ಮಳೆ ಬಂತು ಮಳೆ : ಸುಡುವ ಕಾವಲಿ ಮೇಲೆ ನಾಲ್ಕು ಹನಿ!
ಬೆಂಗಳೂರು : ಸುಟ್ಟು ಕೆಂಡವಾಗಿದ್ದ ನೆಲಕ್ಕೆ ನಾಲ್ಕು ಹನಿ ಬಿದ್ದಿವೆ. ಹವಾನಿಯಂತ್ರಿತ ನಗರಿ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರು ಸಹಾ ಈ ಸಲ ಬಿಸಿಲ ಬೇಗೆಯಿಂದ ಬಾಡಿ ಬಳಲಿತ್ತು.
ಗುರುವಾರ ರಾತ್ರಿ ವರುಣ ದೇವ ಚೂರೇ ಚೂರು ದಯೆ ತೋರಿಸಿದ್ದ! ಬೆಂಗಳೂರು ಜನ ಮಳೆಗೆ ಮೈಯಾಡ್ಡುತ್ತಿದ್ದಂತೆಯೇ, ವರುಣ ದೇವ ಮಂಗಮಾಯ! ಕೆಲವೆಡೆ ಜೋರು ಮಳೆ, ಕೆಲವೆಡೆ ನಾಲ್ಕೇ ನಾಲ್ಕು ಹನಿ -ಹೀಗೆ ಬೆಂಗಳೂರು ಜನ ಬೇಸಿಗೆ ಮಳೆಗೆ ಸಾಕ್ಷಿಯಾದರು.
ರಾಜಧಾನಿ ಮಾತ್ರವಲ್ಲದೇ ರಾಜ್ಯದ ಮೈಸೂರು, ತುಮಕೂರು, ಮಂಡ್ಯ, ಮಡಿಕೇರಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಿಜಾಪುರ ಮತ್ತಿತರ ಜಿಲ್ಲೆಗಳಲ್ಲಿ ಮಳೆಯಾಗಿದೆ. ಬಳ್ಳಾರಿ ಜಿಲ್ಲೆಯ ಹನೂರು, ಗಂಗಾವತಿಯಲ್ಲಿ ಮಳೆಯಲ್ಲಿ ಆಲಿಕಲ್ಲು ಬಿದ್ದಿವೆ.
ಸಿಡಿಲು ಹೊಡೆದು ಮದ್ದೂರು ತಾಲೂಕಿನಲ್ಲಿ ಮೂವರು, ಬಿಜಾಪುರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications