರಿಕೆಗಾಗಿ ಏ.13ರಂದು ಒಂದು ದಿನದ ಮುಷ್ಕರ, ಏ.28ರಿಂದ ಅನಿರ್ದಿಷ್ಟ ಕಾಲದ ಮುಷ್ಕರ ನಡೆಸಲು ಪೆಟ್ರೋಲ್ ಬಂಕ್ ಮಾಲೀಕರು ಈ ಮೊದಲು ನಿರ್ಧರಿಸಿದ್ದರು.
(ಏಜನ್ಸೀಸ್)











Click it and Unblock the Notifications